Asianet Suvarna News Asianet Suvarna News

ನಿಖಿಲ್‌ ಮದುವೆ ಸ್ಥಳದಲ್ಲಿ ವಾಸ್ತು ಪ್ರಕಾರ ಮಂಟಪ

ನಿಖಿಲ್ ವಿವಾಹ ಸಮಾರಂಭಕ್ಕೆ ರಾಮನಗರ-ಚನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಗುರುತಿಸಲಾಗಿದ್ದು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಂದು ಬಾರಿ ಪರಿಶೀಲಿಸಿದ್ದಾರೆ. ವಿಶಾಲವಾದ ಪ್ರದೇಶದಲ್ಲಿ ವಾಸ್ತುಪ್ರಕಾರವೇ ಮಂಟಪವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

 

Nikhil Kumaraswamy marriage stage to be build according to vastu
Author
Bangalore, First Published Feb 13, 2020, 10:44 AM IST

ರಾ​ಮ​ನ​ಗರ(ಫೆ.13): ಪುತ್ರ ನಿಖಿಲ್‌ ವಿವಾಹಕ್ಕೆಂದು ನಿಗದಿಪಡಿಸಿರುವ ರಾಮನಗರ-ಚನ್ನಪಟ್ಟಣ ನಡುವಿನ ಅರ್ಚಕರಹಳ್ಳಿ ಸಮೀಪದ ಜಾಗವನ್ನು ಈಗಾಗಲೇ ಒಂದು ಬಾರಿ ಪರಿಶೀಲಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬುಧವಾರದಂದು ತಮ್ಮ ಬೀಗರಾದ ಮಂಜುನಾಥ್‌ ಅವರೊಂದಿಗೆ ಮತ್ತೊಮ್ಮೆ ನೋಡಿದ್ದಾರೆ.

ಈ ಸ್ಥಳ​ವನ್ನು ಕುಮಾ​ರ​ಸ್ವಾ​ಮಿ ಕುಟುಂಬ​ದ​ವರು ಮೊದ​ಲೇ ಒಪ್ಪಿ​ಕೊಂಡಿ​ದ್ದರು. ಬೀಗ​ರಿಗೆ ಸ್ಥಳ ತೋರಿ​ಸ​ಬೇ​ಕೆಂಬ ಉದ್ದೇ​ಶ​ದಿಂದ ಎರ​ಡನೇ ಬಾರಿಗೆ ಕುಮಾ​ರ​ಸ್ವಾಮಿ ಭೇಟಿ ನೀಡಿ​ದ​ರು. ಈ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಕುಮಾ​ರ​ಸ್ವಾಮಿ, ಇದು ನಮ್ಮ ಮನೆಯ ಮೊದಲ ಹಾಗೂ ಕೊನೆಯ ವಿವಾಹ ಕಾರ್ಯಕ್ರಮ.

ನಿಖಿಲ್ ನಿಶ್ಚಿತಾರ್ಥ; ಥೈಲ್ಯಾಂಡ್‌ ಹೂವು, ಶ್ವೇತ ವರ್ಣದ ಮಂಟಪ ರೆಡಿ!

ಹೀ​ಗಾಗಿ ಶಾಸ್ತ್ರೋಕ್ತವಾಗಿ ಹಾಗೂ ವಾಸ್ತು ಪ್ರಕಾರವಾ​ಗಿ ನೆರವೇರಿಸಲಾಗುವುದು. ಈ ಜಾಗಕ್ಕೆ ಶಕ್ತಿ ತುಂಬಲು ನಮ್ಮ ಜ್ಯೋತಿಷಿಗಳು, ಅರ್ಚಕರು ಇ​ನ್ನೆ​ರೆಡು ದಿ​ನ​ದಲ್ಲಿ ಪೂಜೆ ಸಲ್ಲಿಸುವರು. ಎಲ್ಲಿ ಕ​ಲ್ಯಾಣ ಮಂಟಪ ಬ​ರ​ಬೇಕು, ಎಲ್ಲೆಲ್ಲಿ ಧಾ​ರ್ಮಿಕ ಕಾ​ರ್ಯ​ಗಳನ್ನು ನ​ಡೆ​ಸ​ಬೇಕು ಎಂಬು​ದನ್ನು ವಾಸ್ತುಪ್ರಕಾರವಾಗಿ ಗು​ರು​ತಿ​ಸಲಿದ್ದಾರೆ ಎಂದು ಹೇಳಿ​ದ​ರು.

ನಿಖಿಲ್‌ ಕುಮಾರಸ್ವಾಮಿ ಬಾಳಲ್ಲಿ ಇನ್ನು ರೇವತಿ ನಕ್ಷತ್ರದ್ದೇ ಮೆರಗು

ಏ.17ರಂದು ಬೆಳಗ್ಗೆ 9:15ರಿಂದ 9:30ರ ಶುಭಲಗ್ನದಲ್ಲಿ ನಿಖಿಲ್‌ ಮತ್ತು ರೇವತಿ ವಿವಾಹ ಕಾರ್ಯ ನೆರ​ವೇ​ರ​ಲಿದೆ. ಮದುವೆಗೆ 5 ರಿಂದ 6 ಲಕ್ಷ ಜನ ಬರುವ ನಿರೀಕ್ಷೆ ಇದೆ. ಇದು ಅ​ದ್ಧೂರಿ ಮ​ದುವೆ ಅಲ್ಲ. ಆ​ದರೆ ಗ​ಣ್ಯರು ಆ​ಗ​ಮಿ​ಸು​ವು​ದರಿಂದ ವಿ​ಶಾಲ​ವಾದ ಪ್ರ​ದೇಶ ಆಯ್ಕೆ ಮಾ​ಡಿ​ಕೊಂಡಿದ್ದೇವೆ. ನ​ನ್ನೆಲ್ಲ ಜ​ನ​ರಿಗೆ ಆ​ಮಂತ್ರಣ ಪ​ತ್ರಿಕೆ ನೀ​ಡ​ಲಾ​ಗುವುದು. ಪ​ತ್ರಿ​ಕೆಯು ಸಹ ಸ​ರ​ಳ​ವಾ​ಗಿಯೇ ಇ​ರ​ಲಿದೆ ಎಂದು ಹೇಳಿದ​ರು.

"

Follow Us:
Download App:
  • android
  • ios