shivamogga ಅಪ್ರಾಪ್ತೆ ಮೇಲೆ ಸಂಬಂಧಿಯಿಂದ ಅತ್ಯಾಚಾರ : ವಿಡಿಯೋ ಮಾಡ್ಕೊಂಡು ಹರಿಬಿಟ್ಟು ಈಗ ಅರೆಸ್ಟ್
- ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆಕೆಯ ಸಂಬಂಧಿ ಅರೆಸ್ಟ್
- ಸೊರಬ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ
ಶಿವಮೊಗ್ಗ (ಅ.10): ಅಪ್ರಾಪ್ತೆಯ (Minor girl ) ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆಕೆಯ ಸಂಬಂಧಿಯನ್ನ (Relative) ಬಂಧಿಸಲಾಗಿದೆ.
ಶಿವಮೊಗ್ಗ (Shivamogga) ಜಿಲ್ಲೆ ಸೊರಬ (Sorabha) ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಸೊರಬ ಪೊಲೀಸರಿಂದ (Police) ಶನಿವಾರ ಆರೋಪಿ ತೇಜಪ್ಪ ಕುಬೇರಪ್ಪ (35) ಎಂಬಾತನ ಬಂಧನವಾಗಿದೆ.
ಪಾಪಿ ಅಪ್ಪ: 6 ವರ್ಷದ ಮಗಳ ರೇಪ್ ಮಾಡಲಾಗಲಿಲ್ಲ ಎಂದು ಗುಪ್ತಾಂಗಕ್ಕೆ ಕೋಲು ಹಾಕಿದ!
ತೇಜಪ್ಪ ಕುಬೇರಪ್ಪ ಅಪ್ರಾಪ್ತೆ ಮೇಲೆ ಈತ ಅತ್ಯಾಚಾರ ಎಸಗಿ ವಿಡಿಯೋ (Video) ಚಿತ್ರೀಕರಿಸಿದ್ದ. ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ. ನಂತರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದ.
ಈ ಸಂಬಂಧ ಬಾಲಕಿ ಕುಟುಂಬಸ್ಥರು ನೀಡಿದ ದೂರಿನಾಧಾರದಲ್ಲಿ(Complaint) ಸೊರಬ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POSCO) ಹಾಗು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಿಪಿಐ (CPI) ಮರುಳಸಿದ್ದಪ್ಪ , ಪಿಎಸ್‌ಐ (PSI) ಪ್ರಶಾಂತ ಕುಮಾರ್ ನೇತೃತ್ವದ ತಂಡದಿಂದ ಆರೋಪಿಯ ಬಂಧನವಾಗಿದೆ.
ವಿಚಿತ್ರ ಕೇಸ್
ವಿಚಿತ್ರ ಮತ್ತು ವಿಲಕ್ಷಣ ಘಟನೆಗೆ ರಾಜ್ಯ ಸಾಕ್ಷಿಯಾಗಿದೆ. ಹೌದು, ವೃದ್ಧೆಯ ಮೇಲೆ ರೇಪ್ ಆಯ್ತು, ಮಹಿಳೆ ಮೇಲೆ ರೇಪ್ ಆಯ್ತು, ಮಗು ಮೇಲೆ ರೇಪ್ ಆಯ್ತು ಆದ್ರೆ ಇದು ಬೇರೆ ರೀತಿಯ ಸ್ಟೋರಿಯಾಗಿದೆ. ಇದು ಯುವಕನೇ ಯುವಕನ ಮೇಲೆ ರೇಪ್ ಮಾಡಿದ ವಿಲಕ್ಷಣ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ(Athani) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸ್‌ಗಾಗಿ ಕಾಯುತ್ತಿದ್ದ ಯುವಕನನ್ನ ಆರೋಪಿ ರಾಜು ನೀಲವ್ವ ಆಚಾರಟ್ಟಿ ಬೈಕ್ (Bike) ಮೇಲೆ ಹತ್ತಿಸಿಕೊಂಡು ಕರೆದೊಯ್ದು ನಿರ್ಜನ ಪ್ರದೇಶ ನೋಡಿ ಅನೈಸರ್ಗಿಕ ಸಂಭೋಗ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ನೊಂದ ಯುವಕ ಅಥಣಿ (Athani) ಪೊಲೀಸರಿಗೆ(Police) ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜು ನೀಲವ್ವ ಆಚಾರಟ್ಟಿನನ್ನ ಬಂಧಿಸಿದ್ದಾರೆ(Arrest). ಅನೈಸರ್ಗಿಕ ಸಂಭೋಗಕ್ಕೆ ಒಳಗಾದ ಯುವಕ ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾನೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.