ಹುಬ್ಬಳ್ಳಿ(ಡಿ.10): ರಮೇಶ್ ಜಾರಕಿಹೊಳಿ ಡಿಸಿಎಂ ಆಗೋ ಕನಸು ಕಾಣುತ್ತಿದ್ದರೆ ಮತ್ತೆ ಯಾರಿಗೂ ಡಿಸಿಎಂ ಸ್ಥಾನ ಕೊಡೋ ಸಾಧ್ಯತೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಬಿಜೆಪಿಯಲ್ಲಿ ಹಲವು ಜನರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಯಾವ ಸ್ಥಾನ ಕೊಡಬೇಕೆಂದು ಪಕ್ಷ ತೀರ್ಮಾನಿಸುತ್ತೆ. ಮತ್ತೆ ಡಿಸಿಎಮ್ ಹುದ್ದೆ ಯಾರಿಗೂ ಕೊಡುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮರ್ಯಾದೆ ಇದ್ದರೆ ಜನರ ಬಳಿ ಕ್ಷಮೆ ಕೇಳಿ: ಸಿದ್ದು ವಿರುದ್ದ ಗುಡುಗಿದ ಸೊಗಡು ಶಿವಣ್ಣ

ಶರತ್ ಬಚ್ಚೆಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಅವರು ತಾಯಿಯಂತಿರುವ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಬಚ್ಚೇಗೌಡರ ಪಕ್ಷ ವಿರೋಧಿ ಕೆಲಸಗಳ ಬಗ್ಗೆ ಎಮ್‌ಟಿಬಿಯವರು ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದಾರೆ. ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಜನರು ಯಾವುದೇ ವ್ಯಕ್ತಿಯನ್ನು ನೋಡದೆ, ಪಕ್ಷವನ್ನು ನೋಡಿ ಮತ ಹಾಕಿದ್ದಾರೆ. ಯಡಿಯೂರಪ್ಪ ನಡೆ, ಆಡಳಿತ ಚುನಾವಣೆಯ ಮೇಲೆ ಪ್ರಭಾವ ಬೀರಿದೆ. ಹಾಗಾಗಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.

'ಕತ್ತು ಹಿಡಿದು ಆಚೆಗೆ ತಳ್ಳಿ', ಕಂಡಕ್ಟರ್ ಮೇಲೆ ಡಿಪೋ ಮ್ಯಾನೇಜರ್ ದರ್ಪ..!