Asianet Suvarna News Asianet Suvarna News

ಮೈಸೂರು - ಮಂಗಳೂರು ನಡುವೆ ರೈಲು ಸೇವೆ..?

ಬೆಂಗಳೂರು ಮತ್ತು ಕಾರವಾರ ನಡುವೆ ಪ್ರತಿನಿತ್ಯ ಸಂಚರಿಸುವ ರೈಲನ್ನು ವಾರದಲ್ಲಿ ನಾಲ್ಕು ದಿನ ಮೈಸೂರು ಮಾರ್ಗವಾಗಿ ಸಂಚರಿಸುವಂತೆ ಮಾಡಬೇಕು ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ ಅವರು ರೈಲ್ವೆ ಸಚಿವ ಸುರೇಶ್‌ ಅಂಗಡಿ ಅವರನ್ನು ಕೋರಿದ್ದಾರೆ.

mp pratap simha request railway minister to provide new train between mysore and mangalore
Author
Bangalore, First Published Feb 6, 2020, 1:01 PM IST

ಮೈಸೂರು(ಫೆ.06): ಬೆಂಗಳೂರು ಮತ್ತು ಕಾರವಾರ ನಡುವೆ ಪ್ರತಿನಿತ್ಯ ಸಂಚರಿಸುವ ರೈಲನ್ನು ವಾರದಲ್ಲಿ ನಾಲ್ಕು ದಿನ ಮೈಸೂರು ಮಾರ್ಗವಾಗಿ ಸಂಚರಿಸುವಂತೆ ಮಾಡಬೇಕು ಎಂದು ಮೈಸೂರು- ಕೊಡಗು ಲೋಕಸಭಾ ಸದಸ್ಯ ಪ್ರತಾಪಸಿಂಹ ಅವರು ರೈಲ್ವೆ ಸಚಿವ ಸುರೇಶ್‌ ಅಂಗಡಿ ಅವರನ್ನು ಕೋರಿದರು.

ಬೆಳಗಿನ ವೇಳೆ ಮೈಸೂರು- ಮಂಗಳೂರು ರೈಲು ಸಂಚಾರಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಈ ರೈಲು ಮೈಸೂರು ಮಾರ್ಗವಾಗಿ ಸಂಚರಿಸಿದರೆ ಅನುಕೂಲವಾಗಲಿದೆ. ಈ ಸಂಬಂಧ ರೈಲ್ವೆ ವಲಯವು ಸರ್ವೇ ನಡೆಸಿದೆ.

ದಾರಿ ತಪ್ಪಿ ಬಂದ ಪುಟ್ಟ ಆನೆ ಮರಿಯ ಆಕ್ರಂದನ..! ಅಮ್ಮನಿಗಾಗಿ ಅಳು

ಬಸ್‌ಗಳು ಚಾರ್ಮಾಡಿ ಘಾಟ್‌ ಮೂಲಕ ಸಂಚರಿಸುವುದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಅನಾನುಕೂಲವಾಗಿದೆ. ಈ ರೈಲು ಮಾರ್ಗಕ್ಕೆ ಅನುಮತಿ ನೀಡುವುದರಿಂದ ರಾಜ್ಯದ ಎರಡು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ ಎಂದು ಅವರು ಕೋರಿದ್ದಾರೆ.

ಅಂತೆಯೇ ಮೈಸೂರಿನ ರೈಲ್ವೆ ಮ್ಯೂಸಿಯಮ್‌ ನವೀಕರಣ ಮತ್ತು ಅಭಿವೃದ್ಧಿಗೆ ಅಗತ್ಯವಿರುವ . 5 ಕೋಟಿ ನೀಡಲು ಸೂಚನೆ ನೀಡಿದ ಸಚಿವ ಸುರೇಶ್‌ ಅಂಗಡಿ ಅವರಿಗೆ ಧನ್ಯವಾದ ಅರ್ಪಿಸಿದರು.

Follow Us:
Download App:
  • android
  • ios