Crime News Mysuru : ವೈಷಮ್ಯದಿಂದ ಕುಡಿದ ಮತ್ತಿನಲ್ಲಿ ಮಗನನ್ನೇ ಕೊಂದ ತಂದೆ
- ಆಸ್ತಿ ವಿಚಾರದ ವೈಷಮ್ಯಕ್ಕೆ ತಂದೆ, ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ
- ಕುಡಿದ ಮತ್ತಿನಲ್ಲಿ ತಂದೆಯೇ ಮಗನನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ
ಸರಗೂರು (ಡಿ.13): ಆಸ್ತಿ ವಿಚಾರದ ವೈಷಮ್ಯಕ್ಕೆ ತಂದೆ (Father), ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ (Murder) ಅಂತ್ಯ ಕಂಡಿದ್ದು, ಕುಡಿದ ಮತ್ತಿನಲ್ಲಿ ತಂದೆಯೇ ಮಗನನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಹಾದನೂರು ಗ್ರಾಮದಲ್ಲಿ ನಡೆದಿದೆ. ಸ್ವಾಮಿ ಉರುಫ್ ಚಲುವರಾಜು (32) ಹತ್ಯೆಗೀಡಾಗಿದ್ದು, ತಂದೆ ಸಿದ್ದರಾಜು ಕಂಠಪೂರ್ತಿ ಕುಡಿದು ಬಂದು ಬೆಳೆದು ನಿಂತಿರುವ ತನ್ನ ಮಗನನ್ನೆ ನಿರ್ಬಯವಾಗಿ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ನಂತರ ಜಮೀನು ವಿಚಾರವಾಗಿ ತಾನೇ ಮಗನನ್ನು (Son) ಕೊಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಘಟನೆ: ಗುರುವಾರ ರಾತ್ರಿ 9ರ ಸಮಯದಲ್ಲಿ ಮನೆಯಲ್ಲಿ ತಂದೆ ಮತ್ತು ಮಗ ಇಬ್ಬರ ನಡುವೆ ಜಮೀನು, ಹಣಕಾಸು (money) ವಿಚಾರಕ್ಕೆ ಜಗಳ ನಡೆದಿದೆ. ನಂತರ ತಂದೆ ಸಿದ್ದರಾಜು ಪಕ್ಕದಲ್ಲಿ ಇದ್ದ ಮರದ ಹಲಗೆಯಿಂದ ಮಗನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಸ್ವಾಮಿ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತ ಪಟ್ಟಿರುವುದು ಶುಕ್ರವಾರ ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿದ ಗ್ರಾಮಸ್ಥರು ಸರಗೂರು ಪೊಲೀಸರಿಗೆ (Police) ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ನಂತರ ಸಿದ್ದರಾಜು ಶವವನ್ನು ಎಚ್.ಡಿ. ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ (Hospital) ಮರಣೋತ್ತರ ಪರೀಕ್ಷೆ ನಡೆಸಿದ್ದು, ವಾರಸುದಾರರಿಗೆ ಒಪ್ಪಿಸಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಕ್ಷುಲಕ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ಕೊಲೆ
ಕ್ಷುಲಕ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಸರಸ್ವತಿಪುರಂ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಕೊತ್ತೆಗಾಲ ಗ್ರಾಮದ ರವಿ ಹಾಗೂ ಕೃಷ್ಣ ಅವರೆ ಕೊಲೆಯಾದವರು.
ಶನಿವಾರ ಸಂಜೆ ಕೆಲಸ ಮುಗಿಸಿದ ಬಳಿಕ ವರ್ತುಲ ರಸ್ತೆ ಸಮೀಪದ ಬಾರ್ಗೆ (Bar) ತೆರಳಿದ ಇಬ್ಬರು ಕಂಠಪೂರ್ತಿ ಕುಡಿದಿದ್ದಾರೆ. ಈ ವೇಏಳೆ ಇವರಿಗೆ ಪರಿಚಯವಿದ್ದ ಮತ್ತಿಬ್ಬರು ಜತೆಗೂಡಿದ್ದು, ಎಲ್ಲರೂ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಈ ವೇಳೆ ಹಣಕಾಸಿನ (Money) ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಇಬ್ಬರು ಸೇರಿಕೊಂಡು ಸಮೀಪದಲ್ಲೇ ಇದ್ದ ರಾಡಿನಿಂದ ರವಿ ಹಾಗೂ ಕೃಷ್ಣ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಗೊಳಗಾದ ರವಿ ಹಾಗೂ ಕೃಷ್ಣ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ವೇಳೆ ಬಾರ್ ನಲ್ಲಿದ್ದ ಕೆಲವರು ಕೂಡಲೇ ಹಲ್ಲೆ ಮಾಡಿದವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಮಿಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು, ಶವಗಳನ್ನು ಕೆ.ಆರ್. ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಆದರೆ ಆರೋಪಿಗಳ ಹೆಸರು ಮತ್ತು ಇತರೆ ಮಾಹಿತಿಯನು ಪೊಲೀಸರು ಬಹಿರಂಗಪಡಿಸಿಲ್ಲ.
ಭಾನುವಾರ ಬೆಳಗ್ಗೆ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಪ್ರಕರಣ ಕುರಿತು ಸರಸ್ವತಿಪುರಂ ಠಾಣೆ ಪೊಲೀಸರು ತನಿಖೆ ಮುಂದುವರಿದಿದೆ.
- ಆಸ್ತಿ ವಿಚಾರದ ವೈಷಮ್ಯಕ್ಕೆ ತಂದೆ, ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ
- ಕುಡಿದ ಮತ್ತಿನಲ್ಲಿ ತಂದೆಯೇ ಮಗನನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ
- ಕಂಠಪೂರ್ತಿ ಕುಡಿದು ಬಂದು ಬೆಳೆದು ನಿಂತಿರುವ ತನ್ನ ಮಗನನ್ನೆ ನಿರ್ಬಯವಾಗಿ ಹತ್ಯೆ
- ತಾನೇ ಮಗನನ್ನು ಕೊಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ
- ತಾನೇ ಮಗನನ್ನು ಕೊಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ