ಆನೇಕಲ್ (ಬೆಂಗಳೂರು), [ಮೇ.17] : ಉತ್ಪನ್ನಗಳನ್ನು ಮಾರಾಟ ಮಾಡಲು ಬಂದಿದ್ದ ಸೇಲ್ಸ್ ಗರ್ಲ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹೊಸಕೋಟೆ ತಾಲ್ಲೂಕಿನ ಬೈಲ ನರಸಾಪುರ ಪ್ರದೇಶದ ಬಳಿ ನಡೆದಿದೆ.

ಹೊಟ್ಟೆ ಪಾಡಿಗಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಊರಿಗೆ ಬಂದಿದ್ದವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಇದೀಗ ಪೋಲಿಸರ ಅಥಿತಿಯಾಗಿದ್ದಾನೆ. ಆನೇಕಲ್ ತಾಲ್ಲೂಕಿನ ಗಂಗಾಪುರ ಗ್ರಾಮದ ನಿವಾಸಿ ರಮೇಶ್ (40) ಬಂಧಿತ ಆರೋಪಿ.

ಮೈಸೂರು: ಪ್ರಿಯಕರನ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಘಟನೆ ವಿವರ:
ಬೈಲ ನರಸಾಪುರದಲ್ಲಿ ಸಾಮಾಗ್ರಿಗಳನ್ನು ಮಾರಾಟ ಮಾಡಲು ಯುವತಿ ಆಗಮಿಸಿದ್ದಳು. ಸಂಜೆಯಾಗಿದ್ದರಿಂದ ಮರಳಿ ಮನೆಗೆ ಹೊರಡಲು  ಬಸ್ಸಿಗೆ ಕಾಯುತ್ತಿದ್ದಳು. ಆದರೆ, ಬಸ್ ಬಾರದ ಕಾರಣ ಯುವತಿ ಟಿವಿಎಸ್ ಬೈಕಿನಲ್ಲಿ ಬರುತ್ತಿದ್ದ ಆರೋಪಿ ರಮೇಶ್ ಬಳಿ ಡ್ರಾಪ್ ಕೇಳಿದ್ದಳು. 

ಇದೇ ಸಿಕ್ಕಿದ್ದೆ ಚಾನ್ಸ್ ಅಂತ ಯುವತಿಯನ್ನು ಹತ್ತಿಸಿಕೊಂಡ ಆರೋಪಿ ರಮೇಶ್, ನಿಮ್ಮೂರಿಗೆ ಹೀಗೆ ಹೋದ್ರೆ ಬೇಗ ಹೋಗಬಹುದು ಎಂದು ನಂಬಿಸಿ ತನ್ನ ತೋಟದ ಪಂಪ್ ಹೌಸ್ ಗೆ ಕರೆದುಕೊಂಡು ಹೋಗಿದ್ದಾನೆ.

ಪಂಪ್ ಹೌಸ್ ಬರುತ್ತಿದ್ದಂತೆಯೇ ಬೈಕ್ ನಿಂದ ಇಳಿದವನೇ ಯುವತಿಗೆ ಕುಡುಗೋಲಿನಿಂದ ಹಲ್ಲೆಗೆ ಯತ್ನಿಸಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಈ ವೇಳೆ ಯುವತಿ ಆರೋಪಿಯಿಂದ ತಪ್ಪಿಸಿಕೊಂಡು ಗ್ರಾಮದ ಕಡೆ ಓಡಿ ಹೋಗಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಘಟನೆ ಬಗ್ಗೆ ಯುವತಿ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಅನ್ವಯ ಆರೋಪಿ ರಮೇಶ್ ನನ್ನ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.