Asianet Suvarna News Asianet Suvarna News

ಮೈಸೂರು ಜ್ಯುವೆಲರಿ ಕಳ್ಳರ ಮಾಹಿತಿ ಕೊಟ್ರೆ 5 ಲಕ್ಷ ಬಹುಮಾನ!

  • ವಿದ್ಯಾರಣ್ಯಪುರಂನಲ್ಲಿರುವ ಚಿನ್ನಾಭರಣದಂಗಡಿಗೆ ನುಗ್ಗಿ ದರೋಡೆ ನಡೆಸಿ ಅಮಾಯಕನ ಹತ್ಯೆ 
  • ನಾಲ್ವರು ದರೋಡೆಕೋರರ ಕುರಿತು ಮಾಹಿತಿ ನೀಡಿದರೆ 5 ಲಕ್ಷ ರು. ಬಹುಮಾನ 
Mysuru Police announced Rs 5 lakh reward for information about jewellery shop theft case snr
Author
Bengaluru, First Published Aug 25, 2021, 12:52 PM IST
  • Facebook
  • Twitter
  • Whatsapp

ಮೈಸೂರು (ಆ.25): ಇಲ್ಲಿನ ವಿದ್ಯಾರಣ್ಯಪುರಂನಲ್ಲಿರುವ ಚಿನ್ನಾಭರಣದಂಗಡಿಗೆ ನುಗ್ಗಿ ದರೋಡೆ ನಡೆಸಿ ಅಮಾಯಕನ ಹತ್ಯೆ ಮಾಡಿ ಪರಾರಿಯಾಗಿರುವ ನಾಲ್ವರು ದರೋಡೆಕೋರರ ಕುರಿತು ಮಾಹಿತಿ ನೀಡಿದರೆ 5 ಲಕ್ಷ ರು. ಬಹುಮಾನ ನೀಡುವುದಾಗಿ ಮೈಸೂರು ಪೊಲೀಸರು ಘೋಷಿಸಿದ್ದಾರೆ. 

ಆ.23 ರಂದು ಜ್ಯುವೆಲ್ಲರಿ ಶಾಪ್‌ಗೆ ನಾಲ್ಕು ಜನ ನುಗ್ಗಿ ಮಾರಕಾಸ್ತ್ರದಿಂದ ಬೆದರಿಸಿ ದರೋಡೆ ನಡೆಸಿದ್ದರು.

ಎಣ್ಣೆ ಏಟಲ್ಲಿ ATM ಕದಿಯಲು ಬಂದು ಅಲ್ಲಿಯೇ ತಗಲಾಕ್ಕೊಂಡ ಉಪೇಂದ್ರ!
 
ಈ ಸಂದರ್ಭದಲ್ಲಿ ಅಮಾಯಕನೊಬ್ಬ ಗುಂಡಿಗೆ ಬಲಿಯಾಗಿದ್ದಾನೆ. ಪ್ರಕರಣವನ್ನು ನಗರ ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಪತ್ತೆಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ಪ್ರಕರಣವನ್ನು ಭೇದಿಸಲು ಸುಮಾರು 25 ಪೊಲೀಸ್‌ ಅಧಿಕಾರಿಗಳು ಮತ್ತು 80 ಪೊಲೀಸ್‌ ಸಿಬ್ಬಂದಿ ಒಳಗೊಂಡ ತಂಡಗಳನ್ನುರಚಿಸಲಾಗಿದೆ. ಸಾರ್ವಜನಿಕರು ಪ್ರಕರಣ ಭೇದಿಸಲು ಸಹಕರಿಸಿದಲ್ಲಿ ಅಂಥವರಿಗೆ .5 ಲಕ್ಷ ನಗದು ಬಹುಮಾನ ನೀಡಲಾಗುವುದು, ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿರಿಸಲಾಗುವುದು ಎಂದು ತಿಳಿಸಿದರು.

Follow Us:
Download App:
  • android
  • ios