Asianet Suvarna News Asianet Suvarna News

ಈ ವರ್ಷ ವಿಜಯದಶಮಿಗೆ ಮಕ್ಕಳಿಗೆ ರಜೆ ಇಲ್ಲ..!

ಶಿಕ್ಷಣ ಇಲಾಖೆಯು ಪ್ರಕಟಿಸಿರುವ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಲ್ಲಿ ವಿಜಯದಶಮಿಗೆ ರಜೆ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟ (ಕ್ಯಾಮ್ಸ್‌) ಅಸಮಾಧಾನ ವ್ಯಕ್ತಪಡಿಸಿದೆ.

No leave for students on vijayadashami
Author
Bangalore, First Published Feb 16, 2020, 9:59 AM IST

ಬೆಂಗಳೂರು(ಫೆ.16): ಶಿಕ್ಷಣ ಇಲಾಖೆಯು ಪ್ರಕಟಿಸಿರುವ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಲ್ಲಿ ವಿಜಯದಶಮಿಗೆ ರಜೆ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟ (ಕ್ಯಾಮ್ಸ್‌) ಅಸಮಾಧಾನ ವ್ಯಕ್ತಪಡಿಸಿದೆ.

ಇಲಾಖೆ ವೇಳಾಪಟ್ಟಿಪ್ರಕಾರ, 2020ರ ಮೇ 29ರಂದು ಶಾಲೆ ಆರಂಭವಾಗಲಿದ್ದು ಅ.2ರ ವರೆಗೆ ಮೊದಲ ಅವಧಿ ಹಾಗೂ ಅ.26ರಿಂದ 2021ರ ಏ.26ರ ವರೆಗೆ ಎರಡನೇ ಅವಧಿ ಕಾರ್ಯನಿರ್ವಹಿಸುವ ದಿನಗಳಾಗಿವೆ. ಅ.3ರಿಂದ 25ರ ವರೆಗೆ ಮಧ್ಯಂತರ (ದಸರಾ) ರಜೆ ನೀಡಲಾಗಿದೆ. ಅ.26ರಿಂದ ಶಾಲೆ ಆರಂಭಿಸುವಂತೆ ಸೂಚಿಸಿದೆ.

ಬಿಬಿಎಂಪಿ ಕಂದಾಯಾಧಿಕಾರಿ, ಸಿಬ್ಬಂದಿ ಮೇಲೆ ದೌರ್ಜನ್ಯ: ದೂರು ದಾಖಲು

ಅ.26ರಂದೇ ವಿಜಯದಶಮಿ ಹಬ್ಬವಿದೆ. ಆ ದಿನ ಸರ್ಕಾರಿ ರಜೆ ಕೂಡ ಇದೆ. ಅದನ್ನು ಲೆಕ್ಕಿಸದೆಯೇ ವೇಳಾಪಟ್ಟಿರಚಿಸಿರುವುದು ಸರಿಯಾದ ಕ್ರಮವಲ್ಲ. ಪದೇ ಪದೆ ಶಿಕ್ಷಣ ಇಲಾಖೆಯು ಈ ರೀತಿ ಹಲವಾರು ತಪ್ಪು ಮಾಡುತ್ತಿದೆ.

ನಿರ್ಧಾರ, ಆದೇಶಗಳನ್ನು ಹೊರಡಿಸುವ ಮುನ್ನ ಖಾಸಗಿ ಶಾಲೆ ಮತ್ತು ಒಕ್ಕೂಟಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಮತ್ತು ತಕ್ಷಣವೇ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಬಿಬಿಎಂಪಿಯಿಂದ 4.15 ಕೋಟಿ ವರ್ಗ: ನಕಲಿ ಖಾತೆ ಯಾರದ್ದು..?

Follow Us:
Download App:
  • android
  • ios