ಬೆಂಗಳೂರು(ಮಾ.26): ಕೆಎಸ್‌ಆರ್‌ಪಿ ಪೇದೆಯೊಬ್ಬರು ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿವಾಳದ ನಾಲ್ಕನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಕಚೇರಿಯಲ್ಲಿ ಇಂದು(ಗುರುವಾರ) ಬೆಳಿಗ್ಗೆ ನಡೆದಿದೆ. ಹುಚ್ಚೆಗೌಡ ಮೃತ ಪೇದೆಯಾಗಿದ್ದಾರೆ. 

ಪೇದೆ ಹುಚ್ಚೆಗೌಡ ಚೀಟಿ ವ್ಯವಹಾರದಲ್ಲಿ ಮೋಸ ಹೋಗಿದ್ದರು, ಹೀಗಾಗಿ ಮನೆಯಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪೇದೆ ಹುಚ್ಚೆಗೌಡ ಶೂಟ್ ಔಟ್ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. 

ಕಿಡ್ನಾಪ್ ಪ್ರಕರಣ: 8 ಮಂದಿ ನಕಲಿ ಪೊಲೀಸರ ಬಂಧನ!

ಹುಚ್ಚೆಗೌಡ ಅವರು ನಿನ್ನೆ(ಬುಧವಾರ) ರಾತ್ರಿ ಪಾಳೆಯದಲ್ಲಿದ್ದರು. ರಾತ್ರಿ ಮೂಗಿನಲ್ಲಿ ರಕ್ತಸ್ರಾವ ಹಿನ್ನೆಲೆಯಲ್ಲಿ ಅವರನ್  ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಬಳಿಕ ಆನ್ ಡ್ಯೂಟಿ‌ರೆಸ್ಟ್ ಮಾಡುತ್ತೇನೆಂದು ಹುಚ್ಚೆಗೌಡ ಹೇಳಿದ್ದರು. ಆದರೆ, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇಲಾಖೆಯ ವೆಪನ್ ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಮಡಿವಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.