ಗ್ರಾಮಾಂತರ ಪ್ರದೇಶದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಇನ್ನು ಮುಂದೆ ಬ್ರೇಕ್‌ ಬೀಳುತ್ತಾ ? ಹಾಗೊಂದು ವೇಳೆ ಕಳಪೆ ರಸ್ತೆಗಳ ನಿರ್ಮಾಣ ಮಾಡಿದ್ರೂ ಇಂಜಿನಿಯರ್‌ಗಳು, ಗುತ್ತಿಗೆದಾರÜರು ಸುಲಭವಾಗಿ ಬಚಾವ್‌ ಆಗಬಹುದಾ?

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ನ.6) : ಗ್ರಾಮಾಂತರ ಪ್ರದೇಶದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಇನ್ನು ಮುಂದೆ ಬ್ರೇಕ್‌ ಬೀಳುತ್ತಾ ? ಹಾಗೊಂದು ವೇಳೆ ಕಳಪೆ ರಸ್ತೆಗಳ ನಿರ್ಮಾಣ ಮಾಡಿದ್ರೂ ಇಂಜಿನಿಯರ್‌ಗಳು, ಗುತ್ತಿಗೆದಾರÜರು ಸುಲಭವಾಗಿ ಬಚಾವ್‌ ಆಗಬಹುದಾ? ರಸ್ತೆ ಕಾಮಗಾರಿ ಕೈಗೊಳ್ಳದೇ ಅಯ್ಯೋ ಹೊಸ ರಸ್ತೆಗಳೆಲ್ಲ ಹಾಳಾದವು ಎಂದು ಲಾರಿಗಳ ಕಡೆ ಬೆಟ್ಟು ಮಾಡಿ ತೋರಿಸಿ ಜಾರಿಕೊಳ್ಳಬಹುದಾ?

ರಸ್ತೆ ಅಭಿವೃದ್ಧಿ ಮೂಲಕ ಭಾರತ ಜೋಡಿಸುವ ಕೆಲಸ: ನಳಿನ್‌ ಕುಮಾರ್‌ ಕಟೀಲ್‌

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆ ನಿರ್ಣಯ ಸಾರ್ವಜನಿಕ ವಲಯದಲ್ಲಿ ಇಂತಹ ಪ್ರಶ್ನೆಗಳ ಹರವಿದ್ದು ತರಾವರಿ ಚರ್ಚೆಗೆ ಕಾರಣವಾಗಿದೆ. ಓವರ್‌ ಲೋಡ್‌ ಮಾಡಿಕೊಂಡು ಮರಳು, ಅದಿರು ಸಾಗಾಣಿಕೆ ಲಾರಿಗಳ ಸೀಜ್‌ ಮಾಡಿ ಎಂಬ ಕೆಡಿಪಿ ಸಭೆಯ ಫರ್ಮಾನು ಈ ಚರ್ಚೆಗಳ ಮೂಲ ತಿರುಳು.

ಅದಿರು, ಮರಳು ಸಾಗಾಣಿಕೆ ಲಾರಿಗಳ ಓಡಾಟದಿಂದಾಗಿ ರಸ್ತೆಗಳು ಹಾಳಾದವು ಎಂಬ ಹೇಳಿಕೆಯೊಳಗೆ ಕಳಪೆತನಗಳೆಲ್ಲ ಮುಚ್ಚಿಹೋಗುವ ಅಪಾಯವಿದೆ ಎಂಬುದು ಸಾರ್ವಜನಿಕರ ಆತಂಕ.

ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಆಸುಪಾಸಿನಲ್ಲಿ ಅದಿರು ಗಣಿಗಾರಿಕೆ ಇದೆ. ನಾಲ್ಕೈದು ಕಂಪನಿಗಳು ಅಗಾಧ ಪ್ರಮಾಣದಲ್ಲಿ ಅದಿರು ತೆಗೆದು ಸಾಗಾಣಿಕೆ ಮಾಡುವ ಕೆಲಸದಲ್ಲಿ ನಿರತವಾಗಿವೆ. ಅದೇ ರೀತಿ ವೇದಾವತಿ ನದಿ ಪಾತ್ರದುದ್ದಕ್ಕೂ ಮರಳು ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡಿದ್ದು ಅಧಿಕ ಪ್ರಮಾಣದಲ್ಲಿ ಮರಳು ಎತ್ತಿ ಸಾಗಾಣಿಕೆ ಮಾಡಲಾಗುತ್ತಿದೆ. ಇದಲ್ಲದೇ ಕ್ರಷರ್‌ಗಳು ಎಂ.ಸ್ಯಾಂಡ್‌ ಉತ್ಪತ್ತಿ ಮಾಡಿ ನಗರ ಪ್ರದೇಶಗಳಿಗೆ ಸಾಗಾಣಿಕೆ ಮಾಡುತ್ತಿವೆ. ಈ ಸಾಗಾಣಿಕೆ ಎನ್ನುವುದು ಟ್ರಾಕ್ಟರ್‌ ನಂತರ ಪುಟ್ಟವಾಹನದಲ್ಲಿ ನಡೆಯುವಂತಹದ್ದಲ್ಲ . ಹತ್ತರಿಂದ ಹದಿನಾರು ಚಕ್ರದ ಲಾರಿಗಳು ಇಂತಹದ್ದನ್ನೆಲ್ಲ ನಿರ್ವಹಿಸುತ್ತವೆ.

ಚಿತ್ರದುರ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 16 ಟನ್‌ ಸಾಮರ್ಥ್ಯದ ಲಾರಿಗಳು ಒಳಗೊಂಡಂತೆ 55 ಟನ್‌ ವರೆಗೂ ಸಾಗಾಣಿಕೆ ಮಾಡುವ ವಾಹನಗಳು ನೋಂದಣಿಯಾಗಿವೆ. ರಿಜಿಸ್ಟÜರ್ಡ್‌ ಲ್ಯಾಡೆನ್‌ ವೈಟ್‌(ನೋಂದಾಯಿತ ಸರಕು ತೂಕ) ಆಧಾರದ ಮೇಲೆ ನೋಂದಣಿ ಮಾಡಿಕೊಂಡು ಅದಕ್ಕೆ ತಕ್ಕಂತೆ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. 25, 28, 31, 35, 37, 42, 47, 55 ಟನ್‌ ತೂಕ ಹೊರುವ ಸಾಮರ್ಥ್ಯದ ಲಾರಿಗಳು ಚಿತ್ರದುರ್ಗ ಜಿಲ್ಲೆಯಲ್ಲಿವೆ. ಹತ್ತು ಚಕ್ರಗಳಿಂದ 16 ಚಕ್ರದವರೆಗೆ ಸಾಮರ್ಥ್ಯಕ್ಕೆ ಅನುಸಾರ ಲಾರಿಗಳು ಚಕ್ರಗಳ ಹೊಂದಿರುತ್ತವೆ. ಇವುಗಳು ಅದಿರು, ಎಂ. ಸ್ಯಾಂಡ್‌, ಇಲ್ಲವೇ ಮರಳು ತುಂಬಿಕೊಂಡು ಹೋಗಲೇ ಬೇಕು. ಇದಕ್ಕಾಗಿ ನಗರ ಮತ್ತು ಗ್ರಾಮೀಣ ರಸ್ತೆಗಳ ಬಳಸುವುದು ಅನಿವಾರ್ಯ.

ಕೆಡಿಪಿ ಸಭೆಯಲ್ಲಿ ವಿಷಯ ಚರ್ಚೆಗೆ ಬಂದಾಗ ಗ್ರಾಮೀಣ ಪ್ರದೇಶದ ರಸ್ತೆಗಳು ಹತ್ತು ಟನ್‌ ತೂಕ ಹೊರುವ ಸಾಮರ್ಥ್ಯ ಹೊಂದಿರುವುದಿಲ್ಲ. 20 ರಿಂದ 40 ಟನ್‌ ನಷ್ಟುತೂಕದ ಮರಳು, ಅದಿರು ತುಂಬಿಕೊಂಡು ಹೋದರೆ ಹಾಳಾಗಿ ಹೋಗುತ್ತವೆ. ಹಾಗಾಗಿ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಇಂತಹ ಓವರ್‌ ಲೋಡ್‌ ವಾಹನಗಳ ತಪಾಸಣೆ ಮಾಡಿ ದಂಡ ಹಾಕಬೇಕು. ಅದಕ್ಕೂ ಬಗ್ಗದಿದ್ದರೆ ಸೀಜ್‌ ಮಾಡಿ ಎಂದು ಸಚಿವ ಬಿ.ಸಿ.ಪಾಟೀಲ್‌ ಫರ್ಮಾನು ಹೊರಡಿಸಿದರು.

ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಒಂದರಲ್ಲಿಯೇ ನಲವತ್ತು ಟನ್‌ ಸಾಮರ್ಥ್ಯದ ಐವತ್ತಕ್ಕೂ ಹೆಚ್ಚು ಲಾರಿಗಳಿವೆ. ಗಣಿ ಕಂಪನಿಗಳಿಂದ ಅದಿರು ತುಂಬಿಕೊಂಡು ನೇರವಾಗಿ ಗ್ರಾಮೀಣ ರಸ್ತೆಗೆ ಇಳಿಯುತ್ತವೆ. ಅಧಿಕ ತೂಕ ಹೊರುವ ಸಾಮರ್ಥ್ಯ ರಸ್ತೆಗಳಿಗೆ ಇಲ್ಲವೆಂದಾದಲ್ಲಿ ಪ್ರಾದೇಶಿಕ ಸಾರಿಗೆæ ಇಲಾಖೆಯಲ್ಲಿ ಈ ವಾಹನಗಳ ನೋಂದಣಿ ಏಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಡೀಸೆಲ್‌ ಬೆಲೆ ದುಬಾರಿಯಾಗಿದ್ದು ಹತ್ತು ವ್ಹೀಲ್‌ಗಳ ಲಾರಿಗಳಲ್ಲಿ ಅದಿರು, ಮರಳು ಸಾಗಾಣಿಕೆ ಮಾಡಿದರೆ ಮಾತ್ರ ವರ್ಕ್ಔಟ್‌ ಆಗುತ್ತೆ. ಇಲ್ಲದಿದ್ದರೆ ನಷ್ಟದ ಬಾಬತ್ತು ಮೈ ಮೇಲೆ ಬರುತ್ತದೆ ಎನ್ನುತ್ತಾರೆ ಲಾರಿ ಮಾಲೀಕರು.

ದಾವಣಗೆರೆ: ಒಂದೇ ವೇದಿಕೆಯಲ್ಲಿ ಮಾವ ಅಳಿಯ ಜಟಾಪಟಿ

ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಹತ್ತು ಟನ್‌ ಸಾಮರ್ಥ್ಯದ ತೂಕ ಹೊರುವ ರಸ್ತೆಗಳು ಇರುವುದು ಅಪರೂಪ. ಅಂತಹ ರಸ್ತೆಗಳ ನಿರ್ಮಿಸಬೇಕಾದರೆ ಎಸ್ಟಿಮೇಶನ್‌ ಕಾಸ್ಟ್‌ ಜಾಸ್ತಿಯಾಗುತ್ತದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಚಂದ್ರಪ್ಪ.

ಅದಿರು, ಮರಳು ಸಾಗಾಣಿಕೆ ಲಾರಿಗಳು ಓಡಾಟದಿಂದ ಕೆಲ ರಸ್ತೆಗಳು ಹಾಳಾಗಿರಬಹುದು. ಆದರೆ ಪೂರ್ಣ ಪ್ರಮಾಣದಲ್ಲಿ ಅಲ್ಲ. ಆದರೆ ಕಳಪೆ ರಸ್ತೆಗಳ ನಿರ್ಮಿಸಿ ಅದರ ಜವಾಬ್ದಾರಿಗಳನ್ನು ಅದಿರು ಸಾಗಾಣಿಕೆ ಲಾರಿಗಳ ಮೇಲೆ ಹಾಕಿದರೆ ಹೇಗೆ ಎನ್ನುತ್ತಾರೆ ಗ್ರಾಮಸ್ಥರು. ಕಳಪೆ ರಸ್ತೆ ನಿರ್ಮಾಣಕ್ಕೆ ರಹದಾರಿ ಸಿಕ್ತಾ ಎಂಬ ಆತಂಕ ಅವರದ್ದು.

ಗ್ರಾಮೀಣ ಪ್ರದೇಶದಲ್ಲಿ ಕಳಪೆ ರಸ್ತೆಗಳ ನಿರ್ಮಾಣ ಮಾಡಿರುವುದು ನೂರಕ್ಕೆ ನೂರು ಸತ್ಯ. ಯಾರೂ ಕೂಡ ಇಂತಹ ರಸ್ತೆಗಳ ಗುಣಮಟ್ಟದ ಬಗ್ಗೆ ಗಮನ ಹರಿಸುತ್ತಿಲ್ಲ. ತನಿಖೆ ಮಾಡಲು ಮುಂದಾಗುವುದಿಲ್ಲ. ಕಾಗೆ ಕುಂತಿತ್ತು, ಕೊಂಬೆ ಮುರಿಯಿತು ಎನ್ನುವ ಗಾದೆಯಂತೆ ಲಾರಿ ಓಡಾಡಿದುದಕ್ಕೆ ರಸ್ತೆ ಹಾಳಾಯ್ತು ಎಂದು ಜನಪ್ರತಿನಿಧಿಗಳು ದೂರುತ್ತಾರೆ. ಇದರ ಆಚೆಗೆ ಬೇರಯದೇ ಹಿಡನ್‌ ಅಜೆಂಡಾ ಇದೆ. ಇನ್ನೇನು ಎಲೆಕ್ಷÜ್ಷನ್‌ ಬಂದವಲ್ಲವೇ. ಲಾರಿ ಅಡ್ಡ ಹಾಕದೇ ಇನ್ನೇನು ಮಾಡ್ತಾರೆ ಹೇಳಿ?

- ಹೆಸರು ಹೇಳಲು ಇಚ್ಚಿಸದ ರೈತ ಮುಖಂಡ