Asianet Suvarna News Asianet Suvarna News

ಬಾವಿಯಲ್ಲಿ ಪತ್ತೆಯಾಯ್ತು ಪೆಟ್ರೋಲ್ !

ಬಾವಿಯೊಂದರಲ್ಲಿ ಪೆಟ್ರೋಲ್ ಪತ್ತೆಯಾಗಿದೆ. ಅರೆರೆ ಬಾವಿಯಲ್ಲಿ ಪೆಟ್ರೋಲ್ ! ಅಚ್ಚರಿಯಾದ್ರೂ ನಿಜ. ಬಾವಿ ನೀರಲ್ಲೇ ಪೆಟ್ರೋಲ್ ಅಂಶ ಸೇರಿದೆ. ಎಲ್ಲಿ? ಇಲ್ಲಿದೆ ಮಾಹಿತಿ.

Petrol Found in Well Water in Uttara Kannada
Author
Bengaluru, First Published Dec 14, 2019, 1:14 PM IST

ಅಂಕೋಲ [ಡಿ14] : ಮನೆಯೊಂದರ ಬಾವಿಯಲ್ಲಿ ಪೆಟ್ರೋಲ್ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಆದರೆ ಇದಕ್ಕೆ ಅಸಲಿ ಕಾರಣ ಮಾತ್ರ ಬೇರೆಯೇ ಇದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ನಾಗವೇಣಿ ಆಚಾರ ಎನ್ನುವವರ ಮನೆಯಂಗಳಲ್ಲಿ ಇರುವ ಬಾವಿ ನೀರಿನಲ್ಲಿ ಪೆಟ್ರೋಲ್ ಅಂಶ ಕಂಡು ಬಂದಿದೆ.  ಬಾವಿ ನೀರು ವಾಸನೆ ಬರುತ್ತಿರುವುದನ್ನು ಗಮನಿಸಿ ಬಾವಿ ನೋಡಿದಾಗ ಬಾವಿಯ ನೀರಿನ ಮೇಲ್ಪದರಲ್ಲಿ ಪೆಟ್ರೋಲ್ ಕಂಡು ಬಂದಿದೆ. ಬಳಿಕ ನೀರನ್ನು ಬಾವಿಯಿಂದ ಎತ್ತಿ ಪರಿಶಿಲಿಸಿದಾಗ ಪೆಟ್ರೋಲ್ ಇರುವುದು ಪತ್ತೆಯಾಗಿದೆ. 

ನೀರಲ್ಲಿ ಪೆಟ್ರೋಲ್  ಅಂಶ ಸೇರಲು ಸಮೀಪ ಇರುವ ಪೆಟ್ರೋಲ್ ಬಂಕ್ ನಿಂದಾದ ಸೋರಿಕೆ ಕಾರಣ ಎನ್ನಲಾಗಿದೆ. ಈ ಬಾವಿಯಿಂದ 100ಮೀ. ಅಂತರದಲ್ಲಿ ಪಿ.ಎಸ್.ಪ್ರಭು ಎನ್ನುವವರಿಗೆ ಸೇರಿದ ಪೆಟ್ರೋಲ್ ಬಂಕ್‌ ಇದ್ದು, ಭೂಮಿಯಡಿಯಲ್ಲಿ‌ ಪೆಟ್ರೋಲ್ ಸೋರಿಕೆಯಾಗಿತ್ತು. ಈ ಪೆಟ್ರೋಲ್ ಬಾವಿ ನೀರಿನಲ್ಲಿ ಸೇರಿದೆ. 

ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬಂಪರ್ ಘೋಷಣೆ...

ಪೆಟ್ರೋಲ್ ಮಿಶ್ರಿತವಾಗಿ ಬಾವಿಯ ನೀರು ಸಂಪೂರ್ಣ ಕಲುಷಿತವಾದ ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಹಾಗೂ ಆರೋಗ್ಯ ನಿರೀಕ್ಷಕ ಪ್ರವೀಣ ನಾಯ್ಕ್ ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಕಳೆದ ಒಂದು ವಾರದಿಂದಲೂ ನೀರಿನಲ್ಲಿ ಪೆಟ್ರೋಲ್ ವಾಸನೆ ಇರುವುದರ ಬಗ್ಗೆ ಮನೆಯ ಮಾಲಿಕರಾದ ನಾಗವೇಣಿ, ನಾಗರಾಜ ಆಚಾರ್ ಪುರಸಭೆ ಮುಖ್ಯಾಧಿಕಾರಿಯವರಿಗೆ ಲಿಖಿತ ದೂರು ನೀಡಿದ್ದು, ಮನೆಯ ಎದುರಿನಲ್ಲಿರುವ ಪೆಟ್ರೋಲ್ ಪಂಪ್‌ನವರಿಗೆ ಪುರಸಭೆಯಿಂದ ನೋಟಿಸ್ ಜಾರಿಗೆ ಮಾಡಲಾಗಿದೆ.

Follow Us:
Download App:
  • android
  • ios