ಗುರುಮಠಕಲ್ [ಡಿ.02]: ಮುಸ್ಲಿಂ ಜನಾಂಗದ ಯುವಕನೊಬ್ಬ ಅಯ್ಯಪ್ಪಮಾಲೆ ಧರಿಸಿ, ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಮುನ್ನುಡಿ ಬರೆದಿದ್ದಾರೆ. ಸಮಾಜದಲ್ಲಿ ಇತ್ತೀಚಿಗೆ ಜಾತಿ, ಧರ್ಮದ ತಿಕ್ಕಾಟಗಳಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿರುವ ಹೊತ್ತಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತ್ಯೆಗೆ ಹೊಸ ಭಾಷ್ಯ ಬರೆದಿದ್ದಾನೆ ಬಾಬ್ಲು ಎಂಬ ಮುಸ್ಲಿಂ ಯುವಕ.

ಹೌದು. ಇದು ಗುರುಮಠಕಲ್ ಪಟ್ಟಣದಲ್ಲಿ ಬಾಬ್ಲು ಎಂಬ ಮುಸ್ಲಿಂ ಸಮುದಾಯದ ಯುವಕ ಅಯ್ಯಪ್ಪ ಮಾಲೆ ಧಾರಣೆ ಮಾಡಿ ಅಯ್ಯಪ್ಪ ಭಕ್ತನಾಗಿದ್ದಾನೆ. 

ಡ್ರೈವರ್ ವೃತ್ತಿ ಮಾಡುತ್ತಿರುವ ಬಾಬ್ಲು ಮೂಲತಃ ಮಹಾರಾಷ್ಟ್ರದ ಉಸ್ಮಾನಾಬಾದ್ ಗ್ರಾಮದವರು. ಗುರುಮಠಕಲ್ ಪಟ್ಟಣದಲ್ಲಿ ಖಾಸಗಿ ಕಂಪನಿಯ ಲಾರಿ ಡ್ರೈವರ್ ಆಗಿ ಕಳೆದ ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಕಂಪನಿಯ ಮಾಲೀಕ ನರೇಂದ್ರ ರಾಠೋಡ್ ಪ್ರೇರಣೆಯಿಂದ ಬಾಬ್ಲು ಅವರು ಗುರುವಾರದಂದು 41 ದಿನಗಳ ಕಾಲ ಅಯ್ಯಪ್ಪ ಮಾಲೆ ಪ್ರಥಮ ಬಾರಿ ಧಾರಣೆ ಮಾಡಿಕೊಂಡು ಕೊಮು
ಸೌಸಾರ್ದತೆಗೆ ಸಾಕ್ಷಿಯಾಗಿದ್ದಾನೆ.

ಅಯ್ಯಪ್ಪ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಶ್ವಾನ...

ಮೊದಲ ದಿನವೇ ಪೂಜ ಪಠಣದಲ್ಲಿ ನಿರತನಾಗಿ ಉಳಿದ ಎಲ್ಲ ಅಯ್ಯಪ್ಪ ಭಕ್ತರಿಗೆ ಬೆರಗು ಆಗುವಂತೆ ಮಾಡಿದ್ದಾನೆ. ಅಯ್ಯಪ್ಪ ಭಕ್ತರು ಪಾಲಿಸುವ ಎಲ್ಲ ನೀತಿ ನಿಯಮ, ಪೂಜೆ-ಪುನಸ್ಕಾರ ಮುಂತಾದವು ಗಳನ್ನು ತಪ್ಪದೇ ಪಾಲಿಸುತ್ತಿದ್ದಾನೆ. ಅಯ್ಯಪ್ಪಮಾಲೆ ಭಕ್ತರು 41 ದಿನ ಮಂಡಳವನ್ನು ಪೂರೈಸಿ ಶಬರಿಮಲೆಗೆ ಹೊಗುವ ಸಂದರ್ಭದಲ್ಲಿ ಅರಣ್ಯದ ಮಧ್ಯೆಭಾಗದಲ್ಲಿ ದೊಡ್ಡ ಪಾದ ರಸ್ತೆ ನಡೆಯುವ ಮೊದಲು ಅಯ್ಯಪ್ಪ ಸ್ವಾಮಿಯ ಶಿಷ್ಯ ಬಾಬರ ಸ್ವಾಮಿ ಅವರ ದರ್ಗಾ ಇದೆ. 

ಶಬರಿಮಲೆ ಅಯ್ಯಪ್ಪ ಸನ್ನಿಧಿ ಪ್ರಸಾದಕ್ಕಿನ್ನು ಪೇಟೆಂಟ್‌!...

ಪ್ರಥಮ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿದ ಭಕ್ತರು ದರ್ಗಾದ ದರ್ಶನ ಪಡೆದು ಮೈಮೇಲೆ ವಿವಿಧ ಬಣ್ಣ ಹಚ್ಚಿಕೊಂಡು ಪೆಟೆತುಳ್ಳಲೆ ಆಟ ಆಡು ತ್ತಾರೆ. ನಂತರ ಅಡವಿಯಲ್ಲಿ ಯಾವ ಕಾಡು ಪ್ರಾಣಿ ಗಳ ಭಯವಿಲ್ಲದೆ ಅಯ್ಯಪ್ಪ ದರ್ಶನ ಪಡೆಯಲು ಬಾಬರ ಸ್ವಾಮಿ ಸಹಾಯಕನಾಗುತ್ತಾನೆ ಎಂಬ ಪ್ರತೀತಿ ಇದೆ. ಇದರಿಂದ ಎಲ್ಲ ಧರ್ಮದವರು ಅವರ ಭಕ್ತರಾಗಲು ಸಾಧ್ಯ ಎಂದು ಅಯ್ಯಪ್ಪ ಭಕ್ತರೊಬ್ಬರು ತಿಳಿಸುತ್ತಾರೆ.

ಪ್ರಥಮ ಬಾರಿ ನಾನು ಅಯ್ಯಪ್ಪ ಮಾಲೆ ಧರಿಸಿದಕ್ಕೆ ತುಂಬ ಸಂತಸವಾಗುತ್ತಿದೆ. ಮೊದಲಿನಿಂದಲೂ ಅಯ್ಯಪ್ಪ ಭಕ್ತರನ್ನು ಕಂಡು ನಾನು ಮಾಲೆ ಧರಿಸಬೇಕೆಂದು ಯೋಚಿಸುತ್ತಿದೆ. ಈ ಸಲ ಅವಕಾಶ ಕೂಡಿ ಬಂದಿದ್ದು ನನ್ನ ಅದೃಷ್ಟವಾಗಿದೆ.

-ಬಾಬ್ಲು, ಅಯ್ಯಪ್ಪ ಮಾಲೆ ಧಾರಣೆಯ ಮುಸ್ಲಿಂ ಯುವಕ, ಗುರುಮಠಕಲ್‌