Asianet Suvarna News Asianet Suvarna News

BJP 15 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ: ಡಿಸಿಎಂ

ಬಹಳ ಮಹತ್ವದ ಉಪಚುನಾವಣೆ ಇದಾಗಿದ್ದು, ನಾವು 15 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

no wonder if bjp won all 15 seats in byelection says dcm CN Ashwath Narayan
Author
Bangalore, First Published Dec 9, 2019, 8:57 AM IST

ಉಡುಪಿ(ಡಿ.09): ವಿಧಾನಸಭೆ ಉಪಚುನಾವಣೆಯ 15 ಕ್ಷೇತ್ರಗಳಲ್ಲಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ನಿವಾಸದಲ್ಲಿ ಭಾನುವಾರ ಬೆಳಗ್ಗೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಮಹತ್ವದ ಉಪಚುನಾವಣೆ ಇದಾಗಿದ್ದು, ನಾವು 15 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ ಎಂದರು. ಫಲಿತಾಂಶದ ನಂತರ ಮಂತ್ರಿಮಂಡಲ ವಿಸ್ತರಣೆ ಆಗಲಿದ್ದು, ಗೆದ್ದ ಬಿಜೆಪಿ ಅಭ್ಯರ್ಥಿಗಳೆಲ್ಲರೂ ಮುಖ್ಯಮಂತ್ರಿ ಮಾತಿನಂತೆ ಸಚಿವರಾಗಲಿದ್ದಾರೆ, ಹೆಚ್ಚು ಕ್ರಿಯಾಶೀಲವಾಗಿ ಸರ್ಕಾರ ಕೆಲಸ ಮಾಡಲು ಇದು ಸಹಕಾರಿಯಾಗಲಿದೆ ಎಂದರು.

ಐಟಿಗೆ ನೆರವು:

ಬೆಂಗಳೂರು ನಗರದಲ್ಲಿ ಸಾಫ್ಟ್‌ವೇರ್‌ ಉದ್ಯಮವನ್ನು ಎಸ್‌.ಎಂ. ಕೃಷ್ಣ ಮುಖ್ಯ​ಮಂತ್ರಿ ಆಗಿದ್ದಾಗ ಆರಂಭಿಸಿದ್ದರು, ಈಗ ಐಟಿ, ಬಿಟಿಯವರು ರಾಜ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದು, ಇದನ್ನು ಬೆಳೆಸಲು ನೀತಿಯೊಂದನ್ನು ಸರ್ಕಾರ ರೂಪಿಸುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಈ ಸ್ಥಾನಗಳ ಮೇಲೆ ಉಚ್ಚಾಟಿತ ಮುಖಂಡರ ಕಣ್ಣು

ಕಂಬಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಶನಿವಾರ ರಾತ್ರಿ ಶಾಸಕ ರಾಜೇಶ್‌ ನಾಯ್ಕ್‌ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಭಾನುವಾರ ಬೆಳಗ್ಗೆ ಬೆಂಗಳೂರಿಗೆ ತೆರಳಿದ್ದಾರೆ.

Follow Us:
Download App:
  • android
  • ios