ನನ್ನ ಮೇಲೆ ರೇಪ್‌ ಕೇಸ್ ಹಾಕಿದ್ರು : ಸಚಿವ ಬಿಸಿ ಪಾಟೀಲ್

ತಮ್ಮ ವಿರುದ್ಧ ರೇಪ್ ಕೇಸ್ ದಾಖಲಾಗಿದ್ದ ಬಗ್ಗೆ ಸಚಿವ ಬಿ.ಸಿ ಪಾಟೀಲ್ ನೆನೆದರು. ರೈತರ ಹೋರಾಟ ಸ್ಥಳಕ್ಕೆ ತೆರಳಿದ್ದ ವೇಳೆ ಈ ವಿಚಾರ ಹೇಳಿದರು. 

Minister BC Patil Remember His Flash Back About Jail term snr

ಗುಂಡ್ಲುಪೇಟೆ (ಜ.24): ನಾನು ರೈತಪರ ಹೋರಾಟ ಮಾಡಿದ್ದ ಕಾರಣ ತಮ್ಮ ವಿರುದ್ಧ ಪೊಲೀಸ್‌ ಮಹಿಳಾ ಪೇದೆಯಿಂದಲೇ ಅತ್ಯಾಚಾರದ ಕೇಸು ಹಾಕಿದ್ದರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ಮುಂದಾದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಸಚಿವ ಬಿ.ಸಿ.ಪಾಟೀಲ್‌ ಹಸಿರು ಶಾಲು ಹಾಕಿದ್ದನ್ನು ರೈತಸಂಘದ ಮುಖಂಡರೊಬ್ಬರು ನೀವು ನಮ್ಮ ಹಸಿರು ಟವಲ್‌ ಹಾಕಿದ್ದೀರಾ ರೈತಪರ ಕೆಲಸ ಮಾಡಿ ಎಂದು ಆಗ್ರಹಿಸಿದರು. ರೈತರ ಮಾತಿಗೆ ಸಚಿವ ಬಿ.ಸಿ.ಪಾಟೀಲ್‌ ಪ್ರತಿಕ್ರಿಯಿಸಿ, ನಾನು ಸದಾ ರೈತಪರ ಹೋರಾಟ ನಡೆಸಿದ್ದೇನೆ. 

ರೈತರ ಆತ್ಮಹತ್ಯೆ ಬಗ್ಗೆ ಮತ್ತೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಸಚಿವ ..

ಈ ಹಿಂದೆ ರೈತಪರ ಹೋರಾಟ ನಡೆಸಿದ್ದಕ್ಕೆ 9 ದಿನ ಜೈಲಿಗೆ ಹಾಕಿದ್ದರು. ಬೆಳೆವಿಮೆ ಬಗ್ಗೆ ರೈತರೊಂದಿಗೆ ಸೇರಿ ಹೋರಾಟ ಮಾಡುವಾಗ ಲಾಠಿ ಚಾಚ್‌ರ್‍ ಮಾಡಿ ಬಂಧಿಸಿದ್ದರು. ಅತ್ಯಾಚಾರದ ಸುಳ್ಳು ಕೇಸ್‌ ಹಾಕಿ ನನ್ನನ್ನು ಜೈಲಿಗೆ ಕಳುಹಿಸಿದ್ದರು ಎಂದು ತಮ್ಮ ಹಳೆಯ ಘಟನೆಯನ್ನು ಹೇಳಿದರು.

Latest Videos
Follow Us:
Download App:
  • android
  • ios