ಬೆಂಗಳೂರು [ಜ.24]:  ಅನೈತಿಕ ಸಂಬಂಧ ವಿಚಾರವಾಗಿ ಪತ್ನಿಯ ಪ್ರಿಯಕರ ನಿಂದಲೇ ವ್ಯಕ್ತಿಯೊಬ್ಬನ ಹತ್ಯೆ ಮಾಡಿದ ಘಟನೆ ಕಾವಲ್ ಬೈರಸಂದ್ರದಲ್ಲಿ ಗುರುವಾರ ನಡೆದಿದೆ. 

ಕಾವಲ್ ಬೈರಸಂದ್ರದ ಇರ್ಫಾನ್ (30) ಮೃತ ವ್ಯಕ್ತಿ. ಇರ್ಫಾನ್ ಕೊಲೆ ಪ್ರಕರಣದಲ್ಲಿ ಆತನ ಪತ್ನಿಯ ಪ್ರಿಯಕರ ತೌಸಿಫ್‌ನನ್ನು ಡಿ.ಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಪತ್ನಿ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಹತ್ಯೆ: ಕೌಟುಂಬಿಕ ವಿಚಾರವಾಗಿ ಇರ್ಫಾನ್ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಇದರಿಂದ ಬೇಸತ್ತು ಆತನಿಂದ ಪ್ರತ್ಯೇಕಳಾದ ಪತ್ನಿ, ತನ್ನ ಪ್ರಿಯಕರ ತೌಸಿಫ್ ಜತೆ ನೆಲೆಸಿದ್ದಳು. ಈ ಬೆಳವಣಿಗೆಯಿಂದ ಕೆರಳಿದ ಇರ್ಫಾನ್, ಬುಧವಾರ ರಾತ್ರಿ ತೌಸಿಫ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದ. 

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು : ಕೊಂದೇ ಬಿಟ್ಟ ಪಾಪಿ !...

ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಇರ್ಫಾನ್‌ಗೆ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ.