Asianet Suvarna News Asianet Suvarna News

ಗೌರಿ ಹತ್ಯೆಗೆ ಒಂದು ವರ್ಷ: ಗೌರಿ ದಿನ ಆಚರಣೆ!

ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ‘ಗೌರಿ ಲಂಕೇಶ್‌ ಬಳಗ’ ಮತ್ತು ‘ಗೌರಿ ಲಂಕೇಶ್‌ ಮೆಮೋರಿಯಲ್‌ ಟ್ರಸ್ಟ್‌’ ಇವತ್ತು ‘ಗೌರಿ ದಿನ’ ಎಂಬ ವಿಶೇಷ ಕಾರ್ಯಕ್ರಮವನ್ನ ಮಾಡ್ತಿದ್ದಾರೆ. ಈ ವೇಳೆ ಶ್ರದ್ಧಾಂಜಲಿ, ರಾಜಭವನ ಜಲೋ, ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶಗಳು ನಡೆಯಲಿವೆ.

ಬೆಂಗಳೂರು(ಸೆ.5): ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ‘ಗೌರಿ ಲಂಕೇಶ್‌ ಬಳಗ’ ಮತ್ತು ‘ಗೌರಿ ಲಂಕೇಶ್‌ ಮೆಮೋರಿಯಲ್‌ ಟ್ರಸ್ಟ್‌’ ಇವತ್ತು ‘ಗೌರಿ ದಿನ’ ಎಂಬ ವಿಶೇಷ ಕಾರ್ಯಕ್ರಮವನ್ನ ಮಾಡ್ತಿದ್ದಾರೆ. ಈ ವೇಳೆ ಶ್ರದ್ಧಾಂಜಲಿ, ರಾಜಭವನ ಜಲೋ, ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶಗಳು ನಡೆಯಲಿವೆ. ನಗರದ ಟಿ.ಆರ್‌.ಮಿಲ್‌ ಸಮೀಪದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಗೌರಿ ಸಮಾಧಿ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೀತು. ಗೌರಿ ಸೋದರಿ ಕವಿತಾ ಲಂಕೇಶ್​, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ನಟ ಪ್ರಕಾಶ್​ ರೈ ಸೇರಿದಂತೆ ಹಲವರು ಭಾಗಿಯಾಗಿದ್ರು..

ಇನ್ನು ಮೌರ್ಯ ಹೋಟೆಲ್‌ ಬಳಿಯ ಗಾಂಧಿ ಪ್ರತಿಮೆ ಎದುರು ರಾಜಭವನ ಚಲೋ ಕಾರ್ಯಕ್ರಮಕ್ಕೆ ಸ್ವಾಮಿ ಅಗ್ನಿವೇಶ್‌ ಚಾಲನೆ ನೀಡಿದ್ರು. ಪ್ರೊ. ರವಿವರ್ಮ ಕುಮಾರ್‌, ಡಾ. ವಿಜಯ, ಜಿ.ವಿ.ಶ್ರೀರಾಮ ರೆಡ್ಡಿ, ಡಾ. ಕೆ. ಮರುಳಸಿದ್ದಪ್ಪ, ಜಿ.ಕೆ. ಗೋವಿಂದರಾವ್‌ ಮೊದಲಾದವರು ಭಾಗಿಯಾಗಿದ್ರು..
 

Video Top Stories