ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ವೇಣುಗೋಪಾಲ್ ಪತ್ನಿ ಪೂರ್ಣಿಮಾ ಆರೋಪ
ನನ್ನ ಗಂಡ ಹತ್ತು ಜನ ಬಂದರೂ ಹೆದರುತ್ತಿರಲಿಲ್ಲ. ನನ್ನ ಗಂಡನ ಹತ್ಯೆ ವೈಯಕ್ತಿಕ ಕಾರಣದ ಕೊಲೆ ಅಲ್ಲ. ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ ಎಂದು ಮೃತ ವೇಣುಗೋಪಾಲ್ ನಾಯಕ್ ಪತ್ನಿ ಪೂರ್ಣಿಮಾ ತಿಳಿಸಿದರು.
ಮೈಸೂರು (ಜು.14): ನನ್ನ ಗಂಡ ಹತ್ತು ಜನ ಬಂದರೂ ಹೆದರುತ್ತಿರಲಿಲ್ಲ. ನನ್ನ ಗಂಡನ ಹತ್ಯೆ ವೈಯಕ್ತಿಕ ಕಾರಣದ ಕೊಲೆ ಅಲ್ಲ. ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ ಎಂದು ಮೃತ ವೇಣುಗೋಪಾಲ್ ನಾಯಕ್ ಪತ್ನಿ ಪೂರ್ಣಿಮಾ ತಿಳಿಸಿದರು. ಟಿ. ನರಸೀಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು- ವೇಣುಗೋಪಾಲ್ ಪ್ರೀತಿಸಿ ಮದುವೆ ಆಗಿದ್ದೆವು. ಮೂರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮಾಡುತ್ತಿದ್ದೇವೆ. ನನ್ನ ಗಂಡನ ಬಳಿ ಹಣ ಇಲ್ಲ, ಅಧಿಕಾರ ಇಲ್ಲ. ಆದರೂ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಿದ್ದೆವು.
ಅದನ್ನು ಸಹಿಸದೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ಇಲ್ಲವಾದರೆ ನಾನು, ನನ್ನ ಮಗಳು ಗಂಡ ಸತ್ತಂತೆಯೇ ಸಾಯುತ್ತೇವೆ. ಇಂದು ನನ್ನ ಗಂಡನನ್ನ ಸಾಯಿಸಿದ್ದಾರೆ. ಮುಂದಿನ ವರ್ಷ ನಾನು ಹನುಮ ಜಯಂತಿ ಮಾಡುತ್ತೇನೆ. ಆಗ ನನ್ನನ್ನು ಸಾಯಿಸುತ್ತಾರೆ. ಮುಂದಿನ ವರ್ಷ ನನ್ನ ಮಗಳು ಹನುಮ ಜಯಂತಿ ಮಾಡಿದ್ರೆ ಅವಳನ್ನೂ ಸಾಯಿಸುತ್ತಾರೆ. ಅಲ್ಲಿಗೆ ಹಿಂದೂ ಧರ್ಮವೂ ಸಾಯುತ್ತದೆ. ನನ್ನ ಗಂಡನ ಏಳಿಗೆ ಸಹಿಸದೆ ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.
ಬೆಂ-ಮೈ ಹೈವೇನಲ್ಲಿ ಅಪಘಾತ ತಡೆಗೆ ಕ್ರಮವಹಿಸಿ: ಸಂಸದ ಸುರೇಶ್ ಸೂಚನೆ
ಹನುಮ ಜಯಂತಿಯೇ ಕೊಲೆಗೆ ಕಾರಣ: ಹನುಮ ಜಯಂತಿ ಆಚರಣೆಯೇ ವೇಣುಗೋಪಾಲ್ ಕೊಲೆಗೆ ಕಾರಣ ಎಂದು ಪ್ರಕರಣದ ದೂರುದಾರ ಹಾಗೂ ಪ್ರತ್ಯಕ್ಷದರ್ಶಿ ರಾಮಾನುಜಂ ತಿಳಿಸಿದರು. ಟಿ. ನರಸೀಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮ ಜಯಂತಿಯಂದು ಬೆಳಗ್ಗೆ ಬೈಕ್ ಒಳಗೆ ಬಿಡುವ ವಿಚಾರಕ್ಕೆ ಆರೋಪಿಗಳಾದ ಮಣಿಕಂಠ, ಸಂದೇಶ್ ಗಲಾಟೆ ಮಾಡಿದ್ದರು. ಮೆರವಣಿಗೆ ಶುರುವಾಗುವ ಹೊತ್ತಿಗೆ ಪುನೀತ್ ರಾಜ್‌ಕುಮಾರ್ ಫೋಟೋ ತಂದರು. ಮತ್ತೊಬ್ಬರ ಪೋಟೋ ಅಂತಾರೆ. ಮತ್ತೊಬ್ಬರು ಇನ್ನೊಬ್ಬ ಕಲಾವಿದರ ಫೋಟೋ ಹಾಕಿ ಅಂತಾರೆ. ಗುಂಪು ಘರ್ಷಣೆಯಾದರೆ ಕಷ್ಟಅಂತ ವೇಣುಗೋಪಾಲ್ ಹೇಳಿದ್ದ. ಆಗಲೂ ನಿನ್ನನ್ನು ಸುಮ್ಮನೇ ಬಿಡಲ್ಲ ಕಣೋ ಅಂತ ಬೈದಿದ್ದರು ಎಂದರು.
ಶಾಮಿಯಾನ ವಾಪಸ್ ಕೊಡುವಾಗಲೂ ಬಂದು ಗಲಾಟೆ ಮಾಡಿ ತುಟಿಗೆ ಹೊಡೆದು ಹಲ್ಲೆ ಮಾಡಿದ್ದರು. ರಾತ್ರಿ ಕಾಲ್ ಮಾಡಿ ಬರಲು ಹೇಳಿದ್ದಾರೆ. ಬರದೇ ಇದ್ದರೆ ನಾವೇ ಮನೆಗೆ ಬರುತ್ತೇವೆ ಅಂತೆಲ್ಲ ಹೆದರಿಸಿದ್ದಾರೆ. ಹೀಗಾಗಿ ಅವರು ಕರೆದ ಕಡೆಗೆ ವೇಣುಗೋಪಾಲ್ ಹೋದ. ನಾನೂ ಹಿಂದೆ ಹೋದೆ. ಸವೀರ್‍ಸ್ ಸೆಂಟರ್‌ಗೆ ಹೋಗುತ್ತಿದ್ದಂತೆಯೇ ಜಾತಿ ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆರು ಜನರೂ ಸೇರಿ ಹಲ್ಲೆ ಮಾಡಿದ್ದಾರೆ. ಇನ್ನೂ ತುಂಬಾ ಜನ ಇದ್ದರು. ನನಗೆ ಗೊತ್ತಿದ್ದವರ ಬಗ್ಗೆ ಹೇಳಿಕೆ ಕೊಟ್ಟಿದ್ದೇನೆ ಎಂದು ಅವರು ಹೇಳಿದರು. ನಮಗೆ ಆಯುಧ ಬೀಸಿದರು. ಬಗ್ಗದೇ ಇದ್ದಿದ್ದರೆ ಕುತ್ತಿಗೆಗೆ ಬಿದ್ದು ನಾನೂ ಸಾಯುತ್ತಿದ್ದೆ. ವೇಣುಗೋಪಾಲ್‌ನನ್ನು ಆಸ್ಪತ್ರೆಗೆ ಸಾಗಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಹನುಮ ಜಯಂತಿ ಆಚರಣೆ ಮಾಡಿದ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಅವರು ದೂರಿದರು.
ವರ್ಗಾವಣೆ ರೇಟ್‌ಕಾರ್ಡ್: ಕುಮಾರಸ್ವಾಮಿ-ಚೆಲುವರಾಯಸ್ವಾಮಿ ವಾಗ್ವಾದ
ವೇಣುಗೋಪಾಲ್ ಕುಟುಂಬಕ್ಕೆ ನಾಯಕರ ಸಂಘದಿಂದ ಸಾಂತ್ವನ: ಹನುಮ ಜಯಂತಿಯಲ್ಲಿ ನಡೆದ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಶ್ರೀರಾಮಪುರ ಬೀದಿ ನಿವಾಸಿ ವೇಣುಗೋಪಾಲ ನಿವಾಸಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು. ಜಿಲ್ಲಾಧ್ಯಕ್ಷ ರಾಮಚಂದ್ರ, ಟಿ. ನರಸೀಪುರ ತಾಲೂಕು ನಾಯಕ ಸಂಘದ ಜೊತೆಗೂಡಿ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ನಾಯಕ ಸಂಘ ನಿಮ್ಮ ನೆರವಿಗೆ ನಿಲ್ಲಲಿದೆ ಎಂದು ಹೇಳಿದರು. ಜಿಲ್ಲಾ ನಾಯಕ ಸಂಘದ ಉಪಾಧ್ಯಕ್ಷ ಸುಬ್ಬಣ್ಣ, ಗುಂಡ್ಲುಪೇಟೆ ಮಹೇಶ್, ಕಪಿನಿನಾಯಕ, ನಗರಸಭಾ ಸದಸ್ಯ ಸುರೇಶ್, ಸುಂದರ್, ತಾಲೂಕು ನಾಯಕ ಸಂಘದ ಹಂಗಾಮಿ ಅಧ್ಯಕ್ಷ, ಚಿಕ್ಕಣ್ಣ, ಮುಖಂಡ ಎಂ.ಡಿ. ಬಸವರಾಜು, ಡಾ. ಮಹದೇವಯ್ಯ, ನಾಗರಾಜು, ಶಶಿಧರ್, ಅಣ್ಣಯ್ಯಸ್ವಾಮಿ, ಕುಮಾರ್ ಇದ್ದರು.