ವಿಜಯಪುರ(ಜು.11) ಚುನಾವಣೆ ಮುಗಿದ ಮೇಲೆ ಮಾಜಿ ಸಿಎಂ ಆಗಿರುವ ಸಿದ್ದರಾಮಯ್ಯಗೆ ಬುದ್ಧಿ ಬಂದಿದೆ. ಧರ್ಮ ಒಡೆಯಲು ಹೋಗಿದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾಗಿದೆ ಎಂದು ರಂಭಾಪುರಿ ಶ್ರೀ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಮಾತನಾಡಿ,  ಈ ಬುದ್ಧಿ ಚುನಾವಣೆ ಪೂರ್ವದಲ್ಲಿಯೇ ಬರಬೇಕಿತ್ತು , ಈಗ ತಡವಾಗಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕ ಕೊಡುಗೆ ನೀಡಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಧ್ವನಿ ಕೇಳುತ್ತಿದೆ. ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದಿರೂ ಇನ್ನು ಚರ್ಚೆ ಮಾಡುವ ಹಂತದಲ್ಲೇ ಇದ್ದಾರೆ ಎಂದು ಟೀಕಿಸಿದರು.

ಅಧಿವೇಶನದಲ್ಲಿ ಕೇವಲ ವಾದ ವಿವಾದ ನಡೆಯುತ್ತಿದೆ. ಜಿಲ್ಲೆಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಬಾರದು. ಉತ್ತರ ಕರ್ನಾಟಕದ ರೈತರು ಕಷ್ಟದಲ್ಲಿದ್ದಾರೆ ಎಂದರು. ಯಾವುದೆ ಸರಕಾರವಾದರೂ ಅಭಿವೃದ್ಧಿ ಪರವಾಗಿ ಕೆಲಸ ಮಾಡಬೇಕು. ಜಾತಿ ಆಧಾರದಲ್ಲಿ ಲೆಕ್ಕ ಹಾಕಿ ಕುಳಿತುಕೊಂಡರೆ ರಾಜ್ಯ ಪ್ರಗತಿಯ ಕಡೆ ಸಾಗಲು ಸಾಧ್ಯವಿಲ್ಲ ಎಂದು ಹೇಳಿದರು.