Asianet Suvarna News Asianet Suvarna News

ಗದಗ: ಮಾ. 3ರಂದು ಪುಟ್ಟರಾಜ ಗವಾಯಿಗಳವರ ಜಯಂತ್ಯುತ್ಸವ

ಡಾ. ಪಂ. ಪುಟ್ಟರಾಜ ಗವಾಯಿಗಳವರ 106ನೇ ಜಯಂತ್ಯುತ್ಸವ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಸಮಾರಂಭ| ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷೆ ವಿ.ವಿ. ಹಿರೇಮಠ ಮಾಹಿತಿ|

Puttaraj Gavayi Jayanti Will Be Held on March 3rd in Gadag
Author
Bengaluru, First Published Feb 28, 2020, 8:06 AM IST

ಗದಗ(ಫೆ.28): ಡಾ. ವಿ.ಬಿ. ಹಿರೇಮಠ ಮೆಮೋರಿಯಲ್‌ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾ. 3 ರ ಬೆಳಗ್ಗೆ 10.30ಕ್ಕೆ ನಗರದ ಮುಳಗುಂದ ನಾಕಾ ಬಳಿ ಇರುವ ಅಡವೇಂದ್ರಸ್ವಾಮಿ ಮಠದಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳವರ 106ನೇ ಜಯಂತ್ಯುತ್ಸವ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ವಿ.ವಿ. ಹಿರೇಮಠ ಹೇಳಿದ್ದಾರೆ.

ಅವರು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾನ್ನಿಧ್ಯವನ್ನು ಭೈರನಹಟ್ಟಿದೊರೆಸ್ವಾಮಿ ವಿರಕ್ತಮಠ ಶಾಂತಲಿಂಗ ಶ್ರೀಗಳು, ನರಸಾಪುರ ಅನ್ನದಾನೀಶ್ವರ ಶಾಖಾ ಮಠದ ವೀರೇಶ್ವರ ಶ್ರೀಗಳು ವಹಿಸುವರು. ಅಡವೇಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರಸ್ವಾಮಿ ಹೊಸಳ್ಳಿಮಠ ಸಮ್ಮುಖ ವಹಿಸುವರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪಂ. ರಾಜಗುರು ಗುರುಸ್ವಾಮಿ ಕಲಕೇರಿ ವಹಿಸುವರು. ದೂರದರ್ಶನದ ವಿಶ್ರಾಂತ ಮಹಾ ನಿರ್ದೇಶಕ ನಾಡೋಜ ಡಾ. ಮಹೇಶ ಜೋಶಿ ಉದ್ಘಾಟಿಸುವರು. ಅತಿಥಿಗಳಾಗಿ ಜಿಪಂ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶರಣು ಗೋಗೇರಿ ಆಗಮಿಸುವರು.

ಶ್ರೀಗುರು ಪಂಡಿತ ಪುಟ್ಟರಾಜ ಸಾಹಿತ್ಯಚೇತನ ಹಾಗೂ ಗಾನಕೋಗಿಲೆ ಪ್ರಶಸ್ತಿಗಳನ್ನು 51 ಜನರಿಗೆ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಪುಟ್ಟರಾಜಸ್ವಾಮಿ ಹಿರೇಮಠ, ರೇಮಶ ಹತ್ತಿಕಾಳ ಮುಂತಾದವರು ಹಾಜರಿದ್ದರು. 
 

Follow Us:
Download App:
  • android
  • ios