Asianet Suvarna News Asianet Suvarna News

ಕೋಲಾರ: 50 ವರ್ಷ ಕಳೆದರೂ ಅಂಚೆ ಕಚೇರಿಗೆ ಸ್ವಂತ ಸೂರಿಲ್ಲ..!

ಜನ ಪ್ರತಿನಿಧಿಗಳ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಟೇಕಲ್ ಉಪ ಅಂಚೆ ಕಚೇರಿಗೆ ಸುಮಾರು ೫೦ ವರ್ಷಗಳಿಂದ ಸ್ವಂತ ಕಟ್ಟಡ ಭಾಗ್ಯವಿಲ್ಲದೆ, ಖಾಸಗಿ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಮುಂದುವರೆದಿದೆ.

no own building for post office in Tekal Village
Author
Bangalore, First Published Dec 12, 2019, 12:55 PM IST

ಕೋಲಾರ(ಡಿ.12): ಜನ ಪ್ರತಿನಿಧಿಗಳ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಟೇಕಲ್ ಉಪ ಅಂಚೆ ಕಚೇರಿಗೆ ಸುಮಾರು ೫೦ ವರ್ಷಗಳಿಂದ ಸ್ವಂತ ಕಟ್ಟಡ ಭಾಗ್ಯವಿಲ್ಲದೆ, ಖಾಸಗಿ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಮುಂದುವರೆದಿದೆ.

ಅರ್ಧ ಶತಮಾನ ಕಳೆದರು ಇಲ್ಲಿಯ ಉಪ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಕಲ್ಪಿಸಲು ಇಲಾಖೆ ಮುಂದಾಗಿಲ್ಲ. ಅಂಚೆ ಕಚೇರಿ ನಿರ್ಮಿಸಲು ನಿವೇಶನಕ್ಕೆ ಬೇಡಿಕೆ ಇಟ್ಟರೆ ನೀಡಲು ಗ್ರಾಮ ಪಂಚಾಯತಿ ಸಿದ್ಧವಿದೆ. ಆದರೆ ಇಲಾಖೆ ನಿವೇಶನಕ್ಕಾಗಿ ಮನವಿಯನ್ನೇ ಸಲ್ಲಿಸಿಲ್ಲ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್..!

ಸ್ವಂತ ಕಟ್ಟಡ ವಿಲ್ಲದ ಪರಿಣಾಮ ಪದೇ ಪದೇ ಅಂಚೆ ಕಚೇರಿಯನ್ನು ಎರಡು ಕಡೆ ಬದಲಾವಣೆ  ಮಾಡಲಾಗಿತ್ತು. ಇದರಿಂದಾಗಿ ಮಾಸಾಶನ, ವೃದ್ಧರು, ಅಂಗವಿಕಲರು ಕಚೇರಿ ಹುಡುಕಿಕೊಂಡು ಅಲೆದಾಡುವಂತಾಗಿತ್ತು. ಇನ್ನೂ ಟೇಕಲ್‌ನ ಉಪ ಅಂಚೆಕಚೇರಿ ವ್ಯಾಪ್ತಿಗೆ 7 ಶಾಖಾ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು ತೊರಲಕ್ಕಿ, ನೂಟವೆ, ಹುಳದೇನಹಳ್ಳಿ, ಕೊಂಡಶೆಟ್ಟಹಳ್ಳಿ, ನೆಲ್ಲಹಳ್ಳಿ, ನಿದರಮಂಗಲ, ಹಳೇಪಾಳ್ಯ ಗ್ರಾಮಗಳಲ್ಲಿ ಶಾಖೆಗಳಿವೆ. ಇದಾವುದಕ್ಕೂ ಸ್ವಂತ ಕಟ್ಟಡ ಇಲ್ಲ ಎಂದು ಟೇಕಲ್ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಹೇಳಿದ್ದಾರೆ.

ಪರಿಹಾರ ವಿಳಂಬ: ಟವರ್ ಹತ್ತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಮಂಡ್ಯ ರೈತ

ಗ್ರಾಮ ಪಂಚಾಯ್ತಿ ವತಿಯಿಂದ ಸ್ಥಳ ಕೊಡಲು ಸಿದ್ದರಿದ್ದು ಅದುವರೆಗೂ ಪಂಚಾಯ್ತಿಯ ಪರ್ದಿಯಲ್ಲಿರುವ ಮುಖ್ಯರಸ್ತೆಯ ಪಕ್ಕದಲ್ಲಿರುವ ಹೊಸ ಕಟ್ಟಡವನ್ನು ಸಹ ಉಪ ಅಂಚೆ ಕಛೇರಿಗೆ ಕೊಡಲು ಸಿದ್ದರಿದ್ದೇವೆ ಎಂದರು. ಈ ಬಗ್ಗೆ ಪಂಚಾಯ್ತಿ ವತಿಯಿಂದ ಕೋಲಾರ ಪ್ರಧಾನ ಅಂಚೆ ಕಛೇರಿಗೆ ಈ ಬಗ್ಗೆ ಪತ್ರವನ್ನು ರವಾನಿಸಲಾಗುತ್ತದೆ ಎಂದಿದ್ದಾರೆ.

ಈ ಬಗ್ಗೆ ಅಂಚೆ ಇಲಾಖೆಯೊಬ್ಬರ ಮಾಹಿತಿ ಪ್ರಕಾರ ೧೦ ವರ್ಷಗಳಿಂದ ಜಿಲ್ಲೆಯ ಕೆಲವು ಕಡೆ ಅಂಚೆ ಕಚೇರಿಯ ಹೆಸರಿನಲ್ಲಿ ಸ್ಥಳವಿದ್ದರು ಕಟ್ಟಡ ನಿರ್ಮಿಸಲು ಇಲಾಖೆ ವತಿಯಿಂದ ಅನುಮತಿ ದೊರೆತಿಲ್ಲ. ಈ ಬಗ್ಗೆ ಬೆಂಗಳೂರಿನ ಕೇಂದ್ರ ಕಚೇರಿ ಇಲ್ಲವೆ ಕೇಂದ್ರ ಸರ್ಕಾರ ಅನುಮೋದಿಸಿದರೆ ತಾಲೂಕು ಮಟ್ಟದಿಂದ ಹೋಬಳಿ ಮಟ್ಟದವರೆಗೂ ಅಂಚೆ ಕಚೇರಿಗೆ ಕಟ್ಟಡದ ವ್ಯವಸ್ಥೆಯಾಗುತ್ತದೆ. ಇನ್ನೂ ಗ್ರಾಮಗಳಲ್ಲಿ ಪಂಚಾಯ್ತಿಯವರೆ ಕಟ್ಟಡ ಒದಿಗಿಸಿಕೊಡಬೇಕೆಂದು ಹಿಂದಿನಿಂದಲೂ ನಿಯಮವಿದೆ ಎಂದಿದ್ದಾರೆ.

ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ

Follow Us:
Download App:
  • android
  • ios