Asianet Suvarna News Asianet Suvarna News

'ಮಂಗಳೂರು ಬಾಂಬರ್‌ ವಿಚಾರದಲ್ಲಿ ರಾಜಕೀಯ ಮಾಡೋದು ಹೇಯ ಕೃತ್ಯ'

ಕುಮಾರಸ್ವಾಮಿ ಮಾತನಾಡಿರುವುದು ಬಹಳ ಅಸಹ್ಯ| ಕರ್ನಾಟಕಕ್ಕೆ ನಾಲಾಯಕ್ ಅಯೋಗ್ಯ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ| ಈ ರೀತಿ ಹೇಳಿಕೆ ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ ಎಂದ ಮುತಾಲಿಕ್‌| 

Pramod Mutalik Talks Over Mangaluru Airport Bomb
Author
Bengaluru, First Published Jan 23, 2020, 12:27 PM IST

ಕೊಪ್ಪಳ(ಜ.23): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಹೇಯ ಕೃತ್ಯವಾಗಿದೆ. ಅದು ಆದಿತ್ಯ ರಾವ್ ಇರಬಹುದು,ಅಬ್ದುಲ್ ಇರಬಹುದು ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಶ್ರೀರಾಮನ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಗುರುವಾರ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾರು ಮಾಡಿದ್ರೂ ಅದು ತಪ್ಪು, ಅವರಿಗೆ ಕಾನೂನು ರೀತಿ ಶಿಕ್ಷೆಯಾಗತ್ತದೆ ಎಂದು ತಿಳಿಸಿದ್ದಾರೆ. 

'ಬಾಂಬರ್‌ ಬೆಂಗಳೂರಿಗೆ ಬಂದು ಶರಣಾಗಿದ್ದೇಕೆ? ಇದೊಂದು ನಾಟಕ'

ಪೊಲೀಸ್ ಇಲಾಖೆ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಮಾತನಾಡಿರುವುದು ಬಹಳ ಅಸಹ್ಯವಾಗಿದೆ. ಕರ್ನಾಟಕಕ್ಕೆ ನಾಲಾಯಕ್ ಅಯೋಗ್ಯ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ರೀತಿ ಹೇಳಿಕೆ ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ. 

ಪೊಲೀಸರ ಮೇಲೆ ಅನುಮಾನ: HDKಯನ್ನು ಭೇಟಿಯಾದ ಮಂಗಳೂರು ಕಮಿಷನರ್

ಹಿಂದಿನ ಸರ್ಕಾರಗಳು ಭಯೋತ್ಪಾದಕರನ್ನ ಪೋಷಣೆ ಮಾಡಿವೆ. ಬಿಜೆಪಿ ಸರ್ಕಾರ ಭಯೋತ್ಪಾದಕರನ್ನ ಒದ್ದು ಒಳಗೆ ಹಾಕುತ್ತಿದೆ. ಪ್ರಧಾನಿ ಮೋದಿ ಕೆಲಸಕ್ಕೆ ವಿರೋಧ ಮಾಡೋದು ವಿಪಕ್ಷಗಳ ನಿರ್ಲಜ್ಯ ಕೆಲಸವಾಗಿದೆ. ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ನೀಚ ರಾಜಕಾರಣ ಮಾಡುತ್ತಿದೆ. ಹೋರಾಟಕ್ಕೆ ಮುಸ್ಲಿಮರನ್ನು ಎತ್ತಿ ಕಟ್ಟಿ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಕಾಂಗ್ರೆಸ್ ರಾಜಕೀಯ ನೆಲೆಗಾಗಿ ಪೌರತ್ವ ಕಾಯ್ದೆಯನ್ನ ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ. 

ಕುಮಾರಸ್ವಾಮಿ ಹೇಳಿದ್ದೇನು?

"

Follow Us:
Download App:
  • android
  • ios