Asianet Suvarna News Asianet Suvarna News

ಹರ್ಷ ತಂದ ವರ್ಷಧಾರೆ ಬಿತ್ತನೆ ಕಾರ್ಯ ಆರಂಭ

ಸೋಮವಾರ ಮಧ್ಯರಾತ್ರಿ ಬಿದ್ದ ಮಳೆಗೆ ರೈತರು ಹರ್ಷಗೊಂಡು ತಾಲೂಕಿನ ಬಹುತೇಕ ಗ್ರಾಮದಲ್ಲಿ ಮಂಗಳವಾರ ರೈತರು ಜಮೀನಿನಲ್ಲಿ ಉಳುಮೆ ಹಾಗೂ ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದು, ಎಲ್ಲೆಡೆ ಕಂಡು ಬಂತು.

 

People starts agriculture activities in Chamarajnagar
Author
Bangalore, First Published Apr 8, 2020, 3:20 PM IST

ಗುಂಡ್ಲುಪೇಟೆ(ಏ.08): ಸೋಮವಾರ ಮಧ್ಯರಾತ್ರಿ ಬಿದ್ದ ಮಳೆಗೆ ರೈತರು ಹರ್ಷಗೊಂಡು ತಾಲೂಕಿನ ಬಹುತೇಕ ಗ್ರಾಮದಲ್ಲಿ ಮಂಗಳವಾರ ರೈತರು ಜಮೀನಿನಲ್ಲಿ ಉಳುಮೆ ಹಾಗೂ ಬಿತ್ತನೆ ಕಾರ್ಯದಲ್ಲಿ ಮಗ್ನರಾಗಿದ್ದು, ಎಲ್ಲೆಡೆ ಕಂಡು ಬಂತು.

ತಾಲೂಕಿನ ಬೇಗೂರು, ತೆರಕಣಾಂಬಿ, ಹಂಗಳ ಹಾಗೂ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತನೆಯಲ್ಲಿ ರೈತರು ಬಿಸಿಯಾಗಿದ್ದು, ಕಂಡು ಬಂದಿದೆ. ಕೆಲವೆಡೆ ಭೂಮಿ ಹದ ಮಾಡಿಕೊಳ್ಳಲು ಟ್ರ್ಯಾಕ್ಟರ್‌ಗಳಲ್ಲಿ ಉಳುಮೆ ಮಾಡುತ್ತಿದ್ದರು. ಮಳೆ ಸಮರ್ಪಕವಾಗಿ ಬೀಳದಿದ್ದರೂ ಬಿತ್ತನೆಯಾಗುವ ಪ್ರದೇಶದಲ್ಲಿ ಜೋಳ,ಹತ್ತಿ, ಸೂರ‍್ಯಕಾಂತಿ ಬಿತ್ತನೆ ಮಾಡಿದ್ದಾರೆ. ಮಳೆ ಉತ್ತಮವಾಗಿ ಬೀಳದೆ ರೈತರು ಜಮೀನಿಗೆ ಗೊಬ್ಬರ ಹೂಡುವ ಕೆಲಸದಲ್ಲಿ ತೊಡಗಿದ್ದರು. ಬಿತ್ತನೆ ಬೀಜ ಪಡೆಯಲು ರೈತರು ಗುಂಡ್ಲುಪೇಟೆ ಸೇರಿದಂತೆ ಫರ್ಟಿ ಲೈಸರ್‌ ಅಂಗಡಿಗಳ ಮುಂದೆ ಮುಂಜಾನೆಯೇ ಕಾದು ನಿಂತು ಖರೀದಿಸಿದರು.

ಬಿತ್ತನೆ ಬೀಜ ಪೂರೈಸಲಿ

ತಾಲೂಕಿನಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ರೈತರಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜವಿಲ್ಲದೆ ಕಂಗಾಲಾಗಿದ್ದಾರೆ ಎಂದು ರೈತ ಸಂಘದ ಮುಖಂಡ ಮಹದೇವಪ್ಪ(ಶಿವಪುರ) ಹೇಳಿದ್ದಾರೆ.

ಗುಂಡ್ಲುಪೇಟೆ ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಇಲ್ಲದೇ ಅಧಿಕಾರಿಗಳು ಕಚೇರಿಯಲ್ಲಿ ಕುಳಿತಿದ್ದಾರೆ. ಬಿತ್ತನೆ ಬೀಜ ಪೂರೈಕೆಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

COVID19 ಚಿಕಿತ್ಸೆಗೆ ಮೈಸೂರು ರೈಲ್ವೆ ಆಸ್ಪತ್ರೆ ಸಿದ್ಧ

ಸರ್ಕಾರ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಂಡಿದೆ ಎಂದು ಹೇಳುತ್ತಿದೆ. ಆದರೆ ಜಿಲ್ಲೆಯ ಕೃಷಿ ಅಧಿಕಾರಿಗಳು ಮಾತ್ರ ಬಿತ್ತನೆ ಬೀಜ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.

ಈ ಸಂಬಂಧ ಜಿಲ್ಲಾಡಳಿತ ತಾಲೂಕಿನ ರೈತರಿಗೆ ಬಿತ್ತನೆ ಬೀಜ ಪೂರೈಕೆಗೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ರೈತರು ಅನಿವಾರ್ಯವಾಗಿ ಬೀದಿಗೀಳಿಯಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Follow Us:
Download App:
  • android
  • ios