Asianet Suvarna News Asianet Suvarna News

ಗೌರಿ ಲಂಕೇಶ್‌ ಕೊಲೆ ಆರೋಪಿ ಜತೆ ಓಡಾಡೋ ಪ್ರತಾಪ್‌ ಸಿಂಹಗೆ ನಾಚಿಕೆಯಾಗಬೇಕು: ಪ್ರಿಯಾಂಕ ಖರ್ಗೆ ವಾಗ್ದಾಳಿ

ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಹಿಂದೆ ಇಂತಹ ಸಂಸ್ಥೆ, ಸಂಘಟನೆ ಮತ್ತು ಇಂತಹ ಆಲೋಚನೆಗಳು ಇವೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು. ಈ ರೀತಿ ಹೆಮ್ಮೆ ಪಟ್ಟುಕೊಳ್ಳಲು ಮಾಜಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ನಾಚಿಕೆ ಬರಬೇಕು ಕಿಡಿ ಕಾರಿದ ಸಚಿವ ಪ್ರಿಯಾಂಕ ಖರ್ಗೆ 
 

minister priyank kharge slams former bjp mp pratap simha grg
Author
First Published Aug 14, 2024, 11:41 AM IST | Last Updated Aug 14, 2024, 11:41 AM IST

ಕಲಬುರಗಿ(ಆ.14):  ಫೋಟೋ ವೈರಲ್‌ ಆಗುವುದು ಬೇರೆ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಹೆಮ್ಮೆ ಪಡುವುದು ಬೇರೆ. ಕಾರಣಗಳು ಏನೇ ಇರಬಹುದು, ಒಬ್ಬ ಚುನಾಯಿತ ಜನಪ್ರತಿನಿಧಿ ಆದವರು, ಸಾಂಸ್ಕೃತಿಕ ನಗರದ ರಾಯಭಾರಿ ಎಂದುಕೊಂಡು ಓಡಾಡುವವರು ಇವತ್ತು ಕೊಲೆ ಆರೋಪಿ ಜೊತೆ ಓಡಾಡ್ತಾರೆ. ಜೊತೆ ಜೊತೆಗೆ ಅದರ ಬಗ್ಗೆ ಅವರೇ ಸ್ವಂತ ಪ್ರಚಾರ ಕೊಡ್ತಾರೆ ಅಂದ್ರೆ ಅವರ ಮನಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗುತ್ತೆ ಎಂದು ಮೈಸೂರು ಕೊಡಗು ಮಾಜಿ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. 

ಪ್ರತಾಪ ಸಿಂಹ ಗೌರಿ ಲಂಕೇಶ್‌ ಹತ್ಯೆ ಆರೋಪಿ ಜೊತೆಗಿನ ಫೋಟೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ ಅವರು, ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಹಿಂದೆ ಇಂತಹ ಸಂಸ್ಥೆ, ಸಂಘಟನೆ ಮತ್ತು ಇಂತಹ ಆಲೋಚನೆಗಳು ಇವೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು ಎಂದು ಪ್ರಶ್ನಿಸಿದ್ದಾರೆ.  ಈ ರೀತಿ ಹೆಮ್ಮೆ ಪಟ್ಟುಕೊಳ್ಳಲು ಮಾಜಿ ಸಂಸದ ಪ್ರತಾಪ ಸಿಂಹ ಅವರಿಗೆ ನಾಚಿಕೆ ಬರಬೇಕು ಸಚಿವ ಪ್ರಿಯಾಂಕ ಖರ್ಗೆ ಕಿಡಿ ಕಾರಿದ್ದಾರೆ. 

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ, ಭ್ರಷ್ಟ ಸರ್ಕಾರ: ಪ್ರತಾಪ್‌ ಸಿಂಹ ವಾಗ್ದಾಳಿ

ಸಿಪಿ ಯೋಗೇಶ್ವರ ಕಾಂಗ್ರೆಸ್ ಕಡೆ ಮುಖ ಮಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಈ ಬಗ್ಗೆ ಯಾವುದೇ ರೀತಿಯಾದಂತಹ ಚರ್ಚೆಗಳು ನಮ್ಮಲ್ಲಿ ನಡೆದಿಲ್ಲ. ಸಿ.ಪಿ. ಯೋಗೇಶ್ವರ್ ಅವರು ಮೊನ್ನೆ ದೆಹಲಿಗೆ ಹೋದಾಗ ಅವರ ಹೈಕಮಾಂಡ್ ನವರು ಸರಿಯಾಗಿ ಸ್ಪಂದಿಸಿಲ್ಲ ಎನ್ನುವುದು ಗೊತ್ತಾಗಿದೆ. ಅವರಿಗೆ ಟಿಕೆಟ್ ಕೊಡುವುದು ಬಿಡುವುದು ಬಿಜೆಪಿ ಅವರಿಗೆ ಬಿಟ್ಟ ವಿಚಾರ. ಯೋಗೇಶ್ವರ್‌ ಅವರು ಮೊದಲು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ. ಆಮೇಲೆ ನಮ್ಮ ಪಕ್ಷದ ನಿರ್ಧಾರ ಹೊರಬೀಳಲಿದೆ. ಯಾರೇ ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತವಿದೆ. ನಮ್ಮ ಕಂಡೀಶನ್ ಇರುವುದು ನಮ್ಮ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರಬೇಕು ಎನ್ನುವುದು ಮಾತ್ರ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios