ಬಳ್ಳಾರಿ ಪೊಲೀಸ್ ಇಲಾಖೆಯ ವೈರ್ ಲೆಸ್ ವಿಭಾಗದ ಪಿಎಸ್ಐ ಕಿರಣ್ ಸಾಮ್ರಾಟ್, ಪೇದೆ ಪತ್ನಿಯೊಂದಿಗೆ  ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು.  ಇಬ್ಬರ ಮಧ್ಯೆ ಇತ್ತೀಚಿಗೆ ಸಣ್ಣ ಮಟ್ಟದ ಮನಸ್ತಾಪವಾಗಿದೆ. ಹೀಗಾಗಿ ಪಿಎಸ್ಐ ಕಿರಣ್ ಸಾಮ್ರಾಟ್ ತನ್ನ ಮನೆಯಲ್ಲಿ 2 ದಿನ ಪೇದೆ ಪತ್ನಿಯನ್ನು ಇಟ್ಟುಕೊಂಡು ಸಮಾಧಾನಪಡಿಸಲು ಯತ್ನಿಸಿದ್ದಾರೆ.

ಪಿಎಸ್ ಐ ಪೇದೆ ಪತ್ನಿಯೊಂದಿಗೆ ಕುಡಿದು ಸಿಗರೇಟ್ ಸೇದಿ ಮನೆ ತುಂಬಾ ಬಿಸಾಡಿದ್ದಾರೆ. ಈ ವೇಳೆ ಅಕ್ರಮ ಸಂಬಂಧದ ವಿಚಾರವಾಗೇ ಇಬ್ಬರ ನಡುವೆ ಜಗಳವಾಗಿ ಮನೆಯಲ್ಲಿದ್ದ ಪೀಠೋಪಕರಣಕ್ಕೆ ಬೆಂಕಿ ಇಟ್ಟಿದ್ದಾರೆ. 
ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿವೆ.

ಇಬ್ಬರ ಅನೈತಿಕ ಸಂಬಂಧ ಕುರಿತು ಗಲಾಟೆ ಪರಿಣಾಮ ಪೊಲೀಸ್ ಕ್ವಾಟ್ರಸ್ಗೆ ಬೆಂಕಿ ಹೊತ್ತಿಕೊಂಡಿದೆ. ಸರ್ಕಾರಿ ಆಸ್ತಿ ಹಾನಿ ಮಾಡಿದ್ದಾರೆ ಎಂದು ಡಿಎಆರ್ ಪಿಎಸ್ ಐ ಸರ್ದಾರ್ ದೂರು ಮೇರೆಗೆ ಪ್ರಕರಣ  ದಾಖಲಿಸಿಕೊಂಡು ಇಬ್ಬರನ್ನೂ ಜೈಲಿಗೆ ಕಳಿಹಿಸಲಾಗಿದೆ.