ಪ್ರವೀಣ್‌ ಹತ್ಯೆ: ನರಸಿಂಹರಾಜಪುರ ಬಂದ್‌ಗೆ ಜನ​ಬೆಂಬ​ಲ

ಕರಾವಳಿಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಕರೆ ನೀಡಿದ್ದ ನರಸಿಂಹರಾಜಪುರ ಬಂದ್‌ ಕರೆ ಮೇರೆಗೆ ಶುಕ್ರವಾರ ಪಟ್ಟಣದ ಅಂಗಡಿ, ಮುಂಗಟ್ಟುಗಳ ವರ್ತ​ಕರು ಬೆಂಬಲ ವ್ಯಕ್ತಪಡಿಸಿದರು

Peoples support for Narasimharajapur bandh rav

ನರಸಿಂಹರಾಜಪುರ(ಜು.30) : ಕರಾವಳಿಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಕರೆ ನೀಡಿದ್ದ ನರಸಿಂಹರಾಜಪುರ ಬಂದ್‌ ಕರೆ ಮೇರೆಗೆ ಶುಕ್ರವಾರ ಪಟ್ಟಣದ ಅಂಗಡಿ, ಮುಂಗಟ್ಟುಗಳ ವರ್ತ​ಕರು ಬೆಂಬಲ ವ್ಯಕ್ತಪಡಿಸಿದರು. ಮಧ್ಯಾಹ್ನದವರೆಗೂ ಪಟ್ಟಣದ ಎಲ್ಲ ಅಂಗಡಿ, ಹೋಟೆಲ್‌ಗಳು ಬಂದ್‌ ಆಗಿದ್ದವು. ಆದರೆ, ಸರ್ಕಾರಿ ಕಚೇರಿ, ಬ್ಯಾಂಕ್‌, ಶಾಲೆ, ಆಸ್ಪತ್ರೆ, ಮೆಡಿಕಲ್‌, ಪೆಟ್ರೋಲ್‌ ಬಂಕ್‌ ಎಂದಿನಂತೆ ತೆರೆದಿದ್ದವು. ಆಟೋ, ಬಸ್‌ಗಳ ಸಂಚಾರ ಮಾ​ಮೂ​ಲಿ​ನಂತಿತ್ತು. ಖಾಸಗಿ ವಾಹನಗಳು ಸಹ ಓಡಾಟ ನಡೆಸಿದವು. ಆದರೆ, ಜನರ ಸಂಖ್ಯೆ ಕಡಿಮೆ ಇತ್ತು.

ಪ್ರತಿಭಟನೆ ಸಭೆ:

ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ನೇತೃತ್ವದಲ್ಲಿ ಬಿ.ಎಚ್‌.ಕೈಮರದಿಂದ ನರಸಿಂಹರಾಜಪುರಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಪಟ್ಟಣದ ವಾಟರ್‌ ಟ್ಯಾಂಕ್‌ ಸಮೀಪದ ಮಾನವ ಸರಪಳಿ ರಚಿಸಿ, ಪ್ರತಿಭಟನೆ ನಡೆಸಿದರು. ಭಯೋತ್ಪಾದಕರಿಗೆ ಧಿಕ್ಕಾರ ಕೂಗಿದರು. ಪ್ರವೀಣ್‌ ಅವ​ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, 2 ನಿಮಿಷ ಮೌನಾಚರಣೆ ಮಾಡಲಾಯಿತು.

ವಿಹಿಂಪ ತಾಲೂಕು ಅಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್‌ ಮಾತನಾಡಿ, ಕರಾವಳಿಯ ಹಿಂದೂ ಸಮಾಜದ ಮುಖಂಡ ಪ್ರವೀಣ್‌ ಕೊಲೆ ಆಕಸ್ಮಿಕವಲ್ಲ. ಇದರಲ್ಲಿ ದೊಡ್ಡ ಷಡ್ಯಂತ್ರ ಅಡಗಿದೆ. ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡುವ ಮೂಲಕ ರಾಷ್ಟ್ರಪ್ರೇಮಿಗಳಿಗೆ ಭಯ ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚೆಗೆ ನರಸಿಂಹರಾಜಪುರ ತಾಲೂಕಿನ ಸಿಂಸೆಯಲ್ಲಿ 4 ಜನ ಬಾಂಗ್ಲಾ ದೇಶವದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲವು ವರ್ಷಗಳ ಹಿಂದೆ ಕುದುರೆಗುಂಡಿಯಲ್ಲೂ ಭಯೋತ್ಪಾದಕರು ಬಾಡಿಗೆ ಮನೆ ಮಾಡಿಕೊಂಡಿದ್ದರು. ಶಿವಮೊಗ್ಗದಲ್ಲಿ ಹರ್ಷನ ಕೊಲೆ, ರಾಜಸ್ಥಾನದಲ್ಲಿ ಟೈಲರ್‌ ಕನ್ನಯ್ಯ ಲಾಲ್‌ ಅವ​ರ ಕೊಲೆ ಮಾಡಿದ್ದಾರೆ. ಈಗ ಪ್ರವೀಣ್‌ ಹತ್ಯೆ ಮಾಡಿದ್ದಾರೆ. ಇದು ಜಿಹಾದಿ ಸಂಚಾಗಿದೆ ಎಂದರು.

Vijayapura: ಹುಟ್ಟುಹಬ್ಬದ ವೇದಿಕೆಯಲ್ಲೆ ಪ್ರವೀಣ್‌ಗೆ ಶ್ರದ್ದಾಂಜಲಿ ಸಲ್ಲಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ಸಂಘ ಪರಿವಾರದ ಮುಖಂಡ ಎಂ.ಎನ್‌.ನಾಗೇಶ್‌ ಮಾತನಾಡಿ, ದೇಶದಲ್ಲಿ ನಾವೇ ರಕ್ಷಣೆ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಕ್ರಮವಾಗಿ ಭಾರತದಲ್ಲಿ ವಾಸ ಮಾಡುತ್ತಿರುವವರು ಈ ದೇಶದ ಕಾನೂನು ಪಾಲಿಸಬೇಕು. ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಮುಖಂಡ ಎಂ.ಆರ್‌.ರವಿಶಂಕರ್‌ ಮಾತನಾಡಿ, ಭಾರತದಲ್ಲಿ ಹಿಂದೂಗಳ ಬರ್ಬರ ಹತ್ಯೆಯಾಗುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿ​ತ್ಯ​ನಾ​ಥ್‌ ಮಾದರಿಯಲ್ಲಿ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಬೇಕು. ಹಿಂದೂ ಸಮಾಜ ಒಗ್ಗಟ್ಟಾಗಿದೆ. ಪ್ರವೀಣ್‌ ಕೊಲೆ ಖಂಡಿಸಿ 2 ದಿನಗಳಲ್ಲಿ ಎಲ್ಲರೂ ಒಟ್ಟಾಗಿದ್ದೇವೆ ಎಂದರು.

ಪ್ರವೀಣ್ ಹಂತಕರನ್ನು ಗುಂಡಿಟ್ಟು ಕೊಲ್ಲಿ, ಆಂದೋಲ ಸ್ವಾಮೀಜಿ ಅಗ್ರಹ!

ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್‌ ಅಭಿಷೇಕ್‌, ತಾಲೂಕು ಸಂಚಾಲಕ ವೈಶಾಖ, ನಗರ ಕಾರ್ಯದರ್ಶಿ ಸುಮಂತ್‌, ಗೋರಕ್ಷಾ ಪ್ರಮುಖ್‌ ಅನೂಪ್‌, ಹೋಬಳಿ ಗೋ ರಕ್ಷಕ್‌ ಪ್ರಮುಖ ಕಾರ್ತಿಕ್‌, ಬಜರಂಗದಳ ಮುಖಂಡರಾದ ಶ್ರೇಯಸ್‌, ಮಧು ಶೆಟ್ಟಿ, ಸಂಘ ಪರಿವಾರದ ಮುಖಂಡ ಎಂ.ವಿ.ರಾಜೇಂದ್ರಕುಮಾರ್‌, ಬಿಜೆಪಿ ತಾಲೂಕು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios