Asianet Suvarna News Asianet Suvarna News

ತೋಟಬೆಂಗ್ರೆ ಗ್ಯಾಂಗ್‌ರೇಪ್‌: ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆ!

ತೋಟ ಬೆಂಗ್ರೆ ಬೀಚ್‌ಗೆ ವಿಹಾರಕ್ಕೆಂದು ಬಂದಿದ್ದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು 7 ಮಂದಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಆರೋಪಿಗಳು ಏಳಲ್ಲ, ಎಂಟು ಮಂದಿ ಎಂದು ತನಿಖೆ ಆರಂಭಿಸಿದ ಪೊಲೀಸರು ತಿಳಿಸಿದ್ದಾರೆ. 

mangalore rape case number of accused increased
Author
Mangalore, First Published Nov 28, 2018, 7:31 AM IST

ಮಂಗಳೂರು[ನ.28]: ಮಂಗಳೂರನ್ನು ಬೆಚ್ಚಿ ಬೀಳಿಸಿರುವ ನಗರದ ತೋಟ ಬೆಂಗ್ರೆ ಬೀಚ್‌ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಭಾಗಿಯಾಗಿದ್ದು ಏಳಲ್ಲ, ಎಂಟು ಮಂದಿ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತೋಟ ಬೆಂಗ್ರೆ ಬೀಚ್‌ಗೆ ವಿಹಾರಕ್ಕೆಂದು ಬಂದಿದ್ದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು 7 ಮಂದಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಆರೋಪಿಗಳು ಏಳಲ್ಲ, ಎಂಟು ಮಂದಿ ಎಂದು ತನಿಖೆ ಆರಂಭಿಸಿದ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ತೋಟ ಬೆಂಗ್ರೆ ನಿವಾಸಿಗಳಾದ ಆದಿತ್ಯ, ಸುಜನ್‌, ಪ್ರಜ್ವಲ್, ಕಾರ್ತಿಕ್‌, ಚಿಂತನ್‌ ಮತ್ತು ಅರುಣ್‌ ಎಂದು ಗುರುತಿಸಲಾಗಿದೆ. ಮತ್ತಿಬ್ಬರಲ್ಲಿ ಒಬ್ಬನ ಹೆಸರು ರಿಯಾಜ್‌ ಎಂದು ಹೇಳಲಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಬಂಧಿತರೆಲ್ಲರೂ ಮಾದಕ ವ್ಯಸನಿಗಳು ಎಂದು ಹೇಳಲಾಗಿದೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರು ಎಂಬ ಮಾಹಿತಿ ಇದ್ದು, ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸುತ್ತಿಲ್ಲ.

ಇದನ್ನೂ ಓದಿ: ಪ್ರೇಮಿ ಜೊತೆ ಬೀಚ್ ಗೆ ತೆರಳಿದ್ದ ಯುವತಿ ಮೇಲೆ ಎರಗಿದ ಕಾಮುಕರು

ಪೊಲೀಸರಿಂದ ಮರುಜೀವ:

ನ.18ರಂದು ನಡೆದಿದ್ದ ಈ ಅತ್ಯಾಚಾರ ಪ್ರಕರಣಕ್ಕೆ ಪೊಲೀಸರಿಂದಾಗಿಯೇ ಮರುಜೀವ ಸಿಕ್ಕಿದೆ. ಒಂದು ಹಂತದಲ್ಲಿ ಮುಚ್ಚಿಹೋಗಲಿದ್ದ ಈ ಘೋರ ಅತ್ಯಾಚಾರ ಪ್ರಕರಣವನ್ನು ಬೆಳಕಿಗೆ ತಂದದ್ದು ಪಣಂಬೂರು ಪೊಲೀಸರು. ಮೂಲಗಳಿಂದ ದೊರೆತ ಮಾಹಿತಿ ಮೇರೆಗೆ ಪಣಂಬೂರು ತನಿಖೆ ಆರಂಭಿಸಿದ ಪೊಲೀಸರು, ಸಂತ್ರಸ್ತರ ಬಗ್ಗೆ ಮಾಹಿತಿ ಕಲೆ ಹಾಕಿ, ಅವರ ಮನವೊಲಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಜೋಡಿಯ ಮಾಹಿತಿ ಗೌಪ್ಯವಾಗಿ ಇರಿಸಲಾಗಿದೆ. ಘಟನೆ ನಡೆದ ತೋಟ ಬೇಂಗ್ರೆ ಬೀಚ್‌ಗೆ ಸಂತ್ರಸ್ತರನ್ನು ಕರೆತಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬಿಹಾರ ಮೂಲದ ಯುವಕನೊಂದಿಗೆ ಬಂಟ್ವಾಳದ ಯುವತಿಯೊಬ್ಬಳು ನ.18ರಂದು ಮಂಗಳೂರು ಹೊರವಲಯ ತೋಟ ಬೆಂಗ್ರೆ ಸುತ್ತಾಡಲು ಬಂದಿದ್ದಳು. ಇಬ್ಬರು ಪ್ರೇಮಿಗಳು ಬೀಚ್‌ನಲ್ಲಿ ಸುತ್ತಾಡುತ್ತಿದ್ದ ಸಂದರ್ಭ ಮಾದಕ ವಸ್ತು ಸೇವಿಸಿದ 8 ಮಂದಿ ಯುವಕರ ತಂಡವೊಂದು ಯುವತಿ ಜೊತೆಗಿದ್ದ ಯುವಕನ ಮೇಲೆ ಹಲ್ಲೆ ನಡೆಸಿತ್ತು. ನಂತರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿತ್ತು.

Follow Us:
Download App:
  • android
  • ios