ಮಡಿಕೇರಿ-ಮಂಗಳೂರು ರಸ್ತೆ ಬಂದ್: ಪರ್ಯಾಯ ಮಾರ್ಗ ಹೇಗೆ?
ಮಡಿಕೇರಿ - ಮಂಗಳೂರು ಹೆದ್ದಾರಿ ಬಂದ್! ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತ! ಪರ್ಯಾಯ ಮಾರ್ಗ ಮೂಲಕ ಬಸ್ ಸಂಚಾರ ಆರಂಭ! ಇಂದು ರಸ್ತೆಗಿಳಿದ ಐದು ಕೆಎಸ್ಆರ್‌ಟಿಸಿ ಬಸ್! ಭಾಗಮಂಡಲ, ಕರಿಕೆ, ಪಾಣತ್ತೂರು ಮೂಲಕ ಸುಳ್ಯದತ್ತ ಸಂಚಾರ
ಮಡಿಕೇರಿ[ಆ.೨೩]: ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಿದೆ. ಈ ನಿಟ್ಟಿನಲ್ಲಿ ಕಳೆದ ಹತ್ತು ದಿನಗಳಿಂದ ಪ್ರಯಾಣಿಕರು ಬಸ್ಗಳಿಲ್ಲದೇ ಪರದಾಡುತ್ತಿದ್ರು. ಆದ್ರಿಂದು ಮಳೆ ಇಲ್ಲದ ಕಾರಣ ಬಸ್ ಸಂಚಾರ ಆರಂಭವಾಗಿದ್ದು, ಪರ್ಯಾಯ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ಗಳು ಭಾಗಮಂಡಲ, ಕರಿಕೆ, ಪಾಣತ್ತೂರು, ಚಾರ್ಮಾಡಿ, ಮೂಲಕ ಸುಳ್ಯದತ್ತ ಸಂಚಾರ ಆರಂಭಿಸಿವೆ.
ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...