Asianet Suvarna News Asianet Suvarna News

ಶ್ರೀಗಳ ಬಗ್ಗೆ ಅಪಪ್ರಚಾರ ಬೇಡ, ಚಿಕಿತ್ಸೆಗೆ ಸ್ಪಂದಿಸ್ತಿದ್ದಾರೆ: ವಿರೇಂದ್ರ ಹೆಗ್ಗಡೆ

ಪೂಜ್ಯ ಪೇಜಾವರ ಶ್ರೀಗಳ ಬಗ್ಗೆ ಇಲ್ಲದ ಸಲ್ಲದ ಅಪಪ್ರಚಾರ ಬೇಡ. ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

pejawar sri responding to treatment says Veerendra Heggade
Author
Bangalore, First Published Dec 21, 2019, 3:05 PM IST

ಉಡುಪಿ(ಡಿ.21): ಪೂಜ್ಯ ಪೇಜಾವರ ಶ್ರೀಗಳ ಬಗ್ಗೆ ಇಲ್ಲದ ಸಲ್ಲದ ಅಪಪ್ರಚಾರ ಬೇಡ. ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಕೆಎಂಸಿ ಆಸ್ಪತ್ರೆಯಲ್ಲಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಅವರು, ಪೂಜ್ಯ ಪೇಜಾವರಶ್ರೀ ಅನಾರೋಗ್ಯದಿಂದಿದ್ದಾರೆ. ಐಸಿಯುನಲ್ಲಿರೋದನ್ನು ನೋಡಿ ಬಂದಿದ್ದೇನೆ. ನಿಧಾನವಾಗಿ ಚೇತರಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ವಯೋಧರ್ಮ ಪ್ರಕಾರ ನಿಧಾನ ಸ್ಪಂದನೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಸ್ವಾಮೀಜಿಗಳಿಗೆ ಬೇರೆ ಯಾವುದೇ ಖಾಯಿಲೆ, ಅಡ್ಡ ರೋಗ ಇಲ್ಲ. ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ. ಸ್ವಾಮೀಜಿಗೆ ಶೀಘ್ರ ಆರೋಗ್ಯ ವೃದ್ಧಿಯಾಗಲಿ. ಇಡೀ ದೇಶ ಅವರಿಗಾಗಿ ಪ್ರಾರ್ಥನೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಅವರು ಸದಾ ದೇವರ ಸಾನಿಧ್ಯದಲ್ಲೇ ಇದ್ದವರು. ದೇವರು ಅವರನ್ನು ಶೀಘ್ರ ಗುಣಮುಖ ಮಾಡುತ್ತಾರೆ. ಅಗತ್ಯ ಇಲ್ಲದ ಅಪಪ್ರಚಾರ ಬೇಡ. ಯಾರೂ ಮನಸ್ಸನ್ನು ವ್ಯಸ್ತ ಮಾಡಿಕೊಳ್ಳಬೇಡಿ. ಕೆಟ್ಟ ಸಂದೇಶ ಬರಲ್ಲ, ಒಳ್ಳೆ ಸಂದೇಶ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀ ಭೇಟಿ ಮಾಡಿ ತೊಂದರೆ ಕೊಡಬೇಡಿ, ದೂರದಿಂದಲೇ ಪ್ರಾರ್ಥಿಸಿ ಎಂದ ಕಿರಿಯ ಸ್ವಾಮೀಜಿ

Follow Us:
Download App:
  • android
  • ios