ಹಾಸನ(ಸೆ.24): ಹೆಣ್ಣುಮಕ್ಕಳಿಗೆ ಮನೆಗಳಲ್ಲಿಯೇ ಸುರಕ್ಷತೆ ಇಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಹಾಸನಲ್ಲಿ ಹೇಯ ಕೃತ್ಯವೊಂದು ಘಟನೆ ನಡೆದಿದೆ. ಮಗಳನ್ನು ರಕ್ಷಿಸಬೇಕಾದ ಹೆತ್ತ ತಂದೆಯೇ ಸ್ವಂತ ಮಗಳ ಮೇಲೆ ನಿರಂತರ ಅತ್ಯಾ ಚಾರ ಎಸಗಿರುವುದು ಬೆಳಕಿಗೆ ಬಂದಿದೆ.

ಸಕಲೇಶಪುರದಲ್ಲಿ ಘಟನೆ ನಡೆದಿದ್ದು, ಕೆಲವು ತಿಂಗಳಿಂದ ನಿರಂತರವಾಗಿ ತನ್ನ ಮಗಳ ಮೇಲೆಯೇ ಈತ ಅತ್ಯಾಚಾರ ಎಸಗಿದ್ದಾನೆ. ಹೆತ್ತಪ್ಪನಿಂದ ಮೃಗೀಯ ಕೃತ್ಯ ನಡೆದಿದ್ದು, ಮಗಳ ಬಾಯಿಗೆ ಬಟ್ಟೆ ತುರುಕಿ ರಾತ್ರಿ ವೇಳೆ ಅತ್ಯಾಚಾರ ಎಸಗುತ್ತಿದ್ದ ಎಂಬುದು ತಿಳಿದುಬಂದಿದೆ.

ಅಂಗಳದಲ್ಲಿ ಆಡುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ

ಪತ್ನಿ ಮಲಗಿದ ಮೇಲೆ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದು ಕುಮಾರಸ್ವಾಮಿ, ದೇವೇಗೌಡರ ದೌರ್ಭಾಗ್ಯ : ತಂದೆ, ತಮ್ಮನ ವಿರುದ್ಧವೇ ಗುಡುಗಿದ ರೇವಣ್ಣ