Asianet Suvarna News Asianet Suvarna News

ಸೋದರತ್ತೆ ಮಗಳನ್ನು ಪ್ರೀತಿಸಿದ ಪ್ರವೀಣ ಅನಾಥ ಹೆಣವಾದ; ಮಾತುಕತೆಗೆ ಕರೆಸಿಕೊಂಡು ಕೊಂದೇಬಿಟ್ಟರು!

ಸೋದರತ್ತೆ ಮಗಳನ್ನು ಪ್ರೀತಿಸಿದ ಪ್ರವೀಣ ಅನಾಥ ಹೆಣವಾದ; Instagram ನಲ್ಲಿ ಅತ್ತೆ ಮಗಳ ಫೋಟೋ ಹಾಕಿದವನ ಫೋಟೋಗೆ ಹೂವಿನ ಹಾರ ಬಿತ್ತು!
 

Mother in law daughter loved praveen was brutal murder from relative in Kalaburagi sat
Author
First Published Jul 11, 2024, 6:17 PM IST

ಕಲಬುರಗಿ (ಜು.11): ಅಪ್ಪನ ತಂಗಿ ಅಂದರೆ ಸೋದರತ್ತೆಯ ಮಗಳೆಂಬ ಸಲುಗೆಯಿಂದ ಹುಡುಗಿಯನ್ನು ಪ್ರೀತಿ ಮಾಡಿದ ಪ್ರವೀಣ, ಅತ್ತೆಯ ಮಗಳ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದನು. ಆದರೆ, ಅಂತಸ್ತಿನಲ್ಲಿ ಬಡವರಾಗಿದ್ದ ಪ್ರವೀಣನಿಗೆ ಮಗಳನ್ನು ಕೊಟ್ಟು ಮದುವೆ ಮಾಡಲೊಪ್ಪದ ಅತ್ತೆಯ ಮಗ, ಮಾವನ ಮಗನನ್ನು ರಾಜಿ ಪಂಚಾಯಿತಿ ಮಾಡಿಕೊಳ್ಳೋಣ ಎಂದು ಪ್ರವೀಣನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಕಂಠಪೂರ್ತಿ ಕುಡಿಸಿ ಕೊಲೆ ಮಾಡಿ ಬೀಸಾಡಿದ್ದಾರೆ.

ಹೌದು, ಅವನು ಟಂ ಟಂ ಡ್ರೈವರ್​​... ಮನೆಯಲ್ಲಿ ಕಡುಬಡತನ.. ಅಪ್ಪ ಅಮ್ಮ ಮತ್ತು ಇಬ್ಬರು ತಂಗಿಯರು.. ಹೆತ್ತವರು ಕೂಲಿ ನಾಲಿ ಮಾಡಿ ಮಕ್ಕಳನ್ನ ದೊಡ್ಡವರನ್ನಾಗಿ ಮಾಡಿದ್ರು.. ಇನ್ನೂ ಈತ ಗಂಡು ಮಗ ಆಗಿದ್ರಿಂದ ಈತನ ಮೇಲೆ ಹೆಚ್ಚಿನ ಜವಬ್ದಾರಿ ಇತ್ತು.. ಹೀಗಾಗಿ ಓದಿಗೆ ಬ್ರೇಕ್​ ಹಾಕಿ ಹೆತ್ತವರಿಗೆ ಸಹಾಯ ಮಾಡೋದಕ್ಕೆ ಶುರುಮಾಡಿದ್ದ.. ಬಾಡಿಗೆ ಟಂ ಟಂ ಓಡಿಸಿಕೊಂಡು ಬಿಡಿಗಾಸು ಸಂಪಾಧಿಸುತ್ತಿದ್ದ.. ಒಂದೇ ಮಾತಿನಲ್ಲಿ ಹೇಳಬೇಕಾದ್ರೆ ಆ ಮನೆಗೆ ಇವನೇ ದಿಕ್ಕಾಗಿದ್ದ.. ಆದ್ರೆ ಇಂಥವನು ಆವತ್ತು ಹೆಣವಾಗಿ ಸಿಕ್ಕಿದ್ದ.. ಯಾರೋ ಆತನನ್ನ ಬರ್ಬರವಾಗಿ ಕೊಂದು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ರು.. ಇನ್ನೂ ತನಿಖೆ ನಡೆಸಿದ ಪೊಲೀಸರು ಹಂತಕರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ..

ಗೂಗಲ್‌ಗೂ ಗೊತ್ತಾಯ್ತು ಪಟ್ಟಣಗೆರೆ ಶೆಡ್ಡಿನ ಗಮ್ಮತ್ತು; ಈ ಲೊಕೇಶನ್‌ಗೆ 5 ಸ್ಟಾರ್ ರಿವ್ಯೂವ್ಸ್ ನೋಡಿ ನೆಟ್ಟಿಗರು ಸುಸ್ತು

ಮಲ್ಲಿಕಾರ್ಜುನ ಮತ್ತು ಪ್ರವೀಣ ಇಬ್ಬರೂ ಅಣ್ಣ ತಂಗಿ ಮಕ್ಕಳು. ಪ್ರವೀಣ ತನ್ನ ತಂದೆಯ ತಂಗಿ (ಅತ್ತೆಯ) ಮಗಳನ್ನೇ ಪ್ರೀತಿಸಿದ್ದ. ಆಕೆ ಕೂಡ ಈತನನ್ನ ಪ್ರೀತಿಸುತ್ತಿದ್ದಳು. ಆದ್ರೆ ಇವರಿಬ್ಬರ ಪ್ರೀತಿ​ಗೆ ಅಡ್ಡಿಯಾಗಿದ್ದು ಮಾತ್ರ ಅಂತಸ್ತು. ಕಳೆದ 6 ತಿಂಗಳ ಹಿಂದೆ ಇವರಿಬ್ಬರ ಲವ್​ ಸ್ಟೋರಿ ಹುಡುಗಿ ಮನೆಯವರಿಗೆ ಗೊತ್ತಾದ ಮೇಲೆ ಪ್ರವೀಣನನ್ನ ಕರೆಸಿ ಇದನ್ನೆಲ್ಲ ಬಿಟ್ಟು ಬಿಡುವಂತೆ ಎಚ್ಚರಿಕೆ ನೀಡಿದ್ದರು. ಆದರೆ, ಪ್ರವೀಣ ಮಾತ್ರ ತನ್ನ ಪ್ರೀತಿಯನ್ನ ಬಿಟ್ಟುಕೊಟ್ಟಿರಲಿಲ್ಲ.

ಇನ್ನು ಹುಡುಗಿ ಮನೆಯವರಿಂದ ಪ್ರೀತಿಗೆ ವಿರೋಧ ಪರಿಸ್ಥಿತಿ ಇರುವಾಗಲೇ ಮೊನ್ನೆ ಯುವತಿಯ ಹೆತ್ತವರು ಮಗಳಿಗೆ ಬೇರೊಬ್ಬನ ಜೊತೆ ನಿಶ್ಚಿತಾರ್ಥ ದಿನಾಂಕ ನಿಗದಿ ಮಾಡಿದ್ದರು. ಮನೆ ಮಗಳು ಮದುವೆಯಾಗಿ ಹೋಗಬೇಕಾದ್ರೆ ಪ್ರವೀಣ ಅಡ್ಡ ಬರಬಾರದು ಅದಕ್ಕಾಗಿ ಅವನನ್ನೇ ಮುಗಿಸಿಬಿಡಬೇಕು ಅಂತ ಯುವತಿಯ ಅಣ್ಣ ನಿರ್ಧರಿಸಿ ಬಿಟ್ಟಿದ್ದಾನೆ. ಇದಕ್ಕಾಗಿ ಪಕ್ಕಾ ಪ್ಲಾನ್​ ಮಾಡಿಕೊಂಡು ತನ್ನ ಸ್ನೇಹಿತನನ್ನ ಕರೆದುಕೊಂಡು ಒಂದು ಪ್ಲಾನ್​​ ರೆಡಿ ಮಾಡಿ ಕೊಲೆ ಮಾಡಿದ್ದಾನೆ.

ಜೈಲಿನೊಳಗೆ ಕಾಡು ಹೇಗಿದ್ದೀಯಾ ಎಂದು ಕಣ್ಣೀರು ಹಾಕಿದ ನಟ ದರ್ಶನ್; ನಿರ್ಮಾಪಕ ಶಿವಕುಮಾರ್ ಭಾವುಕ

ಒಟ್ಟಾರೆ ಶ್ರೀಮಂತರ ಮನೆಯ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ಬಡವರ ಮನೆಯ ಹುಡುಗ ಪ್ರವೀಣ ಜೀವ ಕಳೆದುಕೊಂಡಿದ್ದಾನೆ. ಹೆತ್ತವರಿಗೆ ಆಸರೆಯಾಗಬೇಕಾದ ಮಗ ಹುಡುಗಿಯ ಹಿಂದೆ ಬಿದ್ದು ತಾನು ಹೆಣವಾಗಿ ಹೋಗಿದ್ದಲ್ಲದೇ ಹೆತ್ತವರನ್ನು ಅನಾಥರನ್ನಾಗಿ ಮಾಡಿದ್ದಾನೆ.

Latest Videos
Follow Us:
Download App:
  • android
  • ios