Asianet Suvarna News Asianet Suvarna News

ಕುಕನೂರು: ಸಂಭ್ರಮದ ಗುದ್ನೇಶ್ವರ ಪಂಚಕಳಸ ಮಹಾರಥೋತ್ಸವ

ಗುದ್ನೇಶ್ವರ ಪಂಚಕಳಸ ಮಹಾರಥೋತ್ಸವ ಜನಸಾಗರದ ನಡುವೆ ಅದ್ಧೂರಿಯಾಗಿ ನಡೆಯಿತು| ನಾನಾ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿ ತಮ್ಮ ಹರಕೆ ತಿರಿಸಿದರು|

Maharathotsava Held At Kukanur in Koppal District
Author
Bengaluru, First Published Dec 13, 2019, 7:35 AM IST

ಕುಕನೂರು(ಡಿ.13): ಪಟ್ಟಣದ ಗುದ್ನೇಶ್ವರ ಪಂಚಕಳಸ ಮಹಾರಥೋತ್ಸವ ಜನಸಾಗರದ ನಡುವೆ ಅದ್ಧೂರಿಯಾಗಿ ನಡೆಯಿತು. ಬೆಳಗ್ಗೆಯಿಂದ ಗುದ್ನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ನಾನಾ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿ ತಮ್ಮ ಹರಕೆ ತಿರಿಸಿದರು.

ಬಿನ್ನಾಳದಿಂದ ಬಸವೇಶ್ವರ ನಂದಿಕೋಲು, ಕಕ್ಕಿಹಳ್ಳಿಯಿಂದ ಶ್ರೀಅಳಿಯ ಚನ್ನಬಸವೇಶ್ವರನ ದೇವಸ್ಥಾನದ ಪಲ್ಲಕ್ಕಿ ಆಗಮಿಸಿದ ನಂತರ ಮಹಾರಥವನ್ನು ಪಲ್ಲಕ್ಕಿ, ನಂದಿಕೋಲು ಹಾಗೂ ಪಂಚಿನ ದಿವಟಿಗೆ ಪಂಚ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವದಕ್ಕೆ ಶ್ರೀಮಠದ ಪ್ರಭುಲಿಂಗ ದೇವರು ಚಾಲನೆ ನೀಡಿದರು. ಬೆಳಗ್ಗೆಯಿಂದ ನೆರೆದಿದ್ದ ಜನಸ್ತೋಮ ರಥ ಚಲಿಸುತ್ತಿದ್ದಂತೆ ಹರ್ಷೋದ್ಗಾರದಿಂದ ಜೈಕಾರ ಹಾಕಿದರು. ಪಂಜಿನ ಮೆರವಣಿಗೆ ವಿಶೇಷವಾಗಿ ಕಂಗೊಳಿಸಿತು. ಉತ್ತತ್ತಿ, ಬಾಳೆಹಣ್ಣು, ಹೂ ಭಕ್ತರು ಸಮರ್ಪಿಸಿದರು. ವಿಶೇಷವಾಗಿ ನವದಂಪತಿಗಳು ಗುದ್ನೇಶ್ವರ ರಥೋತ್ಸವ ಕಣ್ತುಂಬಿಕೊಂಡರು. ಸುಮಾರು ಒಂದೂವರೆ ಕಿಮೀ ದೂರದ ಪಾದಗಟ್ಟಿವರೆಗೆ ರಥೋತ್ಸವ ಸಾಗಿ, ಮುಂಚಿತ ಸ್ಥಳ ತಲುಪಿತು.ರಥೋತ್ಸವದುದ್ದಕ್ಕೂ ಮುಗಿಲು ಮುಟ್ಟುವ ಹರ್ಷೋದ್ಗಾರ ಮೊಳಗಿದವು. ಸಕಲ ಮಂಗಲವಾದ್ಯದೊಂದಿಗೆ ಸಹಸ್ರ ಭಕ್ತರ ಸಮ್ಮುಖದಲ್ಲಿ ಗುದ್ನೇಶ್ವರ ಪಂಚಕಳಸ ಮಹಾರಥೋತ್ಸವ ಸಂಪನ್ನವಾಯಿತು. ರಥೋತ್ಸವ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಸಹಸ್ರಾರು ಭಕ್ತರು ಮಹಾರಥೋತ್ಸವಕ್ಕೆ ಸಾಕ್ಷಿಯಾದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಉಪತಹಸೀಲ್ದಾರ್‌ ಸುರೇಶ ಮೂರಂಕಣದ, ಪಪಂ ಮುಖ್ಯಾಧಿಕಾರಿ ಶ್ರೀಶೈಲ್‌ಗೌಡ, ಗುದ್ನೇಶ್ವರ ದೇವಸ್ಥಾನದ ಕಮಿಟಿಯ ಸದಸ್ಯ ಸಿದ್ದಲಿಂಗಯ್ಯ ಬಂಡಿಮಠ, ಶಶಿ ಭಜಂತ್ರಿ, ಶಿವಣ್ಣ ರಾಯರಡ್ಡಿ, ಮುಖಂಡರಾದ ರಶೀದ್‌ಸಾಬ್‌ ಹಣಜಗೀರಿ, ಸಿದ್ದಲಿಂಗಯ್ಯ ಬಂಡಿ, ರುದ್ರಯ್ಯ ಇನಾಮದಾರ್‌, ಚನ್ನಬಸಯ್ಯ ಓಲಿ, ಅಯ್ಯಪ್ಪಜ್ಜ ಬ್ಯಾಳಿ, ವೇಂಕಟೇಶ ವಡ್ರ, ವೀರಯ್ಯ ತೋಂಟದಾರ್ಯಮಠ, ರುದ್ರಯ್ಯ ಇನಾಮದಾರ, ರುದ್ರಯ್ಯ ಗಲಬಿ, ಶರಣಯ್ಯ ಬಂಡಿ, ಗುದ್ನೇಯ್ಯ, ವೀರಯ್ಯ ದೇವಗಣಮಠ, ಚನ್ನಯ್ಯ, ಗುದ್ನೇಶ್ವರಸ್ವಾಮಿ ಸೇವಾ ಕಮಿಟಿ ಹಾಗೂ ಸಹಸ್ರ ಭಕ್ತರಿದ್ದರು.
 

Follow Us:
Download App:
  • android
  • ios