Asianet Suvarna News Asianet Suvarna News

ಭೂಗರ್ಭದಿಂದ ಲೀಥಿಯಂ ಪಡೆವ ಕಾರ್ಯ ಶುರು: 50 ಎಕರೆ ಭೂಮಿ ಅಗೆತ

ಇಂಡಿಯಾದಲ್ಲೇ ಪ್ರಥಮ ಬಾರಿಗೆ ಮಂಡ್ಯದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದು ಹಲವಾರು ಕುತೂಹಲಕರ ಸಂಗತಿಗೆ ಎಡೆ ಮಾಡಿಕೊಟ್ಟಿದೆ. ಮಂಡ್ಯದಲ್ಲಿ ಲೀಥಿಯಂ ನಿಕ್ಷೇಪದ ಬಗ್ಗೆ ವರದಿಯಾಗುತ್ತಿದ್ದಂತೆ ಮಂಡ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸುವ ಸೂಚನೆಯನ್ನೂ ಕೊಟ್ಟಿದೆ.

 

Lithium mining started in 50 acres of land at mandya
Author
Bangalore, First Published Feb 20, 2020, 2:24 PM IST

ಮಂಡ್ಯ(ಫೆ.20): ಇಂಡಿಯಾದಲ್ಲೇ ಪ್ರಥಮ ಬಾರಿಗೆ ಮಂಡ್ಯದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದು ಹಲವಾರು ಕುತೂಹಲಕರ ಸಂಗತಿಗೆ ಎಡೆ ಮಾಡಿಕೊಟ್ಟಿದೆ. ಮಂಡ್ಯದಲ್ಲಿ ಲೀಥಿಯಂ ನಿಕ್ಷೇಪದ ಬಗ್ಗೆ ವರದಿಯಾಗುತ್ತಿದ್ದಂತೆ ಮಂಡ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸುವ ಸೂಚನೆಯನ್ನೂ ಕೊಟ್ಟಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆ ತಗ್ಗಿಸಲು ಕೇಂದ್ರ ಸರ್ಕಾರ ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವ ಯೋಚನೆಯಲ್ಲಿದೆ. ಪರ್ಯಾಯ ಇಂಧನ ಬಳಕೆ ಸ್ವರೂಪವನ್ನು ಪತ್ತೆ ಹಚ್ಚಲು ಬಜೆಟ್‌ನಲ್ಲಿ ನೂರಾರು ಕೋಟಿಯನ್ನು ಮೀಸಲಿಟ್ಟಿದೆ. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬ್ಯಾಟರಿಗಳ ತಯಾರಿಕೆ ಅತ್ಯಗತ್ಯವಾದ ಲೀಥಿಯಂ ಲೋಹ ಮಂಡ್ಯದಲ್ಲೇ ಪತ್ತೆಯಾಗಿರುವುದು ಭಾರಿ ಸಂಚಲನ ಉಂಟು ಮಾಡಿದೆ.

ಕರ್ನಾಟಕಕ್ಕೆ ಮತ್ತೊಂದು ಲಾಟರಿ; ರಾಜ್ಯದಲ್ಲಿ ಸಿಕ್ತು ಅಪರೂಪ ಲೋಹದ ನಿಕ್ಷೇಪ

ಮಂಡ್ಯದ ಶ್ರೀರಂಗಪಟ್ಟಣ ಬಳಿ ಪತ್ತೆಯಾದ ಲೀಥಿಯಂ ಬಗ್ಗೆ ಕೇಂದ್ರ ಸರ್ಕಾರ ಗೌಪ್ಯವಾಗಿ ಇಟ್ಟಿದೆ. ಆದರೆ, ಕರೆಂಟ್‌ ಸೈಸ್ಸ್‌ ಲೇಖನದಲ್ಲಿ ಬಂದ ಮಾಹಿತಿಯಂತೆ ಲೀಥಿಯಂ ನಿಕ್ಷೇಪವು ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟಬೆಟ್ಟದ ಹಿಂಭಾಗದ ಗೋಮಾಳ ಪ್ರದೇಶದಲ್ಲಿ ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ - ಮರಳಗಾಲ ಗ್ರಾಮಗಳು ಈ ಪ್ರದೇಶಕ್ಕೆ ಹೊಂದಿಕೊಂಡಂತಿದೆ. 2017ನೇ ಸಾಲಿನಲ್ಲಿ 384 ಮಿಲಿಯನ್‌ ಲೀಥಿಯಂ ಬ್ಯಾಟರಿಗಳನ್ನು ಇತರೆ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ. 2019ರಲ್ಲಿ ಅದರ ಪ್ರಮಾಣ 1.2 ಬಿಲಿಯನ್‌ಗೆ ಏರಿಕೆಯಾಗಿದೆ. ಆದರೆ, ಇದೀಗ ಇಂಡಿಯಾದಲ್ಲೇ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದು ದೇಶದ ವಾಣಿಜ್ಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಪತ್ತೆಯಾಗಿರುವ ಲೀಥಿಯಂ ಪ್ರಮಾಣ ತೀರಾ ಕಡಮೆಯಾಗಿದ್ದರೂ ವಾಣಿಜ್ಯ ಕ್ಷೇತ್ರದ ಬೆಳವಣಿಗೆಗೆ ಇದು ಆಶಾದಾಯಕವಾಗಿರುವ ತೃಪ್ತಿಕರ ಸಂಗತಿ.

ಮಂಗಳೂರು ಗೋಲಿಬಾರ್: ಕಮಿಷನರ್ ಸೇರಿ 176 ಪೊಲೀಸರಿಗೆ ನೋಟಿಸ್

ಬ್ಯಾಟರಿಗೆ ಬಳಸುವ ಲೀಥಿಯಂ ನಿಕ್ಷೇಪ ಅಲ್ಲಾಪಟ್ಟಣ ಮತ್ತು ಮರಳಗಾಲ ವ್ಯಾಪ್ತಿಯ ಸುಮಾರು 150 ಎಕರೆಯಷ್ಟುಪ್ರದೇಶದಲ್ಲಿ ನಡೆಯುತ್ತಿರೋ ನಿಕ್ಷೇಪ ಶೋಧ ಕಾರ್ಯ. ಪ್ರಧಾನ ಮಂತ್ರಿ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸ್ತುತ್ತಿರೋ ಅಟಾಮಿಕ… ಮಿನರಲ್ಸ್‌ ಡೈರೆಕ್ಟರ್ಸ್‌ ವಿಜ್ಞಾನಿಗಳ ತಂಡ ಈ ಶೋಧನಾ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಒಂದಿಷ್ಟೂಮಾಹಿತಿ ವಿಜ್ಞಾನ ಗಳ ತಂಡ ಬಿಟ್ಟುಕೊಡುತ್ತಿಲ್ಲ.

ಈ ಕುರಿತಂತೆ ಹೆಸರು ಬಹಿರಂಗಪಡಿಸಲು ಬಯಸದ ಅಣು ಖನಿಜ ವಿಜ್ಞಾನಿಗಳು ಲೀಥಿಯಂ ಪತ್ತೆಯಾಗಿರುವುದು ನಿಜ. ಆದರೆ, ಲೋಹ ಪ್ರಮಾಣ ಕಡಿಮೆ ಇದೆ. ಇಷ್ಟೇ ಪ್ರಮಾಣದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುವುದಿಲ್ಲ. ಇನ್ನಷ್ಟುದಿನಗಳ ಕಾಲ ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದು ಹೇಳುತ್ತಾರೆ.

ಹಳಿ ದ್ವಿಗುಣ ಕಾಮಗಾರಿ: ಯಾವ್ಯಾವ ರೈಲುಗಳು ರದ್ದು..?

ಲೀಥಿಯಂ, ಕಾಗೆ ಬಂಗಾರ ಸೇರಿದಂತೆ ಹಲವು ಖನಿಜಗಳ ನಿಕ್ಷೇಪ ಹೊಂದಿರುವ ಈ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದು ಸಂತಸ. ಭಾರತದಲ್ಲೇ ಇದೇ ಮೊದಲ ಬಾರಿಗೆ ಅಪರೂಪದ ಲೀಥಿಯಂ ಪತ್ತೆಯಾಗಿದೆ. ಈ ಬಗ್ಗೆ ಇನ್ನಷ್ಟುಸಂಶೋಧನೆಗಳ ನಡೆದು ಖಚಿತ ಮಾಹಿತಿ ಹೊರ ಬೀಳಬೇಕಿದೆ ಎಂದು ಪಿಇಎಸ್‌ ಇಂಜನಿಯರಿಂಗ್‌ ಕಾಲೇಜಿನ ಭೂಗರ್ಭಶಾಸ್ತ್ರದ ವಿಭಾಗದ ಮುಖ್ಯಸ್ಥ ಪ್ರೊ.ಪ್ರಸನ್ನ ಕುಮಾರ್‌ ಹೇಳಿದ್ದಾರೆ.

Follow Us:
Download App:
  • android
  • ios