ವಿಜಯಪುರ(ಫೆ.17): ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪ‌ರ ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಅದು ನಮಗೂ ಗೊತ್ತಿದೆ. ಅವರಿಗೂ ಗೊತ್ತಿದೆ. ಹಾಗೆ ಮಾಡಬಾರದಿತ್ತು ಎಂದು ಹೇಳುವ ಮೂಲಕ ಸಂಸದ ರಮೇಶ ಜಿಗಜಿಣಗಿ ಹಾರಿಕೆಯ ಉತ್ತರ ಕೊಟ್ಟಿದ್ದಾರೆ. 

ಸೋಮವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಪ್ರಚಾರ ಪ್ರಿಯನಲ್ಲ. ಸಣ್ಣ ಪುಟ್ಟ ಕೆಲಸ, ಕಾಮಗಾರಿಗಳಿಗೆ ಊರಲ್ಲಿ ಪೋಸ್ಟರ್ ಹಾಕಿಕೊಳ್ಳಲ್ಲ. ಕೆಲವರು ಎಲ್ಲ ಕಡೆ ತಮ್ಮ ಫೋಟೋ ಹಾಕಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ ಟಾಂಗ್ ಕೊಟ್ಟಿದ್ದಾರೆ. 

ಹುಬ್ಬಳ್ಳಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೇಸ್; ಪ್ರಕರಣಕ್ಕೆ ಸಿಕ್ತು ಬಿಗ್‌ ಟ್ವಿಸ್ಟ್!

ನಾನು 40 ವರ್ಷಗಳಿಂದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಎಂದೂ ಪ್ರಚಾರಕ್ಕೆ ಬೆನ್ನು ಹತ್ತಿದ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ.

News In 100 Seconds: ಪ್ರಮುಖ ಸುದ್ದಿಗಳು

"