Asianet Suvarna News Asianet Suvarna News

ಕಾಡು ಸಮೃದ್ಧವಾದರೆ ಪ್ರಾಣಿ ಸಂರಕ್ಷಣೆ: ಶ್ರೀಮುರಳಿ

ಕಾಡು ಸಮೃದ್ದವಾಗಿದ್ದರೆ ಪ್ರಾಣಿ ಸಂರಕ್ಷಣೆ ಮಾಡಬಹುದು ಈ ನಿಟ್ಟಿನಲ್ಲಿ ಜನರು ಕೂಡ ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವನ್ಯಜೀವಿ ಸಂರಕ್ಷಣೆಯ ರಾಯಭಾರಿ ಹಾಗೂ ಚಲನಚಿತ್ರ ನಟ ಶ್ರೀಮುರಳಿ ಹೇಳಿದ್ದಾರೆ.

kannada actor srimurali participates in wildlife saving campaign
Author
Bangalore, First Published Dec 12, 2019, 10:21 AM IST

ಮೈಸೂರು(ಡಿ.12): ಕಾಡು ಸಮೃದ್ದವಾಗಿದ್ದರೆ ಪ್ರಾಣಿ ಸಂರಕ್ಷಣೆ ಮಾಡಬಹುದು ಈ ನಿಟ್ಟಿನಲ್ಲಿ ಜನರು ಕೂಡ ಕಾಡು ಮತ್ತು ವನ್ಯಜೀವಿಗಳ ಸಂರಕ್ಷಣೆ ಮಾಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವನ್ಯಜೀವಿ ಸಂರಕ್ಷಣೆಯ ರಾಯಭಾರಿ ಹಾಗೂ ಚಲನಚಿತ್ರ ನಟ ಶ್ರೀಮುರಳಿ ಹೇಳಿದ್ದಾರೆ.

ಹುಣಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಸಹಯೋಗದಲ್ಲಿ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಯಭಾರಿಯಾಗಿ ಮಾತನಾಡಿದ ಅವರು ಕಾಡು ಉಳಿಯಬೇಕು ಪ್ರಾಣಿಗಳ ಸಂರಕ್ಷಣೆಯಾಗಬೇಕು ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದಿದ್ದಾರೆ.

ಮುಂದಿನ ಚುನಾವಣೆ ಗೆಲ್ಲಲು ಪೌರತ್ವ ತಿದ್ದುಪಡಿ ತಂತ್ರ

ಅರಣ್ಯ ಸಂರಕ್ಷಣೆಯಲ್ಲಿ ಇಲಾಖೆಯೊಂದಿಗೆ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ಹಾಗೂ ಚಲನಚಿತ್ರ ತಂಡ ಸದಾ ಭಾಗಿಯಾಗುವ ಮೂಲಕ ಅರಣ್ಯ ಸಿಬ್ಬಂದಿ ಹಾಗೂ ವನ್ಯ ಜೀವಿ ಸಂರಕ್ಷಣೆಗೆ ಮುಂದಾಗುತ್ತಿವೆ ಎಂದರು.

ವನ್ಯ ಜೀವಿಯ ಸಂರಕ್ಷಣೆಯ ರಾಯಭಾರಿ ಹಾಗೂ ಚಲನಚಿತ್ರ ನಟಿ, ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು ಮಾತನಾಡಿ, ಅರಣ್ಯ ಸಿಬ್ಬಂದಿ ಕೆಲಸ ಅತ್ಯಂತ ಸವಾಲಿನಿಂದ ಕೂಡಿದೆ. ಅರಣ್ಯಸಂರಕ್ಷಣೆಯಲ್ಲಿ ಸರ್ಕಾರ ಸಾಕಷ್ಟುನೆರವು ನೀಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಮತ್ತು ಜನಪ್ರತಿನಿಧಿಗಳು ಕಾರ್ಯನ್ಮುಖರಾಗಬೇಕಿದೆ ಎಂದಿದ್ದಾರೆ.

ಹೊಸ ವರ್ಷಾಚರಣೆಗೆ ಪೂರ್ವಾನುಮತಿ ಕಡ್ಡಾಯ, ಷರತ್ತುಗಳೇನೇನು..?

ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮಾತನಾಡಿ, ಅರಣ್ಯ ಸಂರಕ್ಷಣೆ ಮಾಡಲು ಇಲಾಖೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಹೊಸ ಅವಿಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ಬೆಂಕಿ ನಂದಿಸುವ ಮತ್ತು ಕಳ್ಳಬೇಟೆ ಸೇರಿದಂತೆ ಪ್ರಾಣಿಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವಂತೆ ಮನವಿ ಮಾಡಿದ್ದಾರೆ.

ಶಾಸಕ ಅನಿಲ್‌ ಚಿಕ್ಕಮಾದು, ಕನ್ನಡಪ್ರಭ ಪ್ರಧಾನ ಪುರವಣಿ ಸಂಪಾದಕರಾದ ಜೋಗಿ, ಪತ್ರಕರ್ತ ವಿನೋದ್‌ಕುಮಾರ್‌ ನಾಯ್ಕ ಸೇರಿದಂತೆ ಹಲವರು ಇದ್ದರು.

Follow Us:
Download App:
  • android
  • ios