ಚಿಕ್ಕಮಗಳೂರು[ಆ.01]: ಕಾಫಿ ಸಾಮ್ರಾಟ್ ವಿ. ಜಿ ಸಿದ್ಧಾರ್ಥ್ ಕಳೆದುಕೊಂಡು ಹುಟ್ಟೂರು ಚಿಕ್ಕಮಗಳೂರಿನ ಚೇತನಹಳ್ಳಿಯಲ್ಲಿ ಕರಾಳ ಮೌನ ಆವರಿಸಿದೆ.

ಸಿದ್ದಾರ್ಥ್ ಸಮಾಧಿಗೆ ಪುತ್ರರಾದ ಅಮರ್ತ್ಯ ಹಾಗೂ ಈಶಾನ್ ರಿಂದ ಹಾಲು ತುಪ್ಪ ಬಿಟ್ಟು ಕುಟುಂಬಸ್ಥರಿಂದ ಅಂತಿಮ ವಿಧಿ ವಿಧಾನ ಕಾರ್ಯ ನೆರವೇರಿಸಲಾಯ್ತು.

ಒಂದು ಕುಡಿಕೆಯಲ್ಲಿ ಸಿದ್ಧಾರ್ಥ್ ಅಸ್ಥಿ ಸಂಗ್ರಹ ಮಾಡಿದ್ದು, 5,9 ಅಥವಾ 11 ದಿನಕ್ಕೆ ಅಸ್ಥಿ ವಿಸರ್ಜನೆ ಮಾಡುವ ಜತೆಗೆ ಎಲ್ಲಾ ಕಾರ್ಯಕ್ರಮ ಸರಳವಾಗಿ ನೆರವೇರಿಸಲು ಕುಟುಂಬಸ್ಥರು ನಿರ್ಧಾರ ಮಾಡಲಾಗಿದೆ.