Asianet Suvarna News Asianet Suvarna News

ಮುಂಗಾರಿನಲ್ಲಿ ಕೊಡಗಿನಲ್ಲಿ 35 ಲಕ್ಷ ಮೀನು ಮರಿ ಬಿತ್ತನೆಗೆ ಸಿದ್ಧತೆ

ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ವಿವಿಧ ಕೃಷಿ ಚಟುವಟಿಕೆಯಲ್ಲಿ ಕೃಷಿಕರು ಮಗ್ನರಾಗಿದ್ದಾರೆ. ಒಂದೆಡೆ ಭತ್ತ, ಮುಸುಕಿನ ಜೋಳ ಕೃಷಿಗೆ ರೈತರು ಸಿದ್ಧತೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ತಮಗಿರುವ ಕೃಷಿ ಹೊಂಡಗಳಲ್ಲಿ ಮುಂಗಾರಿನಲ್ಲಿ ಮೀನು ಮರಿಗಳ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರಿನಲ್ಲಿ ಸುಮಾರು 35 ಲಕ್ಷ ಮೀನು ಮರಿಗಳ ಬಿತ್ತನೆ ಮಾಡಲಾಗುತ್ತಿದೆ.

preparation done for fish farming in madikeri
Author
Bangalore, First Published Jun 17, 2020, 9:21 AM IST

ಮಡಿಕೇರಿ(ಜೂ.17): ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ವಿವಿಧ ಕೃಷಿ ಚಟುವಟಿಕೆಯಲ್ಲಿ ಕೃಷಿಕರು ಮಗ್ನರಾಗಿದ್ದಾರೆ. ಒಂದೆಡೆ ಭತ್ತ, ಮುಸುಕಿನ ಜೋಳ ಕೃಷಿಗೆ ರೈತರು ಸಿದ್ಧತೆ ಮಾಡಿಕೊಂಡಿದ್ದರೆ, ಮತ್ತೊಂದೆಡೆ ತಮಗಿರುವ ಕೃಷಿ ಹೊಂಡಗಳಲ್ಲಿ ಮುಂಗಾರಿನಲ್ಲಿ ಮೀನು ಮರಿಗಳ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರಿನಲ್ಲಿ ಸುಮಾರು 35 ಲಕ್ಷ ಮೀನು ಮರಿಗಳ ಬಿತ್ತನೆ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳಿದ್ದು, ಇದರಲ್ಲಿ ಮೀನು ಮರಿಗಳನ್ನು ಬಿತ್ತನೆ ಮಾಡುವ ಮೂಲಕ ಕೃಷಿಕರು ಆದಾಯ ಗಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೀನು ಕೃಷಿಯತ್ತ ಜಿಲ್ಲೆಯ ಕೃಷಿಕರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಕಾಫಿ ತೋಟಗಳಲ್ಲಿ ನೀರಿಗಾಗಿ ಕೆರೆ ಹೊಂಡಗಳನ್ನು ಮಾಡಿಕೊಂಡಿದ್ದು, ಅದನ್ನು ಮೀನು ಕೃಷಿಗಾಗಿ ಈಗ ಬಳಸಿಕೊಳ್ಳುತ್ತಿದ್ದಾರೆ. ಮೀನು ಕೃಷಿಯ ನಿರ್ವಹಣೆಯೂ ಸುಲಭವಾಗಿರುವುದರಿಂದ ಇದರತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

ತೆರಿಗೆ ಭಾರಿ ಏರಿಕೆ: ಕಾಂಗ್ರೆಸ್‌ನಿಂದ ಹೋರಾಟದ ಎಚ್ಚರಿಕೆ

ಹಾರಂಗಿ ಜಲಾಶಯದಲ್ಲಿ ಮೀನುಗಾರಿಕೆ ಇಲಾಖೆಯಿಂದ ಕಾಟ್ಲಾ, ರೋಹು, ಮ್ರಿಗಲ್‌, ಸಾಮಾನ್ಯ ಗೆಂಡೆ, ಹುಲ್ಲು ಗೆಂಡೆ ತಳಿ ಮೀನು ಮರಿಗಳ ಉತ್ಪಾದನೆ ಮಾಡಲಾಗಿದೆ. ಇಲ್ಲಿ ಖಾಲಿಯಾದರೆ ಕಬಿನಿಯಿಂದಲೂ ಮೀನು ಮರಿಗಳನ್ನು ತಂದು ಕೊಡಗಿನ ಮೀನು ಕೃಷಿಕರಿಗೆ ವಿತರಣೆ ಮಾಡಲಾಗುತ್ತದೆ.

ಅಸ್ಸಾಂ, ಮಿಜೋರಾಂ, ಮಣಿಪುರಂ ಈ ಭಾಗಗಳಲ್ಲಿ ಮೀನು ಸಾಕಾಣಿಕೆ ಮಾಡುವಂತೆ ಕೊಡಗಿನಲ್ಲೂ ಮಾಡಲಾಗುತ್ತಿದೆ. ಸಣ್ಣ ಸಣ್ಣ ಕೆರೆಗಳಲ್ಲಿ ಮೀನು ಸಾಕಣಿಕೆಯಲ್ಲಿ ಇಲ್ಲಿನ ಕೃಷಿಕರು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಮೀನು ಮರಿಗಳ ಬಿತ್ತನೆಗೆ ಸೂಕ್ತ ಸಮಿಯವಾಗಿದೆ. ಆದ್ದರಿಂದ ಮೀನುಗಾರಿಕೆ ಇಲಾಖೆಯಿಂದ ಕಾಟ್ಲಾ, ರೋಹು, ಮ್ರಿಗಲ್‌, ಸಾಮಾನ್ಯ ಗೆಂಡೆ, ಹುಲ್ಲು ಗೆಂಡೆ ತಳಿಯ ಮೀನು ಮರಿಗಳನ್ನು ಜೂನ್‌ ಅಂತ್ಯದಲ್ಲಿ ವಿತರಣೆ ಮಾಡಲು ಮೀನುಗಾರಿಕೆ ಇಲಾಖೆ ಮುಂದಾಗಿದೆ.

ಉಳ್ಳಾಲದಲ್ಲಿ ಹೆಚ್ಚಿದ ಕಡಲ್ಕೊರೆತ: ಮನೆ ಸಮುದ್ರಪಾಲು, ಇಲ್ಲಿವೆ ಫೋಟೋಸ್

ವಿವಿಧ ತಳಿಯ ಒಂದು ಸಾವಿರ ಮೀನು ಮರಿಗಳಿಗೆ ಮೀನುಗಾರಿಕೆ ಇಲಾಖೆಯಲ್ಲಿ 258 ರಿಂದ 400 ರುಪಾಯಿ ವರೆಗೆ ಬೆಲೆಯಿದೆ. ಮೀನು ಮರಿಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮತ್ತಷ್ಟುಮೀನು ಮರಿಗಳನ್ನು ವಿತರಣೆ ಮಾಡಲಾಗುವುದು. ಈ ಬಾರಿ ಇಲಾಖೆಯಿಂದ 35 ಲಕ್ಷ ಮೀನು ಮರಿಗಳನ್ನು ವಿತರಣೆ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಸಿಲು ಬರುವವರೆಗೆ ಮರಿಗಳನ್ನು ವಿತರಣೆ ಮಾಡಲಾಗುವುದು ಎಂದು ಮೀನುಗಾರಿಕೆಯ ಉಪ ನಿರ್ದೇಶಕಿ ದರ್ಶನ್‌ ಹೇಳುತ್ತಾರೆ.

ಖಾಸಗಿಯವರಿಂದಲೂ ಖರೀದಿ: ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳ ವಿತರಣೆ ಜೂನ್‌ ಅಂತ್ಯದಿಂದ ಆರಂಭವಾಗಲಿದೆ. ಇದೀಗ ಮುಂಗಾರು ಶುರುವಾಗಿರುವುದರಿಂದ ಕೆಲವು ಮೀನು ಕೃಷಿಕರು ಖಾಸಗಿಯವರಿಂದಲೂ ಮೀನು ಮರಿಗಳನ್ನು ಖರೀದಿಸಿ ತಮ್ಮ ಕೆರೆಗಳಲ್ಲಿ ಬಿತ್ತನೆ ಮಾಡಿದ್ದಾರೆ. ಅಮ್ಮತ್ತಿ ಸಮೀಪ ಖ್ಯಾತ ರಾರ‍ಯಲಿ ಪಟು ಮಾಳೇಟಿರ ಜಗತ್‌ ನಂಜಪ್ಪ ಅವರು ತಮ್ಮ ಕೆರೆಯಲ್ಲಿ ತಮ್ಮ ಕೆರೆಯಲ್ಲಿ ಒಂದು ಸಾವಿರಕ್ಕೂ ಅಧಿ​ಕ ಮೀನು ಮರಿಗಳನ್ನು ಬಿಟ್ಟು ಕೃಷಿಯಲ್ಲಿ ತೊಡಗಿದ್ದಾರೆ.

 

ಕೊಡಗಿನಲ್ಲಿ ಮೀನಿಗೆ ಬೇಡಿಕೆ: ಲಾಕ್‌ಡೌನ್‌ ಅವ​ಧಿಯಲ್ಲಿ ರಾಜ್ಯದಲ್ಲಿ ಮೀನು ಮಾರಾಟದ ಪಟ್ಟಿಯಲ್ಲಿ ಕೊಡಗು ಜಿಲ್ಲೆ ಟಾಪ್‌ 10ನಲ್ಲಿ ಸ್ಥಾನ ಪಡೆದುಕೊಂಡಿತ್ತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿತ್ತು. ಆದರೆ ಲಾಕ್‌ಡೌನ್‌ ಅವ​ಧಿಯಲ್ಲಿ ಸಮುದ್ರದಲ್ಲಿ ಮೀನು ಹಿಡಿಯಲಾಗುತ್ತಿರಲಿಲ್ಲ. ಈ ಕಾರಣ ಕೊಡಗು ಜಿಲ್ಲೆ ಮೀನು ಮಾರಾಟದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿತ್ತು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ದರ್ಶನ್‌ ಹೇಳುತ್ತಾರೆ.

ಹೆಬ್ಬಾವಿನ ಮರಿ ರಕ್ಷಿಸಿದ ಪೇಜಾವರ ಶ್ರೀ

ಕೊಡಗು ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಈ ಬಾರಿ 35 ಲಕ್ಷ ಮೀನು ಮರಿಗಳನ್ನು ಕೃಷಿಕರಿಗೆ ವಿತರಣೆ ಮಾಡಲಾಗುತ್ತದೆ. ಖಾಸಗಿಯಾಗಿಯೂ ಕೃಷಿಕರು ಇತರೆ ಕಡೆಗಳಲ್ಲಿ ಖರೀದಿಸಿ ಮೀನು ಕೃಷಿ ಮಾಡುತ್ತಾರೆ. ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿ​ಕ ಕೃಷಿ ಹೊಂಡಗಳಿದ್ದು, ಈಗ ಎಲ್ಲರೂ ಕೃಷಿಯಲ್ಲಿ ತೊಡಗಿದ್ದಾರೆ. ಹಾರಂಗಿಯಲ್ಲಿ ಮೀನು ಮರಿಗಳ ಉತ್ಪಾದನೆ ಮಾಡಲಾಗಿದ್ದು, ಜೂನ್‌ ಅಂತ್ಯದಲ್ಲಿ ಮೀನು ಮರಿಗಳನ್ನು ಕೃಷಿಕರಿಗೆ ವಿತರಣೆ ಮಾಡಲಾವುದು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಟಿ. ದರ್ಶನ್‌ ಹೇಳಿದ್ದಾರೆ.

ಗುಹ್ಯ ಗ್ರಾಮದ ಪಟ್ಟಡ ಶ್ಯಾಮ್‌ ಅಯ್ಯಪ್ಪ ಅವರಿಂದ ರೋಹು, ಕಾಟ್ಲಾ, ಸಾಮಾನ್ಯ ಗೆಂಡೆ ತಳಿಯನ್ನು ದೊಡ್ಡ ಗಾತ್ರದ ಮೀನು ಮರಿಗಳನ್ನು ಖರೀದಿಸಿ ತೋಟದಲ್ಲಿ ಒಂದು ಕೆರೆಯಲ್ಲಿ ಬಿಟ್ಟಿದ್ದೇವೆ. ಮೂರು ತಿಂಗಳು ಆಹಾರ ನೀಡಬೇಕು ಎಂದು ಖ್ಯಾತ ರ್ಯಾಲಿ ಪಟು ಅಮ್ಮತ್ತಿ ಮಾಳೇಟಿರ ಜಗತ್‌ ತಿಳಿಸಿದ್ದಾರೆ.

Follow Us:
Download App:
  • android
  • ios