ಬೆಳಗಾವಿ(ಡಿ.12): ದೇಶವೇ ಬೆಚ್ಚಿ ಬೀಳಿಸಿದ ಹೈದರಾಬಾದ್‌ನ ದಿಶಾ ಅತ್ಯಾಚಾರ, ಕೊಲೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲೂ ಹೀನ ಕೃತ್ಯವೊಂದು ನಡೆದಿದೆ. ಹೌದು, ಕಾಮುಕನೊಬ್ಬ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಕಾಕತಿ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. 

"

26 ವರ್ಷದ ಸುನೀಲ್ ಬಾಳು ಬಾಳನಾಯಿಕ್ ಎಂಬ ಕಾಮುಕನೇ ಹೀನ ಕೃತ್ಯ ವ್ಯಸಗಿದ ಆರೋಪಿಯಾಗಿದ್ದಾನೆ. ಹೊಲಕ್ಕೆ ಹೋಗಿ ಆಟ ಆಡಿಸಿಕೊಂಡು ಬರುತ್ತೇನೆ ಎಂದು ಬಾಲಕಿಯನ್ನು ಕರೆದುಕೊಂಡು ಬಾಲಕಿ ಮೇಲೆ ತನ್ನ ಕಾಮತೃಶೆ ತೀರಿಸಿಕೊಂಡಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.