ಕಲಬುರಗಿ (ಫೆ. 18): ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾನೆಂಬ ಕಾರಣಕ್ಕೆ "ಪಾಕಿಸ್ತಾನ ಅಹ್ಮದ್ ಇಸಾ" ಪಂಥದ ಪ್ರಚಾರಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 

ಉತ್ತರ ಪ್ರದೇಶ ಗಾಜಿಯಾಬಾದನ ಜಲಾಲ (30) ಎನ್ನುವ ಧರ್ಮ ಪ್ರಚಾರಕನನ್ನು ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

ಈತ ಕಳೆದ ಐದಾರು ತಿಂಗಳಿಂದ ಕಲಬುರಗಿಯಲ್ಲಿ ಇಸ್ಲಾಂ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ.  ಮೊಹ್ಮದ್ ಪೈಗಂಬರ್ ಹಾಗೂ ಕುರಾನ್ ಬಗ್ಗೆ ಅವಹೇಳಕಾರಿಯಾಗಿ ಪ್ರಚಾರ ಮಾಡುತ್ತಿದ್ದ ಎಂಬ ಆರೋಪದ ಮೇಲೆ ಕೊಲೆ ಮಾಡಲಾಗಿದೆ. 

ಶಿಯಾ ಮತ್ತು ಸುನ್ನಿ ಪಂಗಡದ ಯುವಕರಿಂದ ನಿನ್ನೆ ಕೊಲೆ ನಡೆದಿದೆ.  ಕೊಲೆಗೈದ 14 ಜನ ಯುವಕರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.  ಕಲಬುರಗಿಯಲ್ಲಿ ಪಾಕ್ ಧರ್ಮ ಪ್ರಚಾರ ಮಾಡದಂತೆ ಮುಸ್ಲಿಂ ಯುವಕರು ಎಚ್ಚರಿಕೆ ನೀಡಿದ್ದರು. ಆದರೂ ಆತ ಪ್ರಚಾರ ಮುಂದುವರೆಸಿದಾಗ ಆತನನ್ನು ಹತ್ಯೆಗೈದಿದ್ದಾರೆ.