ಚಿಕ್ಕಬಳ್ಳಾಪುರ (ಫೆ.19):  ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕ ತನ್ನನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮೋಸ ಮಾಡಿದ್ದಾನೆಂದು ಆರೋಪಿಸಿ ಜಿಲ್ಲೆಯ ಚಿಂತಾಮಣಿ ನಗರದ ಯುವಕನೊಬ್ಬನ ವಿರುದ್ಧ ಮಂಡ್ಯದ ಮಹಿಳೆಯೊಬ್ಬರು ಗುರುವಾರ ಚಿಂತಾಮಣಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಚಿಂತಾಮಣಿ ನಗರದ ಇಡ್ಲಿಪಾಳ್ಯದ ನಿವಾಸಿ ಸತೀಶ್‌ ಎಂಬುವರ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಭಾವಿಗಳಿಗೆ ಮಣಿದು ಆರೋಪಿಯನ್ನು ಬಂಧಿಸಲು ಮುಂದಾಗುತ್ತಿಲ್ಲ ಎಂದು ಮೋಸ ಹೋದ ಮಹಿಳೆ ಆರೋಪಿಸಿದ್ದಾರೆ.

ಬರ್ತ್‌ ಡೇ ವಿಶ್ ನೆಪ ಹೇಳಿಕೊಂಡು ಸಹೋದರಿಯ ಪತಿಯನ್ನೇ ಹತ್ಯೆಗೈದ ಕಿರಾತಕರು ...

ಏನಿದು ಪ್ರಕರಣ:  2018 ರಲ್ಲಿ ಪೇಸ್‌ಬುಕ್‌ ಮೂಲಕ ಮಹಿಳೆಗೆ ಸತೀಶನ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿದೆ. ಸತೀಶ್‌ ತಾನು ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿ ಚಿಂತಾಮಣಿಯ ಇಡ್ಲಿಪಾಳ್ಯದಲ್ಲಿರುವ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿ, ಆಕೆಯ ಕೆಲವು ನಗ್ನ ಪೋಟಗಳನ್ನು ಹಾಗೂ ವಿಡಿಯೋ ಮಾಡಿದ್ದಾನೆ. ಮಹಿಳೆ ಮದುವೆಯಾಗುವಂತೆ ಒತ್ತಾಯಿಸಿದಾಗ ಅದಕ್ಕೆ ಒಪ್ಪದೇ ಅತ್ಯಾಚಾರವೆಸಗಿರುವ ವಿಚಾರ ಯಾರಿಗಾದರೂ ಹೇಳಿದರೂ ನಗ್ನಚಿತ್ರಗಳನ್ನು ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ.

ಅಲ್ಲದೇ ಮನೆ, ನಿವೇಶನ ಮಾರಿದ 15 ಲಕ್ಷ ರು. ಹಣ ಕೂಡ ನನ್ನಿಂದ ಪಡೆದಿದ್ದಾನೆ. ಆತನಿಂದ ನಾವು ಸಾಕಷ್ಟುಸಂಕಷ್ಟಎದುರಿಸಿದ್ದೇವೆ. ನಿತ್ಯ ಕುಡಿದು ಬಂದು ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಈ ಮಹಿಳೆಗೆ ಮೊದಲೇ ಮದುವೆಯಾಗಿದ್ದು ಪತಿಯಿಂದ ದೂರವಾಗಿದ್ದಳು. ಅಲ್ಲದೆ ಇಬ್ಬರು ಹೆಣ್ಣುಮಕ್ಕಳೂ ಇದ್ದಾರೆ ಎನ್ನಲಾಗಿದೆ.