Asianet Suvarna News Asianet Suvarna News

ಹೆತ್ತ ಮಗಳನ್ನೇ ಎರಡನೇ ಗಂಡನ ಜೊತೆ ಸೇರಿ ಕೊಂದಳು ತಾಯಿ

ತಾನು ಹೆತ್ತ ಮಗಳನ್ನೇ ತಾಯಿಯೇ ಕೊಂದ ಘಟನೆ ದುರ್ಘಟನೆ ಮೈಸೂರಲ್ಲಿ ನಡೆದಿದೆ. 

Mothers Killed Her Daughter in Mysuru
Author
Bengaluru, First Published Sep 6, 2020, 3:34 PM IST
  • Facebook
  • Twitter
  • Whatsapp

ಮೈಸೂರು (ಸೆ.06): ಸ್ವಂತ ತಾಯಿಯೇ ಹೆತ್ತ ಮಗುವನ್ನು ಕೊಲೆ ಮಾಡಿದ ಅಮಾನವೀಯ ಘಟನೆ  ಮೈಸೂರಿನಲ್ಲಿ ನಡೆದಿದೆ. 

ಮೈಸೂರಿನ ಪವಿತ್ರ ಎಂಬಾಕೆ ಮಗಳು ಜಯಲಕ್ಷ್ಮೀ (6) ಹತ್ಯೆ ಮಾಡಿದ್ದಾಳೆ.ತನ್ನ ಮೊದಲ ಗಂಡನ ಪುತ್ರಿಯನ್ನು ಎರಡನೇ ಗಂಡ ಸೂರ್ಯ ಹಾಗೂ ಅತ್ತೆ ಗೌರಮ್ಮನ ಜೊತೆ ಸೇರಿ ಹತ್ಯೆ ಮಾಡಿದ್ದಾಳೆ.

ತಾನು ಹೆತ್ತ ಮಗಳನ್ನೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ತಾಯಿ ಪವಿತ್ರ, ಆಕೆಯ ಪತಿ ಸೂರ್ಯ ಹಾಗೂ ಗೌರಮ್ಮನನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಸುಶಾಂತ್ ಸಿಂಗ್ ಸಾವಿನ ಕೇಸ್‌ಗೂ ಕಾರ್ಪೋರೇಟರ್‌ ಮಗನಿಗೂ ಸಂಬಂಧ; NCB ಯಿಂದ ರೋಚಕ ಕಾರ್ಯಾಚರಣೆ! ...

 8 ವರ್ಷಗಳ ಹಿಂದೆ ಸಿದ್ದೇಶ್ ಎಂಬಾತನನ್ನು ಮದುವೆಯಾಗಿದ್ದ ಪವಿತ್ರ, ಆತ ಇರುವಾಗಲೇ ಮತ್ತೋರ್ವನನ್ನು ಮದುವೆಯಾಗಿದ್ದಳು. ಮೊದಲ ಪತಿಗೆ ಜನಿಸಿದ ಮಗಳನ್ನು ಕೊಲೆ ಮಾಡಿ ಜೈಲು ಸೇರಿದ್ದಾಳೆ. 

ಮೊದಲ ಪತಿಗೆ ಜನಿಸಿದ ಮಗಳ ಮೇಲೆ ಸದಾ ದ್ವೇಷ ಸಾದಿಸುತ್ತಿದ್ದ ತಾಯಿ ಪವಿತ್ರ  ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ 
 
ಮಲಗಿದ್ದ ವೇಳೆ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಅನುಮಾನ ಬಾರದಂತೆ ಬಾಲಕಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದು, 
ಮೊದಲ ಪತಿ ಸಿದ್ದೇಶ್ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ. 

ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಸಹಜ ಸಾವು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಅಸಹಜ ಸಾವು ಎಂದು ಧೃಡಪಟ್ಟಿದೆ. 

Follow Us:
Download App:
  • android
  • ios