ಬೆಂಗಳೂರು (ಸೆ.08):  ಹಣ ವಸೂಲಿಗೆ ಬಂದ ಟೈಯರ್‌ ಅಂಗಡಿ ಮಾಲೀಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ರಂಪಾಟ ಮಾಡಿದ್ದ ಮಹಿಳೆ ವಿರುದ್ಧ ಇಂದಿರಾ ನಗರ ಠಾಣೆಯಲ್ಲಿ ಶುಕ್ರವಾರ ಎನ್‌ಸಿಆರ್‌ ದಾಖಲಾಗಿದೆ.

"

ಹದಿನೈದು ತಿಂಗಳ ಹಿಂದಿನ ಘಟನೆಯ ವಿಡಿಯೋ ಇದಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹಳೇ ವಿಡಿಯೋ ವೈರಲ್‌ ಹಿನ್ನೆಲೆಯಲ್ಲಿ ಇಂದಿರಾ ನಗರ ಪೊಲೀಸರು, ಗಂಭೀರ ಸ್ವರೂಪವಲ್ಲದ ಕೃತ್ಯ (ಎನ್‌ಸಿಆರ್‌) ಎಂದು ಆರೋಪಿತೆ ಸಂಗೀತಾ ಗೋಪಾಲ್‌ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಬರ್ತಡೆ ಪಾರ್ಟಿ; ಬ್ಯುಟಿಷಿಯನ್ ಮೇಲೆ ಗೆಳೆಯರಿಂದಲೇ ಗ್ಯಾಂಗ್‌ರೇಪ್! ..

ಈ ವಿಡಿಯೋ ಕುರಿತು ಬೆಂಗಳೂರು ನಗರ ಪೊಲೀಸ್‌ ಟ್ವಿಟರ್‌ ಖಾತೆಯಲ್ಲಿ ದೂರುಗಳು ಸಲ್ಲಿಕೆಯಾಗಿದ್ದವು. ಅಲ್ಲದೆ, ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯ ಎಂಬಾಕೆ ದೂರು ನೀಡಿದ್ದರು ಪೂರ್ವ ವಿಭಾಗ ಡಿಸಿಪಿ ಡಾ.ಎಸ್‌.ಡಿ. ಶರಣಪ್ಪ ತಿಳಿಸಿದ್ದಾರೆ.

ಸೋಂಕು ಪೀಡಿತೆ ಮೇಲೆ ಆ್ಯಂಬುಲೆನ್ಸ್‌ ಡ್ರೈವರ್‌ ಅತ್ಯಾಚಾರ! ...

ಕಬ್ಬನ್‌ ರಸ್ತೆಯಲ್ಲಿ ಸಂಗೀತಾ ಪತಿ ಟ್ರಾನ್ಸ್‌ಪೋರ್ಟ್‌ ಕಚೇರಿ ಹೋಂದಿದ್ದಾರೆ. ಟೈಯರ್‌ ಅಂಗಡಿ ಮಾಲಿಕನಿಂದ ತಮ್ಮ ವಾಹನಗಳಿಗೆ ಬೇಕಾದ ಟೈಯರ್‌ಗಳನ್ನು ಖರೀದಿಸಿದ್ದರು. ಆದರೆ, ಹಣ ಪಾವತಿ ಮಾಡಿರಲಿಲ್ಲ. 2019ರ ಮೇ 29ರಂದು ಸಂಗೀತಾ ಮನೆಗೆ ಟೈಯರ್‌ ಅಂಗಡಿ ಮಾಲೀಕ ತೆರಳಿದ್ದರು. ಆಗ ಸಂಗೀತಾ, ಹಣ ವಸೂಲಿಗೆ ಬಂದವರ ಮೇಲೆ ಗಲಾಟೆ ಮಾಡಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ವೈರಲ್‌ ಆಗಿತ್ತು. ಸಂಗೀತಾ ವರ್ತನೆ ವಿರುದ್ಧ ಟ್ವಿಟರ್‌ನಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತು. ಕೆಲವರು ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಶೇರ್‌ ಮಾಡಿ ಸಂಗೀತಾ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದರು.