ಹಾಸನ(ಆ.02): ಪತ್ನಿಯ ಸಹೋದರನ ಮಗಳನ್ನೇ ಪ್ರೀತಿಸುವ ನಾಟಕವಾಡಿ ವಂಚಿಸಿ ಕೊಲೆಗೈದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ವಿವಾಹಿತನಾಗಿದ್ದೂ ಯುವತಿಯನ್ನು ವಂಚಿಸಿ ಕೊಲೆ ಮಾಡಿದ್ದು, ಪೋಷಕರು ಮೃತದೇಹ ನೋಡಿ ದೂರು ದಾಖಲಿಸಿದ್ದಾರೆ. ಯುವತಿಯ ಫೋನ್‌ ಕಾಲ್ ಡೀಟೇಲ್ಸ್‌ ಆಧಾರದಲ್ಲಿ ಇದೀಗ ಕೊಲೆ ರಹಸ್ಯ ಬಯಲಾಗಿದೆ.

ಬೆಂಗಳೂರಿನ ಒರೆಯನ್ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿತ್ರಾ (23) ಎಂಬ ಯುವತಿಯನ್ನು ಪ್ರೀತಿಸುವಂತೆ ನಾಟಕ ಮಾಡಿ ಮಾವ ಶ್ರೀನಿವಾಸ್ ಕೊಲೆ ಮಾಡಿದ್ದ.

ಪತ್ನಿಯ ಸಹೋದರನ ಮಗಳನ್ನೇ ಪ್ರೀತಿಸುವಂತೆ ನಾಟಕಮಾಡಿ‌ದ ಶ್ರೀನಿವಾಸ್ ಆಕೆ ಗರ್ಭಿಣಿಯಾದಾಗ ಕೊಲೆ ಮಾಡಿದ್ದಾನೆ. ಯುವತಿ ಗರ್ಭಿಣಿ ಯಾದ ಸುದ್ದಿ ತಿಳಿದು ಆಕೆಯನ್ನ ಕುತ್ತಿಗೆ ಹಿಸುಕಿ ಕೊಲೆಗೈದಿದ್ದ. ಜುಲೈ 23 ರಂದು ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ ಬಳಿ ಮೃತದೇಹ ಪತ್ತೆಯಾಗಿತ್ತು.

ರಾಷ್ಟೀಯ ಹೆದ್ದಾರಿ 75ರ ಸಮೀಪದ ತೋಪಿನಲ್ಲಿ ಚಿತ್ರಾಳ ಮೃತದೇಹ ಎಸೆದು ಶ್ರೀನಿವಾಸ್ ಪರಾರಿಯಾಗಿದ್ದ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಮೃತದೇಹದ ಫೋಟೊ ನೋಡಿ‌ ಚಿತ್ರಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ರೌಡಿ ಲಕ್ಷ್ಮಣನ ಹತ್ಯೆ ಸೀಕ್ರೆಟ್ ಬಾಯ್ಬಿಟ್ಟ ವರ್ಷಿಣಿ; ಇದು ಲಂಡನ್‌ ಸ್ಕೆಚ್ ಕಹಾನಿ!

ಬಳಿಕ ಚಿತ್ರಾ ಮೊಬೈಲ್ ಕಾಲ್ ಡೀಟಲ್ಸ್ ಆದರಿಸಿ ಆರೋಪಿ‌ಯನ್ನು ಪೊಲೀಸರು ಬಂಧಿಸಿದ್ದಾರೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿವಾಹವಾಗಿ ಮಕ್ಕಳಿದ್ದರೂ ಚಿತ್ರಾಳ ಜೊತೆ ಪ್ರೀತಿ ಪ್ರೇಮದ ನಾಟಕವಾಗಿದ್ದ ಖತರ್ನಾಕ್ ಶ್ರೀನಿವಾಸ್‌ನನ್ನು ಹಿರಿಸಾವೆ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ