ಹಾಡಿನ ಮೂಲಕ ರೈತರಿಗೆ ಪರಿಹಾರ ಬೇಡಿದ ಕೊಪ್ಪಳ ನೌಕರ

ಕೊಪ್ಪಳ ಜಿಲ್ಲೆಯಲ್ಲಿನ ಬರಗಾಲವನ್ನು ಹಾಡಿನ ಮೂಲಕ ವಿನೂತನವಾಗಿ ಶಿಕ್ಷಣ ಇಲಾಖೆಯ ನೌಕರರೊಬ್ಬರು ಹನುಮಂತಪ್ಪ ಕುರಿ ಹಾಡಿನ ಮೂಲಕ ಜಿಲ್ಲೆಯಲ್ಲಿನ ಬರಗಾಲದ ಕುರಿತು ವಿವರಿಸಿದ್ದಾರೆ.

First Published Aug 4, 2018, 1:50 PM IST | Last Updated Aug 4, 2018, 1:50 PM IST

ಹನುನಂತಪ್ಪ ಕುರಿ ಬರಗಾರಲದ ಬಗ್ಗೆ ಸ್ವತಃ ಹಾಡು ರಚಿಸಿ, ಸ್ವತಃ ತಾನೇ ಹಾಡಿದ್ದಾನೆ. ಹನುಮಂತಪ್ಪ ಕುರಿ ತಮ್ಮ ಹಾಡಿನಲ್ಲಿ ಸರಕಾರ ರೈತರಿಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದು,ರೈತರು ಎದೆಗುಂದದೆ ಆತ್ಮಹತ್ಯೆಗೆ ಶರಣಾಗದಂತೆ ಮನವಿ ಮಾಡಿದ್ದಾರೆ. ಇನ್ನು ಹನುಮಂತ ಕುರಿ ಈ‌ ಹಿಂದೆ ಇದೇ ರೀತಿ ವಿವಿಧ ಸಮಾಜಮುಖಿ ಗೀತೆಗಳ ರಚನೆ ಮಾಡಿದ್ದರು. ಇದೀಗ ಬರಗಾಲದ ಕುರಿತು ಹಾಡು ರಚಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಫುಲ್ ಫೇಮಸ್ ಆಗಿದ್ದು, ಹನುಮಂತಪ್ಪ ಕುರಿಯ ಬರಗಾಲದ ಹಾಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Video Top Stories