ಮಂಗಳೂರು (ಅ.26):  ತುಳುಚಿತ್ರ  ನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಸುರೇಂದ್ರನ ಬಳಿ ಇದ್ದ ಕೋಟಿ ರೂ. ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಮಂಗಳೂರಿನಲ್ಲಿ ಸುರೇಂದ್ರನ ತಾಯಿ ರಾಧ ಮತ್ತು ಸಹೋದರ ಚಂದ್ರಹಾಸ್ ಆರೋಪ ಮಾಡಿದ್ದು, ಸುರೇಂದ್ರನ ಭಂಡಾರಿಯ ಬೆಟ್ಟು ಫ್ಲಾಟ್ ನಲ್ಲಿ ಒಂದು ಕೋಟಿ ಹಣ ಇತ್ತು.  ಅಲ್ಲದೇ ಅವನ ಮೈ ಮೇಲೆ ಬರೋಬ್ಬರಿ ಒಂದು ಕೆ.ಜಿ ಚಿನ್ನಾಭರಣ ಇತ್ತು. ಇದಕ್ಕಾಗಿ ಆತನ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

'ನಟ ಸುರೇಂದ್ರನ ಕೊಂದಿದ್ದು ನಾನೇ' ಯಾವ ಸಾವಿಗೆ ಪ್ರತೀಕಾರ! ..

ಆದರೆ ಪೊಲೀಸರು ಎಫ್ ಐಆರ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ. ಕೊಲೆ ಮಾಡಿದ ಬಳಿಕ ಆರೋಪಿಗಳು ಕೋಟಿ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ.  ಈ ಬಗ್ಗೆ ಮಾಹಿತಿ ನೀಡಿದರೂ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ.  ಹೀಗಾಗಿ ಎಸ್ಪಿಗೆ ಹಣ ಮತ್ತು ಆಭರಣದ ಬಗ್ಗೆ ದೂರು ನೀಡುತ್ತೇವೆ ಎಂದರು. 

ಇನ್ನುಆರೋಪಿ ಸತೀಶ್ ಕುಲಾಲ್ ನಮ್ಮ ‌ಮನೆಯಲ್ಲೇ ತಿಂದು ಬೆಳೆದವ. ಈಗ ಅವನೇ ಕೆಲವರ ಜೊತೆ ಸೇರಿಕೊಂಡು ಹತ್ಯೆ ಮಾಡಿದ್ದಾನೆ. ಆದರೆ ಇದರಲ್ಲಿ ಅವನೊಬ್ಬನೇ ಇಲ್ಲ, ಕಾಣದ ಕೈಗಳು ಹಲವಾರು ಇವೆ.  ನನ್ನ ಮಗ ಮೂರು ದಿನಗಳ ಹಿಂದೆ ಒಂದು ಕೋಟಿ ಹಣ ಇರೋ ಬಗ್ಗೆ ಹೇಳಿದ್ದ. ಹೀಗಾಗಿ ಆ ಹಣಕ್ಕಾಗಿಯೇ ಆತನ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 

"