Asianet Suvarna News Asianet Suvarna News

ರಾಹುಲ್ ಅಯೋಗ್ಯ, ಪ್ರಧಾನಿ ಆಗ್ಬಾರ್ದು: ಯತ್ನಾಳ್!

ರಾಹುಲ್ ಗಾಂಧಿ ಓರ್ವ ನಕಲಿ ಬ್ರಾಹ್ಮಣ! ಚುನಾವಣೆ ವೇಳೆ ರಾಹುಲ್ ಗೆ ದೇವರ ನೆನಪಾಗುತ್ತೆ! ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ! ರಾಹುಲ್ ಅವರಂತ ಅಯೋಗ್ಯ ಫ್ರಧಾನಿಯಾಗಬಾರದು 
 

ವಿಜಯಪುರ(ಸೆ.1): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಓರ್ವ ನಕಲಿ ಬ್ರಾಹ್ಮಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೇ ರಾಹುಲ್ ಗಾಂಧಿ ಅವರಿಗೆ ದೇವರ ನೆನಪಾಗುತ್ತದೆ. ಇದೇ ಕಾರಣಕ್ಕೆ ತಾವೊಬ್ಬ ಜನಿವಾರ ಹಾಕಿಕೊಂಡಿರುವ ಬ್ರಾಹ್ಮಣ ಎಂದು ಹೋದಲ್ಲಿ ಬಂದಲ್ಲಿ ಹೆಳುತ್ತಾರೆ ಎಂದು ಯತ್ನಾಳ್ ಕಿಡಿಕಾರಿದರು.

ರಾಹುಲ್ ಗಾಂಧಿಗೆ ಚೀನಾ ಮತ್ತು ಪಾಕಿಸ್ತಾನದಲ್ಲಿ ಏಜೆಂಟ್ ಗಳಿದ್ದು, ಇಂತಹ ವ್ಯಕ್ತಿ ದೇಶದ ಪ್ರಧಾನಿಯಾಗಬಾರದು ಎಂದು ಯತ್ನಾಳ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಕರೆಯದಿದ್ದರೂ ರಾಹುಲ್ ಅಲ್ಲಿಗೆ ಹೋಗಿ ಭಾರತದ ವಿರುದ್ದ ಷಡ್ಯಂತ್ರ ಹೂಡುತ್ತಾರೆ ಎಂದು ಹೇಳಿರುವ ಅವರು, ಇಂತಹ ಅಯೋಗ್ಯ ಈ ದೇಶದ ಪ್ರಧಾನಿಯಾದರೆ ಅದೊಂದು ದುರಂತ ಎಂದು ಅಭಿಪ್ರಾಯಪಟ್ಟರು.

ಇನ್ನು ಸದ್ಯದ ವಿಧಾನ ಪರಿಷತ್ ಉಪಚುನಾವಣೆ ಮುಂದಿನ ಲೋಕಸಭೆಯ ಚುನಾವಣೆಯ ದಿಕ್ಸೂಚಿ ಎಂದಿರುವ ಯತ್ನಾಳ್,  ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.