ರೇಷ್ಮೆ ನಗರಿ ರಾಮನಗರಲ್ಲಿ ರೈತರಿಗೆ ಬಂಪರ್

ರೇಷ್ಮೆ ನಗರಿ ರಾಮನಗರದಲ್ಲಿ ರೈತರಿಗೆ ಈ ಬಾರಿ ಅದೃಷ್ಟ ಖುಲಾಯಿಸಿದೆ. ಲಕ್ ಒಲಿದಿದ್ದು, ಇಳುವರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

Paddy Millet Price Hiked In Ramanagara

ಎಂ. ಅ​ಫ್ರೋಜ್ ಖಾನ್‌

ರಾಮ​ನ​ಗರ [ಡಿ.13]: ರೇಷ್ಮೆ ನಗರಿ ಎಂದೇ ಪ್ರಸಿದ್ಧಿ ಪಡೆ​ದಿ​ರುವ ರಾಮ​ನ​ಗ​ರ​ ಜಿಲ್ಲೆ ಈ ಬಾರಿ ರಾಗಿ ಮತ್ತು ಭತ್ತ​ದಲ್ಲಿ ಬಂಪರ್‌ ಬೆಲೆ ಕಂಡಿದೆ.

ಜಿಲ್ಲಾ​ದ್ಯಂತ 1.45 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಮತ್ತು 16 ಸಾವಿರ ಮೆಟ್ರಿಕ್‌ ಟನ್‌ ಭತ್ತ ಉತ್ಪಾದನೆ ನಿರೀ​ಕ್ಷಿ​ಸ​ಲಾ​ಗಿದೆ. ಹಿಂದಿನ ಸಾಲಿಗೆ ಹೋಲಿ​ಸಿ​ದರೆ ಈ ಬಾರಿ ಬೆಳೆ ವಿಸ್ತೀರ್ಣ ಹೆಚ್ಚಾ​ಗಿದ್ದು, ಉತ್ಪಾ​ದ​ನೆ ಪ್ರಮಾ​ಣವೂ ಹೆಚ್ಚಾ​ಗುವ ನಿರೀ​ಕ್ಷೆ​ಯಿದೆ.

2018-19ನೇ ಸಾಲಿ​ನಲ್ಲಿ ಜಿಲ್ಲೆ​ಯಲ್ಲಿ 65,325 ಹೆಕ್ಟೇರ್‌ ಪ್ರದೇ​ಶ​ದಲ್ಲಿ 1,14,457 ಮೆಟ್ರಿಕ್‌ ಟನ್‌ ರಾಗಿ , 3763 ಹೆಕ್ಟೇರ್‌ ಪ್ರದೇ​ಶ​ದಲ್ಲಿ 14,809 ಮೆಟ್ರಿಕ್‌ ಟನ್‌ ಭತ್ತ ಉತ್ಪಾ​ದನೆ ಆಗಿ​ತ್ತು. 2019-20ನೇ ಸಾಲಿ​ನಲ್ಲಿ ರಾಗಿ 69,056 ಹೆಕ್ಟೇರ್‌ ನಲ್ಲಿ 1,45,846 ಮೆಟ್ರಿಕ್‌ ಟನ್‌ ಮತ್ತು ಭತ್ತ 4251 ಹೆಕ್ಟೇರ್‌ ನಲ್ಲಿ 16,472 ಮೆಟ್ರಿಕ್‌ ಟನ್‌ ಉತ್ಪಾ​ದನೆ ನಿರೀ​ಕ್ಷಿ​ಸ​ಲಾ​ಗಿ​ದೆ.

ಹಿಂದಿನ ಸಾಲಿಗೆ ಹೋಲಿ​ಸಿ​ದರೆ ರಾಗಿ ಮತ್ತು ಭತ್ತದ ಬೆಳೆ ವಿಸ್ತೀರ್ಣ ಹೆಚ್ಚಾ​ಗಿದ್ದು, ಇಳು​ವ​ರಿಯು ಹೆಚ್ಚಾ​ಗ​ಲಿದೆ ಎಂದು ಅಂದಾ​ಜಿ​ಸ​ಲಾ​ಗಿದೆ. ಪ್ರತಿ ಹೆಕ್ಟೇರ್‌ ಗೆ ಈ ಬಾರಿ ರಾಗಿ 21, ಭತ್ತ 38 ಕ್ವಿಂಟಾಲ್‌ ನಷ್ಟುಇಳು​ವರಿ ಬರುವ ಸಾಧ್ಯ​ತೆ​ಗ​ಳಿವೆ ಎಂದು ಕೃಷಿ ಇಲಾಖೆ ಮೂಲ​ಗಳು ತಿಳಿ​ಸಿವೆ.

ಇಳುವರಿಯಲ್ಲಿ ಹೆಚ್ಚಳ:

ಇದಕ್ಕೆ ಪ್ರಮುಖ ಕಾರಣವೇನೆಂದರೆ ಈ ಬಾರಿ ಎಲ್ಲೆಡೆ ಉತ್ತಮ ಮಳೆಯಾಗಿದ್ದು, ಸಕಾಲದಲ್ಲಿ ಬೆಳೆಗಳಿಗೆ ನೀರು ದೊರಕಿದ್ದರಿಂದ ಇಳುವರಿಯಲ್ಲಿ ಹೆಚ್ಚಳ ಕಂಡುಬರಲಿದೆ. ವಾತಾವರಣ ಹೀಗೆಯೇ ಇದ್ದಲ್ಲಿ ಭತ್ತ ಬೆಳೆಗಾರರ ಕಣಜವನ್ನು ತುಂಬುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಉತ್ಪಾದನೆ ಪ್ರಮಾಣ:

2019-20ನೇ ಸಾಲಿ​ನಲ್ಲಿ ಜಿಲ್ಲೆ​ಯಲ್ಲಿ 69,056 ಹೆಕ್ಟೇರ್‌ ನಲ್ಲಿ ರಾಗಿ ಮತ್ತು 4,251 ಹೆಕ್ಟೇರ್‌ ನಲ್ಲಿ ಭತ್ತ ಬೆಳೆ​ಯ​ಲಾ​ಗಿದೆ. ರಾಮ​ನ​ಗರ ತಾಲೂ​ಕಿ​ನಲ್ಲಿ ಭತ್ತ 880 ಹೆಕ್ಟೇರ್‌ ನಲ್ಲಿ 3432 ಮೆ.ಟನ್‌ , ರಾಗಿ 11,655 ಹೆಕ್ಟೇರ್‌ ನಲ್ಲಿ 22,144 ಮೆ.ಟನ್‌ . ಚನ್ನ​ಪ​ಟ್ಟಣ ತಾಲೂ​ಕಿ​ನಲ್ಲಿ ಭತ್ತ 1253 ಹೆಕ್ಟೇರ್‌ ನಲ್ಲಿ 1253 ಹೆಕ್ಟೇರ್‌ ನಲ್ಲಿ 5012 ಮೆ.ಟನ್‌ , ರಾಗಿ 8422 ಹೆಕ್ಟೇರ್‌ ನಲ್ಲಿ 17,686 ಮೆ.ಟನ್‌ ನಿರೀ​ಕ್ಷಿ​ಸ​ಲಾ​ಗಿದೆ.

ಕನ​ಕ​ಪುರ ತಾಲೂ​ಕಿ​ನಲ್ಲಿ ಭತ್ತ 1695 ಹೆಕ್ಟೇರ್‌ ನಲ್ಲಿ 6441 ಮೆ.ಟನ್‌ , ರಾಗಿ 27,945 ಹೆಕ್ಟೇರ್‌ ನಲ್ಲಿ 61,479 ಮೆ.ಟನ್‌ , ಮಾಗಡಿ ತಾಲೂ​ಕಿ​ನಲ್ಲಿ ಭತ್ತ 423 ಹೆಕ್ಟೇರ್‌ ನಲ್ಲಿ 1607 ಮೆ.ಟನ್‌ , ರಾಗಿ 20,982 ಹೆಕ್ಟೇರ್‌ ನಲ್ಲಿ 47,209 ಮೆಟ್ರಿಕ್‌ ಟನ್‌ ನಿರೀ​ಕ್ಷೆ ಮಾಡ​ಲಾ​ಗಿ​ದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಸಾಲಿನಲ್ಲಿ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ 5192 ಕ್ವಿಂಟಲ್‌ ಭತ್ತ ಹಾಗೂ 1,20,000 ಕ್ವಿಂಟಲ್‌ ರಾಗಿಯನ್ನು ಖರೀದಿಸಲಾಗಿದೆ. ಈ ಬಾರಿ ರೈತರನ್ನು ಖರೀದಿ ಕೇಂದ್ರದ ಮುಂದೆ ಕಾಯಿಸದೆ ಖರೀದಿಸಲು ಕೂಪನ್‌ ವ್ಯವಸ್ಥೆ ಮಾಡಲು ಚಿಂತಿಸಲಾಗುತ್ತಿದೆ. ರೈತರಿಂದ ಭತ್ತ ಹಾಗೂ ರಾಗಿಯ ಸ್ಯಾಂಪಲ್‌ ಪಡೆದು ಅದರ ಗುಣಮಟ್ಟವನ್ನು ಪರೀಕ್ಷಿಸಿ ನಂತರ ಖರೀದಿಸುವ ಚಿಂತನೆ ನಡೆ​ದಿ​ದೆ.

ಜನ​ವ​ರಿಯಲ್ಲಿ ಖರೀದಿ ಕೇಂದ್ರ ಆರಂಭ:  ಜಿಲ್ಲೆಯಲ್ಲಿ ರೈತರು ಬೆಳೆದಿರುವ ರಾಗಿ ಮತ್ತು ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಮಾಡಲು ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ರೈತರಿಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ಅವರು ಬೆಳೆದ ಬೆಳೆಗಳನ್ನು ನೇರವಾಗಿ ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸುವಂತೆ ಜಿಲ್ಲಾ​ಧಿ​ಕಾರಿ ಎಂ.ಎಸ್‌.ಅ​ರ್ಚ​ನಾ ಅ​ವರು ಅಧಿ​ಕಾ​ರಿ​ಗ​ಳ ಸಭೆ ನಡೆಸಿ ಕಟ್ಟು​ನಿ​ಟ್ಟಿನ ಸೂಚನೆ ನೀಡಿ​ದ್ದಾರೆ.

ಕೇಂದ್ರ ಸರ್ಕಾರ ಒಂದು ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ ರು. 1815, ಗ್ರೇಡ್‌ ಎ ಭತ್ತಕ್ಕೆ ರು. 1835, ಹಾಗೂ ರಾಗಿಗೆ ರು. 3150 ನಿಗದಿ ಮಾಡಿದೆ. ಖರೀದಿ ಕೇಂದ್ರಗಳನ್ನು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತೆರೆಯಲಾಗುವುದು. ತಾಲೂಕಿನ ತಹ​ಸೀ​ಲ್ದಾರ್‌ ನೋಡಲ್‌ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲಿದ್ದಾರೆ.

ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವ ಮೊದಲು ರೈತರಿಂದ ಅವಶ್ಯಕವಿರುವ ಬ್ಯಾಂಕ್‌ ಖಾತೆಯ ವಿವರ, ಆರ್‌ಟಿಸಿ, ಬೆಳೆ ದೃಢೀಕರಣ ಪತ್ರ, ಮೊಬೈಲ್‌ ಸಂಖ್ಯೆ ಹಾಗೂ ಇನ್ನಿತರೆ ಅವಶ್ಯಕ ದಾಖಲೆಗಳನ್ನು ಸಂಬಂಧಿ​ಸಿದ ಅಧಿಕಾರಿಗಳು ಸಂಗ್ರಹಿಸಿಕೊಳ್ಳಿ. ರೈತರು ತಮ್ಮ ಸರಿಯಾದ ಮೊಬೈಲ್‌ ಸಂಖ್ಯೆಯನ್ನು ನೀಡಿ. ಇದರಿಂದ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು. ರೈತರಿಂದ ಹಣವನ್ನು ಸಹ ಆರ್‌ಟಿಜಿಸ್‌ ಮೂಲಕ ಪಾವತಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇ​ಶಕ ರವಿ ಕನ್ನ​ಡ​ಪ್ರ​ಭಕ್ಕೆ ಪ್ರತಿ​ಕ್ರಿಯೆ ನೀಡಿದರು.

ಕೇಂದ್ರ ಸರ್ಕಾರ 2019-20ನೇ ಮುಂಗಾರು ಹಂಗಾ​ಮಿ​ಗಾಗಿ ಎಫ್‌ಎಕ್ಯೂ ಗುಣ​ಮ​ಟ್ಟದ ಕೃಷಿ ಉತ್ಪ​ನ್ನ​ಗ​ಳಿಗೆ ಬೆಂಬಲ ಬೆಲೆ ಘೋಷಿ​ಸಿದೆ. ಈಗಾ​ಗಲೇ ಜಿಲ್ಲಾ ಟಾಸ್ಕ್ ಫೋರ್ಸ್‌ ಸಭೆ ನಡೆಸಿ ಕನಿಷ್ಠ ಬೆಂಬಲ ಬೆಲೆ ಯೋಜ​ನೆ​ಯಡಿ ರಾಗಿ ಮತ್ತು ಭತ್ತ​ವನ್ನು ಖರೀ​ದಿ​ಸುವ ಸಲು​ವಾಗಿ ಖರೀದಿ ಕೇಂದ್ರ​ಗ​ಳನ್ನು ತೆರೆ​ಯು​ವಂತೆ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡ​ಲಾ​ಗಿದೆ. ಖರೀದಿ ಕೇಂದ್ರ​ಗ​ಳನ್ನು ತೆರೆ​ಯುವ ಸಂಬಂಧ ಕೃಷಿ ಇಲಾಖೆ ಅಧಿ​ಕಾ​ರಿ​ಗಳು ಕಾರ್ಯ​ಪ್ರ​ವೃತ್ತರಾಗಿ​ದ್ದಾರೆ.

- ಎಂ.ಎಸ್‌. ಅ​ರ್ಚನಾ, ಜಿಲ್ಲಾ​ಧಿ​ಕಾ​ರಿ​, ರಾಮ​ನ​ಗರ

Latest Videos
Follow Us:
Download App:
  • android
  • ios