ಮೈಸೂರು[ಅ. 08] ಮೈಸೂರು ಜಂಬೂ ಸವಾರಿಯಲ್ಲಿ ಸ್ತಬ್ಧಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಈ  ಸಾರಿ ತುಮಕೂರು ಜಿಲ್ಲೆಯ ಸ್ತಬ್ಧ ಚಿತ್ರ ಸಿದ್ದಗಂಗಾ ಮಠ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ಹೊತ್ತು ಸಾಗಿತು.

ಸಿದ್ದಗಂಗಾ ಮಠದ ಸ್ತಬ್ಧಚಿತ್ರ ಹತ್ತಿರ ಬಂದಾಗ ವಸತಿ ಸಚಿವ ವಿ.ಸೋಮಣ್ಣ ಎದ್ದು ನಿಂತು ಕೈಮುಗಿದು ನಿಂತಿದ್ದರು. ಸ್ತಬ್ಧಚಿತ್ರ ಬಹುದೂರದವರೆಗೆ ಪಾಸ್ ಆಗುವವರೆಗೂ ಸೋಮಣ್ಣ ಹಾಗೇಯೇ ಇದ್ದರು.

ಸಂಪೂರ್ಣ ಮೈಸೂರು ದಸರಾ ಸಂಭ್ರಮ ಇಲ್ಲಿದೆ

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಈ ವರ್ಷದ ಆರಂಭ ಅಂದರೆ ಜನವರಿಯಲ್ಲಿ ಅಪಾರ ಭಕ್ತಗಣವನ್ನು ಅಗಲಿದ್ದರು. ಸೋಮಣ್ಣ ಮತ್ತು ಸಿದ್ದಗಂಗಾ ಮಠಕ್ಕೆ ಇರುವ ಅವಿನಾಭಾವ ಸಂಬಂಧ ಇಂದಿಗೂ ಮುಂದುವರಿದುಕೊಂಡು ಬಂದಿದೆ.

ಸಂಜೆ 4.30ಕ್ಕೆ ಹೊರಟ ಅಂಬಾರಿ ಸಂಜೆ 7 ಗಂಟೆಗೆ ಬನ್ನಿ ಮಂಟಪ ತಲುಪಿತು. ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯಿತು ಮತ್ತು ಸಾಹಸ ಪ್ರದರ್ಶನಗಳು ಗಮನ ಸೆಳೆದವು.