Asianet Suvarna News Asianet Suvarna News

ಪೇದೆಯಿಂದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: ದೂರು

  • ಪೊಲೀಸ್‌ ಪೇದೆಯಿಂದ ಪಕ್ಕದ ಮನೆಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ
  • ಮೈಸೂರಿನ ರಾಘವೇಂದ್ರ ನಗರದಲ್ಲಿ ನಡೆದ ಘಟನೆ
  • ಮನೆಗೆ ಕಾಂಪೌಂಡ್‌ ಹಾರಿ ಹೋಗಿ, ಮಹಿಳೆ ಮೇಲೆ ಜು.13ರ ರಾತ್ರಿ ಅತ್ಯಾಚಾರಕ್ಕೆ ಯತ್ನ
Police Constable Attempt To rape On woman in Mysuru snr
Author
Bengaluru, First Published Jul 17, 2021, 11:54 AM IST

ಮೈಸೂರು (ಜು.17): ಪೊಲೀಸ್‌ ಪೇದೆಯೊಬ್ಬ ಪಕ್ಕದ ಮನೆಯ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಮೈಸೂರಿನ ರಾಘವೇಂದ್ರ ನಗರದಲ್ಲಿ ನಡೆದಿದೆ.

ಮೇಟಗಳ್ಳಿ ಠಾಣೆಯ ಪೇದೆ ಮೆಹಬೂಬ್‌ ಎಂಬವರೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದಲ್ಲದೆ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ.

ಮಂಗಳೂರು; ಸೆಲೂನ್‌ಗೆ ನುಗ್ಗಿ ಮಹಿಳೆ ಮೇಲೆ ಕೈಹಾಕಿ ಹಣ ದೋಚಿದ್ದವ ಸೆರೆ

ರಾಘವೇಂದ್ರ ನಗರದಲ್ಲಿ ವಾಸವಿರುವ ಪೇದೆ ಮೆಹಬೂಬ್‌, ಮನೆಯ ಹಿಂಬದಿಯಲ್ಲಿ ವಾಸವಿರುವ ಮಹಿಳೆಯ ಮನೆಗೆ ಕಾಂಪೌಂಡ್‌ ಹಾರಿ ಹೋಗಿ, ಮಹಿಳೆ ಮೇಲೆ ಜು.13ರ ರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. 

ಈ ವೇಳೆ ಚಾಕು ತೋರಿಸಿದ ಮಹಿಳೆ ಪೇದೆಯಿಂದ ಬಿಡಿಸಿಕೊಂಡು ಮನೆಯ ಹೊರಗೆ ಬಂದು ಸಹಾಯಕ್ಕಾಗಿ ಕೂಗಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಬರುತ್ತಿದ್ದಂತೆ ಪೇದೆ ಕಾಂಪೌಂಡ್‌ ಹಾರಿ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆ ನೀಡಿರುವ ದೂರಿನಂತೆ ನಜರಬಾದ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow Us:
Download App:
  • android
  • ios