Asianet Suvarna News Asianet Suvarna News

ಸರ್ಕಾರಿ ಶಾಲೆಗೆ ಮಂಜೂರಾದ ಜಾಗವನ್ನು ಗ್ರಾಮಸ್ಥರೇ ತಟ್ಟು ಮಾಡಿದ್ರು..!

ಸರ್ಕಾರಿ ಶಾಲೆಗೆ ಜಮೀನು ಮಂಜೂರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಜಮೀನು ತಟ್ಟು ಮಾಡಿದ್ದಾರೆ. ಕೋಲಾರದಲ್ಲಿ ಕೊಂಡರಾಜನಹಳ್ಳಿ ಸರ್ಕಾರಿ ಶಾಲೆಗೆ ಜಾಗದ ಕೊರತೆ ಇದ್ದು, ಶಾಲಾಭಿವೃದ್ಧಿ ಸಮಿತಿ ಮನವಿಗೆ ಸ್ಪಂದಿಸಿ ಶಾಸಕರ ಸೂಚನೆಯ ಮೇರೆಗೆ ಬೆಟ್ಟದ ತಪ್ಪಲಲ್ಲಿ 5 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ.

People clean land sanctioned for govt school in kolar
Author
Bangalore, First Published Jan 24, 2020, 9:00 AM IST

ಕೋಲಾರ(ಜ.24): ಕೋಲಾರ ತಾಲೂಕಿನ ಕೊಂಡರಾಜನಹಳ್ಳಿಯಲ್ಲಿ ಸರ್ಕಾರಿ ಶಾಲೆಗೆ 5 ಎಕರೆ ಜಮೀನನ್ನು ಮಂಜೂರು ಮಾಡಿದ್ದು, ಜಾಗವನ್ನು ಸಮತಟ್ಟು ಮಾಡಲು ಗ್ರಾಮಸ್ಥರೇ ಜೆಸಿಬಿ ನೀಡಿ ನೆರವಾಗಿದ್ದಾರೆ.

ನಗರ ಹೊರವಲಯದ ಕೊಂಡರಾಜನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾಲೂಕು ಆಡಳಿತ ನೀಡಿರುವ 5 ಎಕರೆ ಜಮೀನನ್ನು ಗ್ರಾಮಸ್ಥರ ಸಹಕಾರದಿಂದ ಶಿಕ್ಷಣ ಇಲಾಖೆ ಪರವಾಗಿ ಬಿಇಒ ನಾಗರಾಜಗೌಡ ವಶಕ್ಕೆ ಪಡೆದುಕೊಂಡಿದ್ದಾರೆ.

ನಾರ್ಮಲ್ ಹೆರಿಗೆಗೆ ಫೇಮಸ್‌ ಇಲ್ಲಿನ ಸರ್ಕಾರಿ ಆಸ್ಪತ್ರೆ..!

ಕೊಂಡರಾಜನಹಳ್ಳಿ ಸರ್ಕಾರಿ ಶಾಲೆಗೆ ಜಾಗದ ಕೊರತೆ ಇದ್ದು, ಶಾಲಾಭಿವೃದ್ಧಿ ಸಮಿತಿ ಮನವಿಗೆ ಸ್ಪಂದಿಸಿ ಶಾಸಕರ ಸೂಚನೆಯ ಮೇರೆಗೆ ಬೆಟ್ಟದ ತಪ್ಪಲಲ್ಲಿ 5 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಈಜಮೀನನ್ನು ಸಮತಟ್ಟು ಮಾಡಲು ಜೆಸಿಬಿಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು, ಮುಖಂಡರಾದ ಕೋರ್ಟ್‌ ನಾಗರಾಜಣ್ಣ, ಚಲಪತಿ ಮತ್ತಿತರರು ನೆರವಾಗಿದ್ದು, ಜಮೀನನ್ನು ಅವರೇ ನಿಂತು ಹಸನು ಮಾಡಿಸಿದ್ದಾರೆ.

ಈ ಜಾಗದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಗ್ರಾಮಸ್ಥರ ಒತ್ತಾಯವಿದ್ದು, ಶಾಸಕ ಶ್ರೀನಿವಾಗೌಡ ಸ್ಪಂದಿಸಿದ್ದಾರೆ ಎಂದು ಬಿಇಒ ನಾಗರಾಜಗೌಡ ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಯಾಧಿಕಾರಿ ರಾಮಕೃಷ್ಣಪ್ಪ, ಶಾಲೆಯ ಶಿಕ್ಷಕರಾದ ಶ್ರೀರಾಮ್‌, ಅಮರಾವತಿ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios