ವಿಜಯಪುರ(ಫೆ.17): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶತಾಯುಷಿ ಕನ್ನೋಳ್ಳಿ ಹಿರೇಮಠ ಸ್ವಾಮೀಜಿಗಳು(105) ಇಂದು ಬೆಳಗಿನ ಜಾವ(ಸೋಮವಾರ) ಲಿಂಗೈಕ್ಯರಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೋಳ್ಳಿ ಹಿರೇಮಠದ ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ಕಳೆದ ಕೆಲವು ದಿನಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಶ್ರೀಗಳು ನಡೆದಾಡುವ ದೇವರು, ಧನ್ವಂತರಿ ಎಂದೇ ಈ ಭಾಗದಲ್ಲಿ ಪ್ರಸಿದ್ಧಿಯಾಗಿದ್ದರು. ಇಂದು ಬೆಳಗಿನ ಜಾವ ಲಿಂಗಪೂಜೆ ವೇಳೆ ಸ್ವಾಮೀಜಿಗಳು ದೇಹ ತ್ಯಾಗ ಮಾಡಿದ್ದಾರೆ.

1915 ಜನಿಸಿದ್ದ ಮರುಳಾರಾಧ್ಯ ಶಿವಾಚಾರ್ಯ ಶ್ರೀಗಳು ಆಯುರ್ವೇದದಲ್ಲಿ ಪಂಡಿತರಾಗಿದ್ದರು. 1933 ರಲ್ಲಿ ಕನ್ನೋಳ್ಳಿ ಹಿರೇಮಠದ ಪಟ್ಟಾಧಿಕಾರತ್ವ ಸ್ವೀಕರಿಸಿದ್ದ ಶ್ರೀಗಳು ಹಲವು ಪವಾಡಗಳ ಮೂಲಕ ಪ್ರಸಿದ್ಧಿ ಪಡೆದಿದ್ದರು. ಶ್ರೀಗಳ ಅಗಲಿಕೆಗೆ ಭಕ್ತರು ಕಂಬನಿ ಮಿಡಿದಿದ್ದಾರೆ.